ಒಮಿಕ್ರಾನ್ ಸೋಂಕಿಗೆ ಇಸ್ರೆಲ್ ದೇಶದಲ್ಲಿ ಮೊದಲ ಬಲಿ…..
ಕರೋನ ವೈರಸ್ನ ಓಮಿಕ್ರಾನ್ ರೂಪಾಂತರದಿಂದ ಇಸ್ರೇಲ್ ದೇಶದಲ್ಲಿ ಮೊದಲ ಸಾವು ಸಂಭವಿಸಿದೆ ಇಸ್ರೇಲ್ ಆರೋಗ್ಯ ಅಧಿಕಾರಿಗಳು ವರದಿ ಮಾಡುತ್ತಿದ್ದಾರೆ.
ಬೀರ್‌ಶೆಬಾ ನಗರದಲ್ಲಿರುವ ಸೊರೊಕಾ ಆಸ್ಪತ್ರೆ, 60 ವರ್ಷದ ವ್ಯಕ್ತಿಯೊಬ್ಬರು ಆಸ್ಪತ್ರೆಗೆ ದಾಖಲಾದ ಎರಡು ವಾರಗಳ ನಂತರ ಸೋಮವಾರ ನಿಧನರಾಗಿದ್ದಾರೆ.
ಈ ಮೊದಲೇ ಆರೋಗ್ಯ ಸಮಸ್ಯೆಗಳಿಂದ ಬಳಲುತ್ತಿದ್ದರು ಎಂದು ಆಸ್ಪತ್ರೆಯ ವೈದ್ಯಾಧಿಕಾರಿಗಳು ಹೇಳಿದ್ದಾರೆ.ಆದರೆ ಹೆಚ್ಚಿನ ವಿವರಗಳನ್ನು ನೀಡಿಲ್ಲ.
ಇಸ್ರೇಲ್ ದೇಶದ ಒಳಗೆ ಮತ್ತು ಹೊರಗೆ ವಿಮಾನ ಸಂಚಾರಗಳನ್ನ ನಿರ್ಬಂಧಿಸಲಾಗಿದೆ. ಮತ್ತು ರೂಪಾಂತರದ ಹರಡುವಿಕೆಯನ್ನು ತಡೆಗಟ್ಟಲು ಸಾರ್ವಜನಿಕರ ಮೇಲೆ ಹಲವು ನಿರ್ಬಂಧಗಳನ್ನ ಹೇರಲಾಗುತ್ತಿದೆ.
ಹಿರಿಯ ನಾಗರಿಕರು ಮತ್ತು ಗಂಭೀರ ಕಾಯಿಲೆಗಳಿಂದ ಬಳಲುತ್ತಿರುವ ಜನರಿಗೆ ನಾಲ್ಕನೇ ಬೂಸ್ಟರ್ ಡೋಸ್ ಅನುಮೋದಿಸಲು ಆರೋಗ್ಯ ಅಧಿಕಾರಿಗಳಿಂದ ಅನುಮೋದನೆಗಾಗಿ ಕಾಯುತ್ತಿದ್ದೇನೆ ಎಂದು ಪ್ರಧಾನ ಮಂತ್ರಿ ನಫ್ತಾಲಿ ಬೆನೆಟ್ ಮಂಗಳವಾರ ತಿಳಿಸಿದ್ದಾರೆ.
ಈ ವರ್ಷದ ಆರಂಭದಲ್ಲಿ ತನ್ನ ಜನಸಂಖ್ಯೆಗೆ ವ್ಯಾಪಕವಾಗಿ ಲಸಿಕೆ ಹಾಕಿದ ಮೊದಲ ದೇಶಗಳಲ್ಲಿ ಇಸ್ರೇಲ್ ಒಂದಾಗಿದೆ ಮತ್ತು ಬೇಸಿಗೆಯಲ್ಲಿ ಬೂಸ್ಟರ್‌ಗಳನ್ನು ನೀಡುವ ಮೊದಲ ದೇಶವಾಗಿ ಇಸ್ರೇಲ್ ಗುರುತಿಸಿಕೊಂಡಿದೆ.
9.3 ಮಿಲಿಯನ್ ಜನರಿರುವ ಇಸ್ರೇಲ್, ಕೋವಿಡ್ -19 ನಿಂದ 8,200 ಕ್ಕೂ ಹೆಚ್ಚು ಸಾವುಗಳು ವರದಿ ಮಾಡಲಾಗಿದೆ.








