ದೇಶದಲ್ಲಿ ಕೊರೊನಾ ಅಟ್ಟಹಾನ ಮುಂದುವರಿದಿದೆ.. ದಿನದಿಂದ ದಿನಕ್ಕೆ ಕೊರೊನಾ ಸೋಂಕು ಪ್ರಕರಣಗಳು ಹೆಚ್ಚಾಗುತ್ತಿವೆ. ಇದರ ಮಧ್ಯೆ ಸೋಂಕಿನಿಂದ ಗುಣಮುಖರಾಗುತ್ತಿರುವ ಸಂಖ್ಯೆಯೂ ಗಣನೀಯ ಪ್ರಮಾಣದಲ್ಲಿ ಏರಿಕೆ ಕಾಣುತ್ತಿದೆ. ಹೀಗೆ ಕೊರೊನಾ ವಿರುದ್ಧ ಹೋರಾಡಿ ಸೋಂಕಿನಿಂದ ಗೆದ್ದವರಿಗೆ ಖುಷಿಯಿಂದ ಆಸ್ಪತ್ರೆ ಸಿಬ್ಬಂದಿ ಬೀಳ್ಕೊಡುತ್ತಿದ್ದಾರೆ.
“हम मोदी को मारेंगे"
ये बोल 6 साल के उस बच्चे के हैं जो अपने परिवार और रिश्तेदारों के साथ 13 मई को कोरोना से जंग जीतकर इंदौर के इंडेक्स मेडिकल कॉलेज के अस्पताल से घर वापस जा रहा था। सवाल यह है कि इस छोटे से मासूम बच्चे के जहन में आखिर ये जहर भरा किसने? pic.twitter.com/D8vlt1Ny35
— Amit Malviya (@amitmalviya) May 15, 2020
ಅದರಂತೆ ಇಂದೋರ್ನ ಇಂಡೆಕ್ಸ್ ಮೆಡಿಕಲ್ ಕಾಲೇಜು ಆಸ್ಪತ್ರೆಯಲ್ಲಿ ಕೊರೊನಾದ ವಿರುದ್ಧ ಹೋರಾಡಿ ಗೆದ್ದಿರುವ ಕುಟುಂಬವೊಂದರ ಸದಸ್ಯರಿಗೆ ಆಸ್ಪತ್ರೆ ಬೀಳ್ಕೊಡಿಗೆ ನೀಡಿದೆ. ಈ ಸಂದರ್ಭದಲ್ಲಿ ಆರು ವರ್ಷದ ಬಾಲಕನೊಬ್ಬ ಹಮ್ ಮೋದಿ ಕೋ ಮಾರೇಂಗೆ ಎಂದು ಹೇಳಿದ್ದಾನೆ. ಆಸ್ಪತ್ರೆ ಬಳಿ ಈ ಬಾಲಕ ಮೋದಿಯನ್ನು ಕೊಲ್ಲುತ್ತೇವೆ ಎಂದು ಹೇಳುವುದನ್ನು ಕೇಳಿದ ಅಲ್ಲಿದ್ದ ಮಂದಿ ಶಾಕ್ ಆಗಿದ್ದಾರೆ. ಸದ್ಯ ಈ ಬಾಲಕನ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ವೈರಲ್ ಆಗಿದೆ.
ಇನ್ನು ವಿಡಿಯೋ ಬಗ್ಗೆ ಮಾಹಿತಿ ತಂತ್ರಜ್ಞಾನ ವಿಭಾಗದ ಮುಖ್ಯಸ್ಥ ಅಮಿತ್ ಮಾಳವೀಯ ಟ್ವಿಟ್ಟರ್ ನಲ್ಲಿ ಪ್ರತಿಕ್ರಿಯೆ ನೀಡಿದ್ದು, ಈ ಪುಟ್ಟ ಮಗುವಿನ ಮನಸ್ಸಲ್ಲಿ ಯಾರು ಈ ರೀತಿ ಕೆಟ್ಟ ಅಭಿಪ್ರಾಯ ಬಿತ್ತಿದ್ದಾರೆ. ಇಂತಹ ಮಾತು ಆಡಲು ಪ್ರೇರಣೆ ಏನು ಎಂದು ಪ್ರಶ್ನೆ ಮಾಡಿದ್ದಾರೆ.








