ಸಂಕ್ರಾಂತಿ ದಿನವೇ ಭೀಕರ ಅಪಘಾತ , ಜಗಳೂರು ಬಳಿ 7 ಮಂದಿ ಸಾವು.
ಮಕರ ಸಂಕ್ರಾಂತಿ ದಿನದ ಬೆಳ್ಳಂ ಬೆಳಿಗ್ಗೆಯೆ ರಾಜ್ಯದಲ್ಲಿ ಅಪಘಾತ ಸಂಭವಿಸಿದ್ದು 7 ಮಂದಿ ಸಾವನ್ನಪ್ಪಿರು ಘಟನೆ ದಾವಣೆಗೆರೆ ಜಿಲ್ಲೆ ಜಗಳೂರು ತಾಲೂಕಿನಲ್ಲಿ ನಡೆದಿದೆ.
ಜಗಳೂರು ತಾಲೂಕಿನಲ್ಲಿ ಬರುವ ರಾಷ್ಟ್ರೀಯ ಹೆದ್ದಾರಿ 13 ರಲ್ಲಿ ಕಾನನಕಟ್ಟೆ ಟೋಲ್ ಹತ್ತಿರ ಇಂಡಿಕಾ ಕಾರೊಂದು ರಸ್ತೆ ವಿಭಜಕಕ್ಕೆ ಡಿಕ್ಕಿಹೊಡೆದು ಬೀಕರ ಅಫಾಘತ ಸಂಭವಿಸಿದೆ.
ಕಾರಿನ ಚಾಲಕ ಮಧ್ಯ ಸೇವಿಸಿ ಗಾಡಿ ಚಲಾಯಿಸಿದ್ದರಿಂದ ಅಪಘಾತ ಸಂಭವಿಸಿದೆ ಎಂದು ದಾವಣಗೆರೆ ಎಸ್ ಪಿ ರಿಶ್ಯಾಂತ್ ಹೇಳಿಕೆ ನೀಡಿದ್ದಾರೆ. ವೇಗಗಾಗಿ ಗಾಡಿ ಚಲಾಯಿಸಿದ್ದರಿಂದ ಕಾರು ನಿಯಂತ್ರಣಕ್ಕೆ ಸಿಗದೆ ಡಿವೈಡರ್ ಗೆ ಗುದ್ದಿದ ಪರಿಣಾಮ 7 ಜನ ಅಸುನೀಗಿದ್ದಾರೆ.
ಮೃತಪಟ್ಟವರಲ್ಲಿ ಯಾದಗಿರಿಯ ಶಾಹಪುರ ತಾಲೂಕಿನ ನಾಲ್ಕು ಮಂದಿ, ವಿಜಯನಗರ ಜಿಲ್ಲೆಯ ಕೂಡ್ಲಿಗಿ ತಾಲೂಕಿನ ಇಬ್ಬರು ನಿವಾಸಿಗಳು, ಮತ್ತೊಬ್ಬ ವಿಜಯಪುರ ಜಿಲ್ಲೆಯ ತಾಳಿಕೋಟೆ ನಿವಾಸಿ ಎಂದು ಗುರುತಿಸಲಾಗಿದೆ.