ಜಾತ್ರೆಯಲ್ಲಿ ಪಟಾಕಿ ಸಿಡಿದು ರಥಕ್ಕೆ ಬೆಂಕಿ – ತಪ್ಪಿದ ಅನಾಹುತ…
ಜಾತ್ರೆಯಲ್ಲಿ ಪಟಾಕಿ ಸಿಡಿದು ರಥಕ್ಕೆ ಬೆಂಕಿ ತಗುಲಿರುವ ಘಟನೆ ಬೆಳಗಾವಿ ಜಿಲ್ಲೆ ರಾಮದುರ್ಗ ತಾಲೂಕಿನ ಶಿವಪೇಟೆ ಗ್ರಾಮದಲ್ಲಿ ನಡೆದಿದೆ. ಕೆಲ ಭಕ್ತರು ಸಿಡಿಸಿದ ಪಟಾಕಿಯ ಬೆಂಕಿಯ ಕಿಡಿ ರಥಕ್ಕೆ ತಗುಲಿತ್ತು. ಬೆಂಕಿ ತಗುಲಿತ್ತಿದ್ದಂತೆ ಎಚ್ಚೆತ್ತ ಗ್ರಾಮಸ್ಥರು ಬಟ್ಟೆಯಿಂದ ಆರಿಸಿದ್ದಾರೆ.
ಮಂಗಳವಾರ ಶಿವಪೇಟೆ ಗ್ರಾಮದಲ್ಲಿ ಜಡಿಶಂಕರಲಿಂಗ ದೇವರ ಜಾತ್ರೆ ಆಯೋಜನೆ ಮಾಡಲಾಗಿತ್ತು. ರಥೋತ್ಸವದ ವೇಳೆ ಭಕ್ತರು ಪಟಾಕಿ ಸಿಡಿಸಿದ್ದಾರೆ.. ಈ ವೇಳೆ ಕಿಡಿಯೊಂದು ರಥಕ್ಕೆ ತಗುಲಿ ಬೆಂಕಿ ಹೊತ್ತಿಕೊಂಡಿದೆ. ಸ್ಥಳಿಯರು ಬೆಂಕಿ ನಂದಿಸಿ ಹೆಚ್ಚಿನ ಅನಾಹುತ ತಪ್ಪಿಸಿದ್ದಾರೆ.
ರಥೋತ್ಸವದ ದಿನವೇ ಈ ರೀತಿ ಘಟನೆ ನಡೆದಿರುವುದು ಅಪಶಕುನ ಎಂದು ಗ್ರಾಮಸ್ತರು ಮಾತನಾಡಿಕೊಳ್ಳುತ್ತಿದ್ದಾರೆ.








