ಜನರೇ ಗಮನಿಸಿ | ಡಿ.28 ರಿಂದ ರಾಜ್ಯದಲ್ಲಿ 10 ದಿನ ನೈಟ್ ಕರ್ಫ್ಯೂ ಜಾರಿ Night Curfew saaksha tv
ಬೆಂಗಳೂರು : ರಾಜ್ಯದಲ್ಲಿ ಕೊರೊನಾ, ಒಮಿಕ್ರಾನ್ ಸೋಂಕಿಗೆ ಕಡಿವಾಣ ಹಾಕಲು ರಾಜ್ಯ ಸರ್ಕಾರ ಮತ್ತೆ ನೈಟ್ ಕರ್ಫ್ಯೂ ಮೊರೆ ಹೋಗಿದೆ.
ರಾಜ್ಯದಲ್ಲಿ ಮಂಗಳವಾರದಿಂದ 10 ದಿನಗಳ ಕಾಲ ನೈಟ್ ಕರ್ಫ್ಯೂ ಜಾರಿ ಮಾಡಿ ಆದೇಶ ಹೊರಡಿಸಿದೆ.
ಹೊಸ ವರ್ಷ ಹಿನ್ನೆಲೆಯಲ್ಲಿ ಸರ್ಕಾರ ಈ ನಿರ್ಧಾರ ತೆಗೆದುಕೊಂಡಿದ್ದು, ಹೊಸವರ್ಷಕ್ಕೆ ತಯಾರಾಗಿದ್ದ ಬಾರ್ ರೆಸ್ಟೋರೆಂಟ್ ಹೋಟೆಲ್ ಗಳಿಗೆ ಫುಲ್ ಶಾಕ್ ಆಗಿದೆ.
ಹೊಸವರ್ಷ ಹಿನ್ನೆಲೆ ಮುಖ್ಯಮಂತ್ರಿ ನೇತೃತ್ವದಲ್ಲಿ ಇಂದು ಸಭೆ ನಡೆಯಿತು. ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಡಾ.ಕೆ.ಸುಧಾಕರ್, ರಾಜ್ಯದಲ್ಲಿ ಡಿಸೆಂಬರ್ 28 ರಿಂದ 10 ದಿನಗಳ ಕಾಲ ನೈಜ್ ನೈಟ್ ಕರ್ಫ್ಯೂ ಜಾರಿ ಇರಲಿದೆ.
ಎಲ್ಲ ಸಂಭ್ರಮಾಚರಣೆ, ಕಾರ್ಯಕ್ರಮಗಳಿಗೆ ಸಂಪೂರ್ಣವಾಗಿ ನಿಷೇಧವನ್ನು ಹೇರಲಾಗಿದೆ.
ಪಬ್, ಬಾರ್, ರೇಸ್ಟೋರೆಂಟ್, ಹೋಟೆಲ್ ಎಲ್ಲವೂ ಬಂದ್ ಆಗಲಿದೆ.
ಎಲ್ಲಾ ಹೋಟೆಲ್ಗಳಲ್ಲಿ ಶೆ.50 ಮಾತ್ರ ಜನರಿಗೆ ಅವಕಾಶವನ್ನು ನೀಡಲಾಗಿದೆ ಎಂದು ಮಾಹಿತಿ ನೀಡಿದ್ದಾರೆ.
ಇನ್ನು ಹೊಸ ವರ್ಷ ಹಿನ್ನೆಲೆಯಲ್ಲಿ ಮಂಗಳವಾರ ರಾತ್ರಿ 10 ಗಂಟೆಯಿಂದಲೇ ಎಲ್ಲವೂ ಬಂದ್ ಆಗಲಿದೆ.
10 ಗಂಟೆಯಿಂದ ಬೆಳಗ್ಗೆ 5 ಗಂಟೆಯವರೆಗೂ ಎಲ್ಲಾ ಚವಟಿಕೆಗಳಿಗೂ ನಿರ್ಬಂಧವನ್ನು ಹೇರಲಾಗಿದೆ ಎಂದು ಸಚಿವರು ತಿಳಿಸಿದ್ದಾರೆ.









