ಇಂದಿನಿಂದ ಬೂಸ್ಟರ್ ಡೋಸ್ ಲಸಿಕೆಗೆ ಸಿಎಂ ಚಾಲನೆ…
60 ವರ್ಷ ಮೇಲ್ಪಟ್ಟವರು ಮತ್ತು ಮುಂಚೂಣಿಯಲ್ಲಿರುವ ಕಾರ್ಯಕರ್ತರಿಗೆ ಇಂದಿನಿಂದ ಪ್ರಿಕಾಷನ್ ಡೋಸ್ ಅಥವಾ ಬೂಸ್ಟರ್ ಡೋಸ್ ಗೆ ನೀಡಲು ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಚಾಲನೆ ನಿಡಿದರು.
ಆರೋಗ್ಯ ಮತ್ತು ಕುಟುಂಬ ಕಲ್ಯಾಣಂ ಇಲಾಖೆಯಿಂದ ಶಿವಾಜಿ ನಗರದಲ್ಲಿರುವ ಅಟಲ್ ಬಿಹಾರಿ ವಾಜಪೇಯ್ ವೈದ್ಯಕೀಯ ಕಾಲೇಜಿನ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಅವರು ಬೂಸ್ಟರ್ ಡೋಸ್ ಲಸಿಕಾ ಅಭಿಯಾನಕ್ಕೆ ಚಾಲನೆ ನೀಡಿದರು.
ದೇಶಾದ್ಯಂತ ಈಗಾಗಲೇ 15 – 18 ವರ್ಷದ ಳಗಿನವರಿಗೆ ಕೋವಿಡ್ ಲಸಿಕೆ ನೀಡಲಾಗುತ್ತಿದೆ. ಒಮಿಕ್ರಾನ್ ಸೋಂಕು ತಡೆಗಟ್ಟಲು ಬೂಸ್ಟರ್ ಡೋಸ್ ನ ಅವಶ್ಯಕತೆ ಇದೆ ಎಂದು ತಜ್ಞರು ಅಭಿಪ್ರಾಯ ಪಟ್ಟಿದ್ದಾರೆ.
ಬೂಸ್ಟರ್ ಡೋಸ್ ಗಾಗಲಿ ಕೋವಿನ್ ವೆಬ್ ಸೈಟ್ ನಲ್ಲಿ ನೊಂದಾಣಿ ಆರಂಭವಾಗಿದೆ. 3ನೇ ಡೋಸ್ ಪಡೆಯಲು ಕೋವಿನ್ ವೆಬ್ ಸೈಟ್ ನಲ್ಲಿ ನೊಂದಾಯಿಸಿದಂತೆ ಎರಡು ಡೋಸ್ ಲಸಿಕೆ ಪಡೆದಿರಬೇಕು . 2ನೇ ಡೋಸ್ ಪಡೆದು 39 ವಾರಗಳು ಅಥವಾ 9 ತಿಂಗಳು ಕಳೆದಿರಬೇಕು. ಕಳೆದ ಎರಡು ಡೋಸ್ ನಲ್ಲಿ ಯಾವ ಲಸಿಕೆ ಪಡೆಯಲಾಗಿತ್ತೋ ಅದೇ ಲಸಿಕೆಯನ್ನ ಮೂರನೇ ಡೋಸ್ ನಲ್ಲಿ ನೀಡಲಾಗುತ್ತದೆ.
ಸರ್ಕಾರದ ಎಲ್ಲಾ ಆರೋಗ್ಯ ಕೇಂದ್ರಗಳಲ್ಲಿ ಬೂಸ್ಟರ್ ಡೋಸ್ ಲಭ್ಯವಿರುತ್ತದೆ. ಪಾಲಿಕೆ ವ್ಯಾಪ್ತಿಯ ಪ್ರಾಥಮಿಕ ಆರೋಗ್ಯ ಕೇಂದ್ರ ಸಹ ಲಸಿಕೆ ಸಿಗಲಿದೆ.
ನ್ಯೂಯಾರ್ಕ್ ಅಪಾರ್ಟ್ಮೆಂಟ್ ನಲ್ಲಿ ಬೆಂಕಿ – ಮಕ್ಕಳು ಸೇರಿ 19 ಜನ ಸಜೀವ ದಹನ