ಕಿಚ್ಚನ ಮುಂದಿನ ಸಿನಿಮಾಗೆ ಆಕ್ಷನ್ ಕಟ್ ಹೇಳ್ತಾರೆ ‘ಸಾಹೋ’ ಸಿನಿಮಾದ ಸಾರಥಿ..!
ಭಾರತ ಸಿನಿಮಾರಂಗದಲ್ಲಿ ಪ್ರಭಾವಿ ನಟರ ಪೈಕಿ ಒಬ್ರು ನಮ್ಮ ಕಿಚ್ಚ ಸುದೀಪ್.. ಎಲ್ಲಾ ಭಾಷೆಯಲ್ಲೂ ಅಭಿಮಾನಿಗಳನ್ನ ಹೊಂದಿದ್ದಾರೆ ಕಿಚ್ಚ.. ಸುದೀಪ್ ಸದ್ಯ ವಿಕ್ರಾಂತ್ ರೋಣ ರಿಲೀಸ್ ಗಾಗಿ ಕಾಯುತ್ತಿದ್ದಾರೆ.. ವಿಕ್ರಾಂತ್ ರೋಣ ಬಹುನಿರೀಕ್ಷೆಯ ಪ್ಯಾನ್ ಇಂಡಿಯಾ ಸಿನಿಮಾವಾಗಿದ್ದು ಫೆಬ್ರವರಿ 24 ಕ್ಕೆ ಸಿನಿಮಾ ರಿಲೀಸ್ ಆಗಲಿದೆ.. ಸಿನಿಮಾದ ಪ್ರಚಾರವನ್ನ ಜೋರು ಶೋರಾಗಿ ಆರಂಭಿಸಿದ್ದಾರೆ.. ಈ ನಡುವೆ ಕಿಚ್ಚನ ಅಭಿಮಾನಿಗಳಿಗೆ ಧಮಾಕೇದಾರ್ ನ್ಯೂಸ್ ಸಿಕ್ಕಿದ್ದು, ಅಭಿಮಾನಿಗಳ ಖುಷಿಯನ್ನ ಡಬಲ್ ಮಾಡಿದೆ.. ಹೌದು.. ಕಿಚ್ಚನ ಮುಂದಿನ ಸಿನಿಮಾ ಬಗ್ಗೆ ಖುದ್ದು ಸುದೀಪ್ ಅವರೇ ಅಪ್ ಡೇಟ್ ನೀಡಿದ್ದೂ ಅಲ್ದೇ ನಿರ್ದೇಶಕ ಯಾರೂ ಎಂಬ ವಿಚಾರವನ್ನೂ ರಿವೀಲ್ ಮಾಡಿದ್ದಾರೆ..
ಬಾಹುಬಲಿ ಖ್ಯಾತಿಯ ಪ್ರಭಾಸ್ ಅವರಿಗೆ ‘ಸಾಹೋ’ ಸಿನಿಮಾಗೆ ಆಕ್ಷನ್ ಕಟ್ ಹೇಳಿದ್ದ ಯುವ ನಟ ಸುಜಿತ್ ಜೊತೆಗೆ ಕಿಚ್ಚ ಸುದೀಪ್ ಅವರು ಮುಂದಿನ ಸಿನಿಮಾ ಮಾಡ್ತಿರುವುದಾಗಿ ಹಿಂದಿ ಮಾಧ್ಯವೊಂದರ ಸಂದರ್ಶನಲ್ಲಿ ಮಾಹಿತಿ ನೀಡಿದ್ದಾರೆ.. ಅಲ್ದೇ ಕಥೆಯ ವಿಚಾರವಾಗಿಯೂ ಈಗಾಗಲೇ ಚರ್ಚೆ ನಡೆಯುತ್ತಿದ್ದು , ಸಿನಿಮಾ ಮಾಡುವುದು ಬಹುತೇಕ ಕನ್ ಫರ್ಮ್ ಎಂದಿದ್ದಾರೆ.. ಅಂದ್ಹಾಗೆ ಸಾಹೋಗೂ ಮೊದಲು ಸುಜಿತ್ ಅವರು ಶರ್ವಾನಂದ್ ನಟನೆಯ ರನ್ ರಾಜಾ ರನ್ ಸಿನಿಮಾಗೆ ಆಕ್ಷನ್ ಕಟ್ ಹೇಳಿದ್ದರು.. ಸುಜಿತ್ ನಿರ್ದೇಶನದ ಎರಡೂ ಸಿನಿಮಾಗಳು ಹಿಟ್ ಆಗಿದ್ದವು..
ರಾಜಮೌಳಿ ವಿರುದ್ಧ ಸಿಟ್ಟಾಗಿದ್ಯಾಕೆ ‘ಭೀಮ್ಲಾನಾಯಕ’ನ ಫ್ಯಾನ್ಸ್..!
ಸುದೀಪ್ ಅವರು ವಿಕ್ರಾಂತ್ ರೋಣ ಬಳಿಕ ಉಪೇಂದ್ರ ಅವರ ಕಬ್ಜದಲ್ಲಿ ನಟಿಸಲಿದ್ದಾರೆ.. ಈ ಸಿನಿಮಾದಲ್ಲಿ ಸುದೀಪ್ ಅತಿಥಿ ಪಾತ್ರದಲ್ಲಿ ಬಹಳ ವಿಭಿನ್ನವಾದ ಅತಿಥಿ ಪಾತ್ರದಲ್ಲಿ ‘ಭಾರ್ಗವ ಭಕ್ಷಿಯಾಗಿ’ಯಾಗಿ ರೆಟ್ರೋ ಲುಕ್ ನಲ್ಲಿ ಅಭಿಮಾನಿಗಳಿಗೆ ದರ್ಶನ ನೀಡಲಿದ್ದಾರೆ.. ನಂತರ ಸಾಹೋ ನಿರ್ದೇಶಕನ ಜೊತೆಗೆ ಸಿನಿಮಾ ಮಾಡಲಿದ್ದಾರೆ.. ಆದ್ರೆ ಇನ್ನೂ ಕಿಚ್ಚ ಅವರು ಸಾಲು ಸಾಲು ಸಿನಿಮಾಗಳಲ್ಲಿ ಕಾಣಿಸಿಕೊಳ್ತಿದ್ದಾರೆ.. ಮುಖ್ಯವಾಗಿ ‘ಅಶ್ವತ್ಥಾಮ’ ಟೈಟಲ್ ನ ಸಿನಿಮಾದಲ್ಲಿ ಕಿಚ್ಚ ನಟಿಸುತ್ತಿದ್ದಾರೆ.. ವಿಶೇಷ ಅಂದ್ರೆ ಈ ಸಿನಿಮಾಗೂ ಕೂಡ ಅನೂಪ್ ಭಂಡಾರಿಯವರೇ ಆಕ್ಷನ್ ಕಟ್ ಹೇಳ್ತಿದ್ದಾರೆ.. ನಂತರ ಇನ್ನೂ ಅಧಿಕೃತವಾಗಿ ಘೋಷಣೆಯಾಗದ ಸಾಕಷ್ಟು ಸಿನಿಮಾಗಳಿವೆ..








