ಗುವಾಹಟಿ – ಬಿಕಾನೆರ್  ರೈಲು ದುರಂತ, 9 ಮಂದಿ ಸಾವು 42 ಮಂದಿಗೆ ಗಾಯ

1 min read

ಗುವಾಹಟಿ – ಬಿಕಾನೆರ್  ರೈಲು ದುರಂತ, 9 ಮಂದಿ ಸಾವು 42 ಮಂದಿಗೆ ಗಾಯ

ಪಶ್ಚಿಮ ಬಂಗಾಳದ ಜಲ್ಪೈಗುರಿಯಲ್ಲಿ ಗುರುವಾರ ಸಂಜೆ 5 ಗಂಟೆಗೆ ರೈಲು ಅಫಘಾತದಲ್ಲಿ 9 ಮಂದಿ ಸಾವನ್ನಪ್ಪಿದ್ದು, 42 ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ.  ರೈಲು ಹಳಿ ತಪ್ಪಿದ್ದರಿಂದ  ಬಹುದೊಡ್ಡ ಅಪಘಾತ ಸಂಭವಿಸಿದೆ. ಗುವಾಹಟಿಗೆ ಹೊರಟಿದ್ದ ಬಿಕಾನೆರ್ ಎಕ್ಸ್‌ಪ್ರೆಸ್‌ ರೈಲಿನ ನಾಲ್ಕರಿಂದ ಐದು ಬೋಗಿಗಳು ಪಶ್ಚಿಮ ಬಂಗಾಳದ ಕೂಚ್ ಬೆಹಾರ್ ಮತ್ತು ಜಲ್ಪೈಗುರಿ ನಡುವೆ ಹಳಿತಪ್ಪಿವೆ.

ಸ್ಥಳದಲ್ಲೇ 200ಕ್ಕೂ ಹೆಚ್ಚು ಬಿಎಸ್ ಎಫ್  ರಕ್ಷಣಾ ಪಡೆಗಳು ಕಾರ್ಯಾಚರಣೆಯಲ್ಲಿ ತೊಡಗಿಸಿಕೊಂಡಿವೆ. ರೈಲ್ವೆ ಮಂತ್ರಿ   ಅಶ್ವಿನ್ ವೈಷ್ಣವ್ ಅವರ ಮೂಲಕ ಪ್ರಧಾನಿ ನರೇಂದ್ರ ಮೋದಿ ಅಫಘಾತದ ಬಗ್ಗೆ ಮಾಹಿತಿ ಪಡೆದುಕೊಂಡಿದ್ದಾರೆ.

 ಇನ್ನೂ ದುರ್ಘಟನೆಯಲ್ಲಿ ಮೃತಪಟ್ಟವರ ಕುಟುಂಬಕ್ಕೆ ಕೇಂದ್ರ ಸರ್ಕಾರ ತಲಾ 5 ಲಕ್ಷ  ರೂ ಪರಿಹಾರ ನೀಡಿದೆ. ಗಂಭೀರವಾಗಿ ಗಾಯಗೊಂಡವರಿಗೆ 1 ಲಕ್ಷ ರೂ,  ಸಣ್ಣಪುಟ್ಟ ಗಾಯಗಳಾದವರಿಗೆ 25 ಸಾವಿರ ರೂಗಳನ್ನ  ರೈಲ್ವೆ ಇಲಾಖೆ ಘೋಷಿಸಿದೆ.

 15633 ಸಂಖ್ಯೆಯ ರೈಲು  ಬಿಕಾನೇರ್ ಎಕ್ಸ್‌ಪ್ರೆಸ್,  ಮಂಗಳವಾರ ರಾತ್ರಿ ರಾಜಸ್ಥಾನದ ಬಿಕಾನೇರ್‌ನಿಂದ ಹೊರಟಿತ್ತು. ಗುರುವಾರ ಬೆಳಗ್ಗೆ 5.44ಕ್ಕೆ ಪಾಟ್ನಾ ರೈಲು ನಿಲ್ದಾಣದಿಂದ ಹೊರಟ ರೈಲು ಮಧ್ಯಾಹ್ನ 2.32ಕ್ಕೆ ಕಿಶನ್‌ಗಂಜ್ ತಲುಪಿ ಅಲ್ಲಿಂದ ಗುವಾಹಟಿಗೆ ಹೊರಟಿತು. ಭಾರತೀಯ ರೈಲ್ವೇ ಸಹಾಯವಾಣಿ ಸಂಖ್ಯೆ 8134054999 ಅನ್ನು ಬಿಡುಗಡೆ ಮಾಡಿದೆ. ನೊಂದ ಪ್ರಯಾಣಿಕರೊಬ್ಬರು ಎಎನ್‌ಐ ಸುದ್ದಿಸಂಸ್ಥೆಗೆ, “ಹಠಾತ್ ಜರ್ಕ್ ನೊಂದಿಗೆ ಅಪಘಾತ ಸಂಭವಿಸಿದೆ ಮತ್ತು ರೈಲಿನ ಬೋಗಿ ಪಲ್ಟಿಯಾಗಿದೆ. ರೈಲಿನ 2-4 ಬೋಗಿಗಳು ಸಂಪೂರ್ಣವಾಗಿ ಹಾನಿಗೊಳಗಾಗಿವೆ.” ಎಂದು ತಿಳಿಸಿದ್ದಾನೆ.

Leave a Reply

Your email address will not be published. Required fields are marked *

YOU MUST READ

Copyright © All rights reserved | SaakshaTV | JustInit DigiTech Pvt Ltd