ಪಲ್ಟನ್ಸ್ ವಿರುದ್ಧ ಗೆದ್ದು ಬೀಗಿದ ಯೋಧಾ..!
ಪ್ರೊ ಕಬಡ್ಡಿ ಲೀಗ್ ನ ಪಂದ್ಯದಲ್ಲಿ ಸೋಮವಾರ ರಾತ್ರಿ ನಡೆದ ಯುಪಿ ಯೋಧಾ ಹಾಗೂ ಪುಣೇರಿ ಪಲ್ಟನ್ಸ್ ನಡುವೆ ರಣರೋಚಕ ಕದನ ಏರ್ಪಟ್ಟಿತ್ತು. ರೇಡಿಂಗ್ ನಲ್ಲಿ ಸ್ಟಾರ್ ಆಟಗಾರರೆನಿಸಿಕೊಂಡಿರುವ ಪ್ರದೀಪ್ ನರ್ವಾಲ್ , ಸುರೇಂದರ್ ಗಿಲ್ ಉತ್ತಮ ಆಟದಿಂದಾಗಿ ಯೋಧ ಪಲ್ಟನ್ಸ್ ವಿರುದ್ಧ ಗೆದ್ದು ಬೀಗಿದೆ..
ರಣರೋಚಕ ಹಣಾಹಣಿಯಲ್ಲಿ ಪುಣೇರಿ ಪಲ್ಟನ್ ತಂಡವನ್ನು ಯೋಧಾ 50–40ರಲ್ಲಿ ಮಣಿಸಿತು.. ಸುರೇಂದರ್ ಗಿಲ್ 21 ಮತ್ತು ಪ್ರದೀಪ್ ನರ್ವಾಲ್ 10 ಪಾಯಿಂಟ್ ಕಲೆ ಹಾಕಿದರು. ಪುಣೇರಿ ಪಲ್ಟನ್ಸ್ ಕೂಡ ಉತ್ತಮ ಪ್ರದರ್ಶನವನ್ನೇ ನೀಡಿತು.. ಪಲ್ಟನ್ಸ್ ಟೀಮ್ ನಲ್ಲಿ ಅಸ್ಲಾಂ ,ಇನಾಮದಾರ್ ಮತ್ತು ಮೋಹಿತ್ ಗೋಯತ್ ಸೂಪರ್ ಟೆನ್ ಕಲೆಹಾಕಿದರು.
ಇಂದಿನಿಂದ ಸೈಯದ್ ಮೋದಿ ಇಂಟರ್ ನ್ಯಾಷನಲ್ ಬ್ಯಾಡ್ಮಿಟನ್ ಟೂರ್ನಿ ಆರಂಭ
ಪಂದ್ಯದ ಮೊದಲಾರ್ಧನ ಸಾಕಷ್ಟು ರೋಚಕತೆಯಿಂದ ಕೂಡಿತ್ತು.. ನೆಕ್ ಟು ನೆಕ್ ಕಾಂಪಿಟೇಷನ್ ಏರ್ಪಟ್ಟಿತ್ತು.. ಎರೆಡೂ ತಂಡಗಳು ಆರಾಂಸೆ ಪಾಯಿಂಟ್ ಗಳನ್ನ ಕಲೆಹಾಡಿದ್ರು.. ಆದ್ರೆ ಪ್ರದೀಪ್ ನರ್ವಾಲ್ ಮೊದಲ ರೇಡ್ ನಲ್ಲೇ ಮಿಂಚಿ ಪಲ್ಟನ್ ಡಿಫೆಂಡಿಗ್ ನ ಬೇಧಿಸಿದ್ದರು. ಆದ್ರೆ ಮೊದಲಾರ್ಧದಲ್ಲಿ ಪುಣೇರಿ ಪಲ್ಟನ್ಸ್ ಕೂಡ ಯುಪಿ ಯೋಧ ವಿರುದ್ಧ ಅಬ್ಬರಿಸಿದ್ರು.. ಅಸ್ಲಾಂ ಮತ್ತು ಮೋಹಿತ್ ಅವರ ಮಿಂಚಿನ ಆಟದಿಂದ ಯುಪಿ ಯೋಧಾ ಮೊದಲಾರ್ಧದಲ್ಲೇ ಆಲೌಟಾಯಿತು. ಈ ಮೂಲಕ ಮೊದಲಾರ್ಧ 20–20ರಲ್ಲಿ ಸಮ ಆಯಿತು. ಆದರೆ ದ್ವಿತೀಯಾರ್ಧದಲ್ಲಿ ಯೋಧಾ ಮ್ಯಾಚ್ ಟರ್ನ್ ಓವರ್ ಮಾಡಿ ಪಲ್ಟ್ ವಿರುದ್ಧ ಗೆದ್ದು ಬೀಗಿದ್ರು..
ಪ್ರೋ ಕಬಡ್ಡಿ 8ನೇ ಆವೃತ್ತಿ – ಭಾಗ 2 : ಬೆಂಗಳೂರು ಬುಲ್ಸ್ ವೇಳಾಪಟ್ಟಿ ಹೀಗಿದೆ…!








