ವೇಗದ ಬೌಲರ್‍ಗಳಿಗೆ ನಾನು ಹೆದರಲ್ಲ. ಹೆದರುವುದು ಇಲ್ಲ. ಕಳೆದ ಎಂಟು ವರ್ಷಗಳಿಂದ ಟೀಮ್ ಇಂಡಿಯಾ ಪರ ಆರಂಭಿಕ ಆಟಗಾರನಾಗಿ ಕಣಕ್ಕಿಳಿಯುತ್ತಿದ್ದೇನೆ. ಆದ್ರೆ ವೇಗದ ಬೌಲರ್‍ಗಳಿಗೆ ನಾನು ಯಾವತ್ತು ಹೆದರಿಕೊಂಡಿಲ್ಲ. ಹೆದರುವ ಅಗತ್ಯವೂ ನನಗಿಲ್ಲ. ಆದ್ರೆ ಮೊದಲ ಎಸೆತವನ್ನು ಎದುರಿಸುವುದು ನನಗೆ ಇಷ್ಟವಿಲ್ಲ. ಅದು ನನ್ನ ಮನಸ್ಥಿತಿ ಅಂತ ಹೇಳ್ತಾರೆ ಟೀಮ್ ಇಂಡಿಯಾ ಡ್ಯಾಶಿಂಗ್ ಓಪನರ್ ಶಿಖರ್ ಧವನ್.
ಹೌದು, ಇತ್ತೀಚೆಗೆ ರೋಹಿತ್ ಶರ್ಮಾ ಮತ್ತು ಡೇವಿಡ್ ವಾರ್ನರ್ ಇರ್ಫಾನ್ ಪಠಾನ್ ಅವರ ಇನ್‍ಸ್ಟಾಗ್ರಾಂ ಲೈವ್ ಕಾರ್ಯಕ್ರಮದಲ್ಲಿ ಧವನ್ ಅವರನ್ನು ಕಾಲೆಳೆದಿದ್ರು. ಐಪಿಎಲ್‍ನಲ್ಲಿ ಧವನ್, ಡೇವಿಡ್ ವಾರ್ನರ್ ಜೊತೆ ಇನಿಂಗ್ಸ್ ಆರಂಭಿಸಿದ್ದರು. ಟೀಮ್ ಇಂಡಿಯಾದಲ್ಲಿ ರೋಹಿತ್ ಜೊತೆ ಧವನ್ ಆರಂಭಿಕನಾಗಿ ಕಣಕ್ಕಿಳಿಯುತ್ತಿದ್ದಾರೆ.
ನನಗೆ ನೆನಪಿರುವಂತೆ ಹರ್ಭಜನ್ ಸಿಂಗ್ ಮೊದಲ ಓವರ್ ಎಸೆಯುವಾಗ ಧವನ್ ಸ್ಟ್ರೈಕ್‍ನಲ್ಲಿರುತ್ತಿದ್ದರು. ಅದನ್ನು ಬಿಟ್ರೆ ಧವನ್ ವೇಗದ ಬೌಲರ್‍ಗಳ ಮೊದಲ ಎಸೆತವನ್ನು ಎದುರಿಸುತ್ತಿರಲಿಲ್ಲ ಅಂತ ಡೇವಿಡ್ ವಾರ್ನರ್ ಹೇಳಿದ್ದಾರೆ. ಹಾಗೇ ರೋಹಿತ್ ಶರ್ಮಾ ಕೂಡ ಧವನ್ ಮೊದಲ ಎಸೆತವನ್ನು ಎದುರಿಸಲು ಧವನ್ ಹಿಂದೆ ಸರಿಯುತ್ತಿದ್ದ. ಆತ ಮೂರ್ಖ ಅಂತ ರೋಹಿತ್ ಹೇಳಿದ್ದಾರೆ.
