ಕೋಲಾರದಲ್ಲಿ ಕೊರೊನಾ ರಣಕೇಕೆ : 33 ವಿದ್ಯಾರ್ಥಿಗಳಿಗೆ ಸೋಂಕು corona saaksha tv
ಕೋಲಾರ : ಚಿನ್ನದ ನಾಡು ಕೋಲಾರದಲ್ಲಿ ಹೆಮ್ಮಾರಿ ಕೊರೊನಾ ಸೋಂಕು ರಣಕೇಕೆ ಹಾಕಿದೆ. ಕೋಲಾರದ ಕಾಲೇಜು ಒಂದರಲ್ಲಿ 33 ವಿದ್ಯಾರ್ಥಿಗಳಿಗೆ ಕೊರೊನಾ ಸೋಂಕಿರುವುದು ದೃಢಪಟ್ಟಿದೆ.
ಕೋಲಾರದ ದೇವರಾಜ ಅರಸ ಮೆಡಿಕಲ್ ಕಾಲೇಜಿನ 33 ವಿದ್ಯಾರ್ಥಿಗಳಿಗೆ ಕೊರೊನಾ ಸೋಂಕು ದೃಢಪಟ್ಟಿದೆ. ಸದ್ಯ ಕಾಲೇಜಿನ ಹಾಸ್ಟೆಲ್ ಅನ್ನು ಕಂಟೇನ್ಮೆಂಟ್ ಮಾಡಲಾಗಿದೆ.
ಈ ಬಗ್ಗೆ ಕೋಲಾರ ಜಿಲ್ಲಾ ಆರೋಗ್ಯ ಇಲಾಖೆ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಮೆಡಿಕಲ್ ಕಾಲೇಜಿನ 1105 ವಿದ್ಯಾರ್ಥಿಗಳಿಗೆ ಕೋವಿಡ್ ಟೆಸ್ಟ್ ಮಾಡಲಾಗಿತ್ತು. ಈ ಪೈಕಿ 33 ವಿದ್ಯಾರ್ಥಿಗಳಿಗೆ ಪಾಸಿಟೀವ್ ಬಂದಿದೆ.
ಸದ್ಯ ಕಾಲೇಜಿನ ಹಾಸ್ಟೆಲ್ಗಳನ್ನು ಕಂಟೋನ್ಮೆಂಟ್ ಝೋನ್ ಮಾಡಿ ವಿದ್ಯಾರ್ಥಿಗಳಿಗೆ ಕ್ವಾರಂಟೈನ್ ಮಾಡುವ ಮೂಲಕ ಚಿಕಿತ್ಸೆ ನೀಡಲಾಗುತ್ತಿದೆ.









