ಇದು ಕೋವಿಡ್ ಕರ್ಫ್ಯೂ ಅಲ್ಲ.. ಬಿಜೆಪಿ ಕರ್ಫ್ಯೂ : ಡಿ.ಕೆ.ಶಿವಕುಮಾರ್
ಬೆಂಗಳೂರು : ಕೊರೊನಾ ವೈರಸ್ ತಡೆಗೆ ರಾಜ್ಯ ಬಿಜೆಪಿ ಸರ್ಕಾರ ಜಾರಿಗೊಳಿಸಿರುವ ಹಾಫ್ ಲಾಕ್ ಡೌನ್ ಬಗ್ಗೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಆಕ್ಷೇಪ ವ್ಯಕ್ತಪಡಿದ್ದಾರೆ.
ಇದು ಕೋವಿಡ್ ಕರ್ಫ್ಯೂ ಅಲ್ಲ, ಬಿಜೆಪಿ ಕರ್ಫ್ಯೂ. ಯಾವ ಟಫ್ ರೂಲ್ಸ್ ಅಲ್ಲಾ ಎಂದು ಡಿ.ಕೆ ಶಿವಕುಮಾರ್ ಹೇಳಿದ್ದಾರೆ.
ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಡಿ.ಕೆ.ಶಿವಕುಮಾರ್, ನಾವು ರ್ಯಾಾಲಿ ಮಾಡಲ್ಲ ಸಮಾವೇಶ ಮಾಡಲ್ಲ. ನೀರಿಗಾಗಿ ನಾವು ನಡೆಯುತ್ತೇವೆ.
ತಾಯಿ ಕಾವೇರಿ ನೀರು ಕುಡಿಯಬೇಕು ಅಂತ ನಡೆಯುತ್ತಿದ್ದೇವೆ ಎಂದು ಹೇಳುವ ಮೂಲಕ ಕಾಂಗ್ರೆಸ್ ಪಾದಯಾತ್ರೆ ನಿಲ್ಲುವುದಿಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ.
ಇನ್ನು ನಿಯಮ ಉಲ್ಲಂಘಿಸಿದ್ರೆ ಕೇಸ್ ಹಾಕುವ ಬಗ್ಗೆ ಮಾತನಾಡಿದ ಡಿ.ಕೆ.ಶಿವಕುಮಾರ್, ಮೊದಲು ನನ್ನ ಬ್ರದರ್ ಸುಧಾಕರ್ ಸ್ವಿಮ್ಮಿಂಗ್ ಪುಲ್ಲ್ಲಿ ಸ್ವಿಮ್ ಮಾಡಿದ್ನಲ್ಲ ಅವರ ಮೇಲೆ ಕೇಸು ಹಾಕಲಿ.
ಶ್ರೀರಾಮುಲು ಮೇಲೆ ಕೇಸು ಹಾಕಿ, ಮದುವೆಗೆ ಹೋದ ಯಡಿಯೂರಪ್ಪನ ಮೇಲೆ ಮೊದಲು ಕೇಸು ಹಾಕಿ. ಜನಾಶಿರ್ವಾದಯಾತ್ರೆ ಮಾಡಿದ್ರಲ್ಲ ಅವರ ಮೇಲೆ ಹಾಕಿ ಎಂದು ಆಕ್ರೋಶ ಹೊರಹಾಕಿದರು.