ಇದಕ್ಕೆ ಪ್ರತಿಕ್ರಿಯೆ ನೀಡಿರುವ ಧವನ್, ಮೊದಲ ಎಸೆತವನ್ನು ಎದುರಿಸುತ್ತಿಲ್ಲ ಎಂಬುದನ್ನು ಒಪ್ಪಿಕೊಳ್ಳುತ್ತೇನೆ. ಹಾಗಂತ ಅದು ಹೆದರಿಕೆಯಿಂದಲ್ಲ. ಅದು ನನ್ನ ಮನಸ್ಥಿತಿ ಅಷ್ಟೇ. ಪ್ರತಿಯೊಬ್ಬರಿಗೂ ಅವರದ್ದೇ ಆದ ಮನಸ್ಥಿತಿ ಇರುತ್ತೆ. ಒಂದು ವೇಳೆ ನಾನು ಮೊದಲ ಎಸೆತವನ್ನು ಎದುರಿಸಲ್ಲ ಅಂದ್ರೂ ಕೂಡ ಮುಂದಿನ ಎಸೆತವನ್ನು ಎದುರಿಸಲೇಬೇಕು ಎಂದು ಹೇಳಿದ್ದಾರೆ.
ಒಂದಂತೂ ಸತ್ಯ, ಮೊದಲ ಎಸೆತವನ್ನು ಎದುರಿಸಲು ನನಗೆ ಇಷ್ಟವಿಲ್ಲ. ಒಂದು ವೇಳೆ ಪೃಥ್ವಿ ಶಾ ನಂತಹ ಯುವ ಆರಂಭಿಕರು ಮೊದಲ ಎಸೆತವನ್ನು ಎದುರಿಸಲು ಹಿಂದೆಟು ಹಾಕಿದಾಗ ನಾನು ಮೊದಲ ಎಸೆತವನ್ನು ಎದುರಿಸಲೇಬೇಕು. ಇನ್ನು 2013ರ ಚಾಂಪಿಯನ್ಸ್ ಟ್ರೋಫಿಯಲ್ಲಿ ನಾನು ಮತ್ತು ರೋಹಿತ್ ಶರ್ಮಾ ಟೀಮ್ ಇಂಡಿಯಾದ ಪರ ಇನಿಂಗ್ಸ್ ಆರಂಭಿಸಿದ್ದೇವು. ಆಗ ರೋಹಿತ್ ಬಳಿ ಸ್ಟ್ರೈಕ್ ತಗೋ ಅಂತ ಹೇಳಿದ್ದೆ. ಅಲ್ಲಿಂದ ಇಲ್ಲಿಯ ತನಕ ಆತನೇ ಸ್ಟ್ರೈಕ್ ತೆಗೆದುಕೊಳ್ಳುತ್ತಿದ್ದ. ಬದಲಾವಣೆ ಮಾಡಿಕೊಳ್ಳಬೇಕು ಅಂತ ಅನ್ನಿಸಿಲ್ಲ ಅಂತ ಹೇಳಿದ್ದಾರೆ. ‘ ಇದಕ್ಕೆ ಪ್ರತಿಕ್ರಿಯಿಸಿರುವ ಧವನ್,
ನಾಗೇಂದ್ರ ಸಂಪುಟಕ್ಕೆ ಸೇರಿಸಿಕೊಂಡಿದ್ದೇ ದೊಡ್ಡ ತಪ್ಪು: ನಾಗೇಂದ್ರರನ್ನು ಎರಡು ಬಾರಿ ಬಲಿಪಶು ಮಾಡಲಾಗಿದೆ- ಸ್ವಪಕ್ಷದ ನಿರ್ಧಾರದ ವಿರುದ್ಧವೇ ಗುಡುಗಿದ ಕೆ ಎನ್ ರಾಜಣ್ಣ
ಬೆಂಗಳೂರು: ಮಹರ್ಷಿ ವಾಲ್ಮೀಕಿ ಅಭಿವೃದ್ಧಿ ನಿಗಮದ ಬಹುಕೋಟಿ ಹಗರಣದ ಕಿಚ್ಚು ರಾಜ್ಯ ರಾಜಕಾರಣದಲ್ಲಿ ಇನ್ನೂ ಆರಿಲ್ಲ. ಇದರ ಬೆನ್ನಲ್ಲೇ ಸಚಿವ ಸ್ಥಾನಕ್ಕೆ ಬಿ. ನಾಗೇಂದ್ರ ಅವರು ಎರಡನೇ...








