11 ಭಾರಿ ಕೋವಿಡ್ ಲಸಿಕೆ ಹಾಕಿಸಿಕೊಂಡ ವೃದ್ಧ…..
ಕೋವಿಡ್ 19 ವ್ಯಾಕ್ಸಿನೇಷನ್ ಹಾಕಿಸಿಕೊಳ್ಳುವುದಕ್ಕೆ ಈಗಲೂ ಜನ ಹಿಂಜರಿಯುತ್ತಿದ್ದಾರೆ, ಎಷ್ಟೋ ಜನ ಕೋವಿಡ್ ಎರಡನೇ ಡೋಸ್ ಕೂಡ ಹಾಕಿಸಿಕೊಂಡಿಲ್ಲ ಆದ್ರೆ ಬಿಹಾರದ 80 ವರ್ಷದ ವೃದ್ಧರೊಬ್ಬರು ಬರೊಬ್ಬರಿ 11 ಭಾರಿ ವ್ಯಾಕ್ಸಿನ್ ಹಾಕಿಸಿಕೊಂಡು ಸುದ್ದಿಯಾಗಿದ್ದಾರೆ…
ಮಾಧೇಪುರ ಜಿಲ್ಲೆಯ ಉದಕಿಶುಂಗಂಜ್ ಉಪವಿಭಾಗದ ಪುರೈನಿ ಪೊಲೀಸ್ ಠಾಣೆಯ ಓರೈ ಗ್ರಾಮದ ನಿವಾಸಿ ಬ್ರಹ್ಮದೇವ್ ಮಂಡಲ್ ಅವರು 12 ನೇ ಡೋಸ್ ತೆಗೆದುಕೊಳ್ಳುವ ಮೊದಲು ಸಿಕ್ಕಿಬಿದ್ದಿದ್ದಾರೆ. ಇಷ್ಟು ಡೋಸ್‌ಗಳನ್ನು ಹೇಗೆ ತೆಗೆದುಕೊಂಡರು ಎಂಬುದನ್ನು ಕಂಡುಹಿಡಿಯಲು ವಿಷಯವನ್ನು ಕೂಲಂಕಷವಾಗಿ ತನಿಖೆ ಮಾಡಲಾಗುವುದು ಎಂದು ಮಾಧೇಪುರ ಜಿಲ್ಲೆಯ ಸಿವಿಲ್ ಸರ್ಜನ್ ಈಗ ಹೇಳಿದ್ದಾರೆ.
“ನಾನು ಲಸಿಕೆಯಿಂದ ಸಾಕಷ್ಟು ಪ್ರಯೋಜನ ಪಡೆದಿದ್ದೇನೆ. ಅದಕ್ಕಾಗಿಯೇ ನಾನು ಲಸಿಕೆ ಪದೇ ಪದೇ ತೆಗೆದುಕೊಳ್ಳುತ್ತಿದ್ದೇನೆ, ”ಎಂದು ವೃದ್ದ ಹೇಳಿದ್ದಾರೆ. ನಿವೃತ್ತ ಅಂಚೆ ಇಲಾಖೆಯ ಉದ್ಯೋಗಿಯಾಗಿರುವ ಮಂಡಲ್ ಅವರು ಕಳೆದ ವರ್ಷ ಫೆಬ್ರವರಿ 13 ರಂದು ತಮ್ಮ ಮೊದಲ ಲಸಿಕೆಯನ್ನು ತೆಗೆದುಕೊಂಡಿದ್ದಾರೆ. ಫೆಬ್ರವರಿ 13 ರಿಂದ ಡಿಸೆಂಬರ್ 30 ರ ನಡುವೆ 11 ಭಾರಿ ವ್ಯಾಕ್ಸಿನ್ ತೆಗೆದುಕೊಂಡಿದ್ದಾರೆ. ತನಗೆ ಲಸಿಕೆ ನೀಡಿದ ಸ್ಥಳ, ದಿನಾಂಕ ಮತ್ತು ಸಮಯವನ್ನು ಸಹ ಬರೆದಿಟ್ಟುಕೊಂಡಿದ್ದಾರೆ.
ಮೊದಲ ಡೋಸ್: ಫೆಬ್ರವರಿ 13, ಓಲ್ಡ್ PHC ನಲ್ಲಿ,
ಎರಡನೇ ಡೋಸ್: ಮಾರ್ಚ್ 13, ಮತ್ತೆ ಓಲ್ಡ್ PHC ನಲ್ಲಿ
ಮೂರನೇ ಡೋಸ್: ಮೇ 19, ಔರೈ ಉಪ-ಆರೋಗ್ಯ ಕೇಂದ್ರದಲ್ಲಿ
ನಾಲ್ಕನೇ ಡೋಸ್: ಜೂನ್ 16, ಶಿಬಿರದಲ್ಲಿ
ಐದನೇ ಡೋಸ್: ಜುಲೈ 24, ಬಡಿ ಹಾತ್ ಶಾಲೆಯ ಶಿಬಿರದಲ್ಲಿ
ಆರನೇ ಡೋಸ್: ಆಗಸ್ಟ್ 31, ನಾಥಬಾಬಾ ಶಿಬಿರದಲ್ಲಿ
ಏಳನೇ ಡೋಸ್: ಸೆಪ್ಟೆಂಬರ್ 11, ಮತ್ತೆ ಬಡಿ ಹಾತ್ ಶಾಲೆಯ ಶಿಬಿರದಲ್ಲಿ
ಎಂಟನೇ ಡೋಸ್: ಸೆಪ್ಟೆಂಬರ್ 22, ಬಡಿ ಹಾತ್ ಶಾಲೆಯಲ್ಲಿ,
ಒಂಬತ್ತನೇ ಡೋಸ್: ಸೆಪ್ಟೆಂಬರ್ 24, ಕಳಸಾನ ಆರೋಗ್ಯ ಉಪ ಕೇಂದ್ರದಲ್ಲಿ
ಹತ್ತನೇ ಡೋಸ್: ಖಗಾರಿಯಾ ಜಿಲ್ಲೆಯ ಪರ್ವತ
ಹನ್ನೊಂದನೇ ಡೋಸ್: ಭಾಗಲ್ಪುರದ ಕಹಲ್ಗಾಂವ್ನಲ್ಲಿ








