ದೇಗುಲಗಳು ಸ್ವತಂತ್ರ, ಕಾನೂನು ಕಟ್ಟಲೆಗಳಿಂದ ಮುಕ್ತಿ…..ಸಿ ಎಂ ಭರವಸೆ.
ಬೇರೆ ಧರ್ಮಗಳ ಮಂದಿರದಂತೆ ಹಿಂದೂ ಧರ್ಮದ ಮಂದಿರಗಳನ್ನ ಕಾನುನೂ ಕಟ್ಟಲೆಗಳಿಂದ ಮುಕ್ತಗೊಳಿಸಿ ಸ್ವತಂತ್ರ್ಯವಾಗಿ ಕಾರ್ಯ ನಿರ್ವಹಿಸುವಂತೆ ಮಾಡಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಅವರು ತಿಳಿಸಿದರು.
ಹುಬ್ಬಳ್ಳಿಯಲ್ಲಿ ನಡೆದ ಎರಡು ದಿನಗಳ ಬಿಜೆಪಿ ಕಾರ್ಯಕಾರಿಣಿ ಸಭೆಯಲ್ಲಿ ಮಾತನಾಡಿದ ಅವರು ಈ ವಿಷಯವನ್ನ ತಿಳಿಸಿದರು. ದೇವಾಲಯಗಳಿಗೆ ಬರುವ ಹಣವನ್ನ ಆಯಾ ದೇವಾಲಯಗಳ ಅಭಿವೃದ್ದಿಗೆ ಬಳಸಿಕೊಳ್ಳಲಾಗುವುದು ಎಂದು ತಿಳಿಸಿದರು. ಮುಂದಿನ ಬಜೆಟ್ ಅಧಿವೇಶನದ ಒಳಗೆ ಸ್ವತಂತ್ರ ಮಾಡುವ ಕಾರ್ಯ ಮಾಡುವುದಾಗಿ ತಿಳಿಸಿದರು.
ಮಂತಾಂತರ ನಿಷೇಧಾಜ್ಞೆ ಕಾನೂನನ್ನ ಜಾರಿಗೊಳಿಸಲು ವಿಶೇಷ ಟಾಸ್ಕ್ ಫೋರ್ಸ್ ರಚಿಸಲಾಗುವುದು. ಸೂರ್ಯ ಚಂದ್ರರಿರುವವರಗೂ ಈ ಕಾನೂನು ಗಟ್ಟಿಯಾಗಿರುವಂತೆ ಮಾಡಲಾಗುವುದು ಎಂದು ತಿಳಿಸಿದರು.
ಅಯೋಧ್ಯೆಯಲ್ಲಿ ರಾಮಜನ್ಮಭೂಮಿಯಂತೆ ಅಂಜನಾದ್ರಿ ಬೆಟ್ಟವನ್ನೂ ಅಭಿವೃದ್ಧಿ ಪಡಿಸಲಾಗುವುದು ಎಂದು ತಿಳಿಸಿದರು. ಅಂಜನಾದ್ರಿ ಅಭಿವೃದ್ಧಿಗೆ ಮಾಸ್ಟರ್ ಪ್ಲಾನ್ ರೂಪಿಸಲಾಗಿದೆ. ಕಾಮಗಾರಿಯನ್ನ ಪ್ರಧಾನಿ ನರೇಂದ್ರ ಮೋದಿ ಅವರ ಕೈಯಿಂದ ಚಾಲನೆ ಕೊಡಲಾಗುವುದು ಎಂದು ತಿಳಿಸಿದರು.
ಲಸಿಕೆ ತೆಗೆದುಕೊಳ್ಳಿ ಎಂದರೇ ಮರ ಹತ್ತಿ ನಿರಾಕರಿಸಿದ ಭೂಪ…
ಹಗಲಲ್ಲೇ ಬ್ಯಾಂಕ್ ಗೆ ನುಗ್ಗಿ ದರೋಡೆ , ಸಿಬ್ಬಂದಿಗೆ ಗುಂಡು ಹಾರಿಸಿದ ದುಷ್ಕರ್ಮಿಗಳು – VIDEO