ಮುಂಬೈ : 16 ತಿಂಗಳ ಮಗಳ ಮೇಲೆ ತಂದೆಯೇ ಅತ್ಯಾಚಾರವೆಸಗಿ ಬಳಿಕ ಕತತ್ತು ಹಿಸುಕಿ ಕೊಲೆ ಮಾಡಿ ಶವವನ್ನ ರೈಲಿನಲ್ಲಿ ಸಾಗಿಸುತ್ತಿದ್ದ ವೇಳೆ ಸಿಕ್ಕಿಬಿದ್ದ ಘಟನೆಯು ಮಹಾರಾಷ್ಟ್ರದ ಸೊಲ್ಲಾಪುರ ರೈಲು ಮಾರ್ಗದಲ್ಲಿ ನಡೆದಿದೆ.. ಮಗುವಿನ ಮೃತದೇಹದೊಂದಿಗೆ ಪ್ರಯಾಣಿಸುತ್ತಿದ್ದಾಗ ಸೊಲ್ಲಾಪುರದಲ್ಲಿ ರೈಲ್ವೇ ಪೊಲೀಸರು ಅವರನ್ನ ಬಂಧಿಸಿದ್ದಾರೆ..
ಮಗುವಿನ 26 ವರ್ಷದ ತಂದೆ ಜನವರಿ 3 ರಂದು ಸಿಕಂದರಾಬಾದ್ನಲ್ಲಿರುವ ತಮ್ಮ ಮನೆಯಲ್ಲಿ ಲೈಂಗಿಕ ಕಿರುಕುಳ ನೀಡಿ ಮಗುವನ್ನು ಕತ್ತು ಹಿಸುಕಿ ಕೊಂದಿದ್ದಾನೆ. ಗುರುವಾರ ಸೊಲ್ಲಾಪುರ ನಿಲ್ದಾಣದಲ್ಲಿ ಗುಜರಾತ್ಗೆ ಹೋಗುವ ರೈಲಿನಲ್ಲಿ ತನ್ನ ಪತ್ನಿ , ಮಗ ಹಾಗೂ ಮೃತ ಮಗಳ ದೇಹದ ಜೊತೆಗೆ ಪ್ರಯಾಣಿಸುತ್ತಿದ್ದಾಗ ಸುಮಾರು 6 ಗಂಟೆಗಳಾಗಿದ್ರೂ ಮಗುವಿನ ದೇಹದಲ್ಲಿ ಚಲನವಲನಗಳು ಕಂಡಬರದ ಹಿನ್ನೆಲೆ ಪ್ರಯಾಣಿಕರು ಅನುಮಾನಗೊಂಡು ಪೊಲೀಸರಿಗೆ ಮಾಹಿತಿ ನೀಡಿದ ನಂತರ ಅವರನ್ನ ಪೊಲೀಸರು ಬಂಧಿಸಿದ್ದಾರೆ.. ತನಿಖೆ ವೇಳೆ ಮಗುವಿನ ತಾಯಿ ಕೂಡ ಅಪರಾಧಕ್ಕೆ ಸಾಥ್ ನೀಡಿದ್ದು ತಿಳಿದುಬಂದಿದೆ..
ಇಬ್ಬರನ್ನು ರೈಲ್ವೆ ಪೊಲಿಸರು ಬಂಧಿಸಿದ್ದಾರೆ .. ಈ ಆರೋಪಿಗಳು ತೆಲಂಗಾಣದ ಸಿಕಂದರಾಬಾದ್ ನಗರದಿಂದ ರಾಜ್ಕೋಟ್ಗೆ ಹೋಗುವ ರೈಲಿನಲ್ಲಿ ಪ್ರಯಾಣಿಸುತ್ತಿದ್ದರು. ಮಗುವಿನ ಮೃತದೇಹವನ್ನು ತಮ್ಮ ಊರಿಗೆ ಕೊಂಡೊಯ್ಯುತ್ತಿದ್ದರು ಎಂದು ತಿಳಿದುಬಂದಿದೆ. ದಂಪತಿ ವಿರುದ್ಧ ಪೋಕ್ಸೊ ಕಾಯ್ದೆಯಡಿ ಸೊಲ್ಲಾಪುರ ರೈಲ್ವೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.








