ಪ್ರಧಾನಿ ಕೈ ಸೇರಿದ ‘Those Eighteen Days’ ಕಾದಂಬರಿ : ನಾರಾಯಣಾಚಾರ್ಯರ ಆಸೆ ಈಡೇರಿಸಿದ ಜೋಶಿ Those Eighteen Days saaksha tv
ನವದೆಹಲಿ : ಮಹಾಭಾರತದ 18 ದಿನದ ಯುದ್ಧದ ಕುರಿತಾದ ಇಂಗ್ಲೀಷ್ ಕಾದಂಬರಿ ‘Those Eighteen Days’ ದ ಪ್ರತಿಯನ್ನು ಪ್ರಧಾನಿ ನರೇಂದ್ರ ಮೋದಿ ಅವರಿಗೆ ತಲುಪಿಸುವ ಮೂಲಕ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಅವರು ದಿ. ಪ್ರೊ.ಕೆ.ಎಸ್.ನಾರಾಯಣಾಚಾರ್ಯರ ಅವರ ಆಸೆಯನ್ನು ನೆರವೇರಿಸಿದ್ದಾರೆ.
ಇತ್ತೀಚಿಗೆ ಬೆಂಗಳೂರಿನಲ್ಲಿ ನಿಧನ ಹೊಂದಿದ ಪ್ರಖ್ಯಾತ ವಿದ್ವಾಂಸರು ಹಾಗೂ ಅನೇಕ ಪೌರಾಣಿಕ ಕಾದಂಬರಿಗಳ ರಚನಾಕಾರರಾಗಿದ್ದ ಪ್ರೊ.ಕೆ.ಎಸ್.ನಾರಾಯಣಾಚಾರ್ಯರ ಅವರ ನಿವಾಸಕ್ಕೆ ಪ್ರಹ್ಲಾದ್ ಜೋಶಿ ಅವರು ಭೇಟಿ ನೀಡಿದ್ದರು.
ಈ ವೇಳೆ ನಾರಾಯನಾಚಾರ್ಯ ಅವರ ಪುತ್ರ ಮತ್ತು ಅವರ ಮಡದಿ ಶ್ರೀ ನಾರಾಯಣಾಚಾರ್ಯರಿಂದ ರಚಿತವಾದ ಅವರ ಮಹಾಭಾರತದ 18 ದಿನದ ಯುದ್ಧದ ಕುರಿತಾದ ಇಂಗ್ಲೀಷ್ ಕಾದಂಬರಿ ‘Those Eighteen Days’ ದ ಪ್ರತಿಯನ್ನು ಪ್ರಧಾನಿ ನರೇಂದ್ರ ಮೋದಿ ಅವರಿಗೆ ತಲುಪಿಸುವದು ನಾರಾಯಣಾಚಾರ್ಯರ ಆಸೆಯಾಗಿತ್ತು ಎಂದು ಸಚಿವರಿಗೆ ತಿಳಿಸಿ ಪುಸ್ತಕವನ್ನು ನೀಡಿದ್ದರು.
ಆ ಪುಸ್ತಕವನ್ನು ನವದೆಹಲಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪ್ರಹ್ಲಾದ್ ಜೋಶಿ ಅವರು ಸಮರ್ಪಿಸಿದ್ದು ಮೋದಿಯವರು ಅದನ್ನು ಅತ್ಯಂತ ಅಭಿಮಾನದಿಂದ ಸ್ವೀಕರಿಸಿದ್ದಾರೆ.









