ಬಾಗಲಕೋಟೆ : ಕ್ವಾರಂಟೈನ್ ಗೆ ಭಯಪಟ್ಟು ವ್ಯಕ್ತಿಯೊಬ್ಬ ವಿಷ ಸೇವಿಸಿ ಆತ್ಮಹತ್ಯೆಗೆ ಮುಂದಾದ ಘಟನೆ ಬಾಗಲಕೋಟೆ ಜಿಲ್ಲೆ ಮುಧೋಳ ತಾಲ್ಲೂಕಿನ ಚಿಕ್ಕೂರ ಗ್ರಾಮದಲ್ಲಿ ನಡೆದಿದೆ. ಪಕ್ಕದ ಮಹಾರಾಷ್ಟ್ರದ ರತ್ನಗಿರಿಯಿಂದ ನಿನ್ನೆರಾತ್ರಿ ಊರಿಗೆ ಬಂದಿದ್ದ, ಬೆಳಿಗ್ಗೆ ವಿಷಯ ತಿಳಿದು ಆಶಾ ಕಾರ್ಯಕರ್ತೆಯರು, ಪಂಚಾಯಿತಿಯವರು ಕ್ವಾರಂಟೈನ್ ಗೆ ಸೂಚಿಸಿದ್ದರು. ಕ್ವಾರಂಟೈನ್ ಒಳಗಾಗಲು ನಿರಾಕರಿಸಿದ್ದ ಎನ್ನಲಾಗ್ತಿದೆ. ಈ ವೇಳೆ 14 ದಿನ ಕ್ವಾರಂಟೈನ್ ಗೆ ಇರಬೇಕು ಎಂದು ಅಧಿಕಾರಿಗಳು ಸೂಚಿಸಿದ್ದರು. ಇಲ್ಲವಾದಲ್ಲಿ ನಿನ್ನ ಸ್ವಂತ ಊರಿಗೆ ತೆರಳುವಂತೆ ಸಲಹೆ ನೀಡಿದ್ರು. ಇದಕ್ಕೆ ಹೆದರಿದ 40 ವಯಸ್ಸಿನ ವ್ಯಕ್ತಿ ತಾನು ವಾಸವಿದ್ದ ಗುಡಿಸಲಿಗೆ ಹೋಗಿ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನ ಮಾಡಿದ್ದಾನೆ. ಸದ್ಯ ಬಾಗಲಕೋಟೆ ಖಾಸಗಿ ಆಸ್ಪತ್ರೆಯಲ್ಲಿ ಆತ್ಮಹತ್ಯೆಗೆ ಯತ್ನಿಸಿದ ವ್ಯಕ್ತಿಯನ್ನು ಚಿಕಿತ್ಸೆಗಾಗಿ ದಾಖಲು ಮಾಡಲಾಗಿದೆ. ಇನ್ನು ವಿಷ ಸೇವಿಸಿದ ವ್ಯಕ್ತಿ ಮೂಲತಃ ಯಾದಗಿರಿ ಜಿಲ್ಲೆ ಜುಮಲಾಪುರ ತಾಂಡಾದವರು. ಕೆಲ ವರ್ಷಗಳಿಂದ ಚಿಕ್ಕೂರು ಗ್ರಾಮದಲ್ಲಿ ಕೃಷಿ ಕೆಲಸ ಮಾಡಿಕೊಂಡಿದ್ದ ಎಂದು ತಿಳಿದು ಬಂದಿದೆ…..
ಸ್ಯಾಂಡಲ್‌ವುಡ್ ಇತಿಹಾಸದಲ್ಲೇ ಅತ್ಯಂತ ದುಬಾರಿ ಕ್ಯಾರವನ್ ಮಾಲೀಕರಾದ ಬಾದ್‌ಷಾ ಕಿಚ್ಚ ಸುದೀಪ್
ಕನ್ನಡ ಚಿತ್ರರಂಗದ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಅವರ ವಾಹನ ಪ್ರೇಮ ಇಡೀ ದೇಶಕ್ಕೇ ಗೊತ್ತು. ಅವರ ಬಳಿ ಇರುವ ಐಷಾರಾಮಿ ಕಾರುಗಳ ಸಾಲಿಗೆ ಈಗ ವಿಮಾನದಂತಹ...








