ಮಂಗಳೂರು, ಮೇ 17 : ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ದಿನದಿಂದ ದಿನಕ್ಕೆ ಏರಿಕೆಯಾಗುತ್ತಲ್ಲೇ ಇದ್ದು ಇಂದು ಮತ್ತೆ ಇಬ್ಬರಲ್ಲಿ ಕೊರೊನಾ ಸೋಂಕು ಪತ್ತೆಯಾಗಿದೆ. ಮಹಾರಾಷ್ಟ್ರದಿಂದ ಜಿಲ್ಲೆಗೆ ಹಿಂತಿರುಗಿದ 35 ವರ್ಷದ ಮಹಿಳೆಯಲ್ಲಿ ಮತ್ತು 31 ವರ್ಷದ ಜಪ್ಪಿನಮೊಗರು ನಿವಾಸಿಯಲ್ಲಿ ಕೊರೊನಾ ಸೋಂಕು ದೃಢಪಟ್ಟಿದೆ. 31 ವರ್ಷದ ಪುರುಷನ ಕೊರೊನಾ ಸೋಂಕಿನ ಮೂಲವನ್ನು ಪತ್ತೆಹಚ್ಚಲಾಗುತ್ತಿದೆ. ಜಪ್ಪಿನಮೊಗರು ನಿವಾಸಿಯಾಗಿರುವ 31 ವರ್ಷದ ವ್ಯಕ್ತಿ ಕೊರೊನಾ ಸೋಂಕಿನ ಶಂಕೆಯಿಂದ ಆಸ್ಪತ್ರೆಗೆ ಬಂದು ತಾವಾಗಿಯೇ ಕೊರೊನಾ ಪರೀಕ್ಷೆ ಮಾಡಿಸಿಕೊಂಡಿದ್ದರು. ಇಂದು ಬಂದಿರುವ ಅವರ ಪರೀಕ್ಷಾ ವರದಿಯಲ್ಲಿ ಕೊರೊನಾ ಸೋಂಕು ತಗುಲಿರುವುದು ದೃಢಪಟ್ಟಿದೆ. ಯೆಯ್ಯಾಡಿ ನಿವಾಸಿಯಾಗಿರುವ 35 ವರ್ಷದ ಮಹಿಳೆ ಮೇ 14 ರಂದು ಮುಂಬೈನಿಂದ ಬಂದಿದ್ದರು. ಆಕೆಯ ಪತಿ ಮತ್ತು ಮಗು ಕ್ವಾರೆಂಟೈನ್ ನಲ್ಲಿ ಇದ್ದಾರೆ. ಮೊನ್ನೆಯಷ್ಟೇ ದುಬೈನಿಂದ ಬಂದಿದ್ದ 15 ಮಂದಿ ಸೇರಿ 16 ಜನರಲ್ಲಿ ಕೊರೊನಾ ಸೋಂಕು ಪತ್ತೆಯಾಗಿದ್ದು, ಇಂದು ಪತ್ತೆ ಇಬ್ಬರಲ್ಲಿ ಸೋಂಕು ದೃಢಪಟ್ಟಿದೆ. ಜಿಲ್ಲೆಯಲ್ಲಿ ಏರಿಕೆಯಾಗುತ್ತಲೇ ಇರುವ ಕೊರೊನಾ ಸೋಂಕು ಪ್ರಕರಣಗಳಿಂದ ಜಿಲ್ಲೆಯ ಜನ ಆತಂಕಿತರಾಗಿದ್ದಾರೆ.
ನಿಮ್ಮ ದಾನ ಬೇಡ, ವಿನಾಶಕ್ಕೆ ಪರಿಹಾರ ನೀಡಿ: ನಮಗೆ ನ್ಯಾಯ ಬೇಕು ಭಾರತದ ವಿರುದ್ಧ ಸಿಡಿದೆದ್ದ ನೇಪಾಳ
ಕಾಠ್ಮಂಡು: ಇತ್ತೀಚಿನ ಭೀಕರ ಪ್ರವಾಹ ಮತ್ತು ಭೂಕುಸಿತದಿಂದ ನಲುಗಿ ಹೋಗಿರುವ ನೇಪಾಳ, ಇದೀಗ ಜಗತ್ತಿನ ಬಲಿಷ್ಠ ರಾಷ್ಟ್ರಗಳ ವಿರುದ್ಧ ತಿರುಗಿಬಿದ್ದಿದೆ. ಸಾವಿರಾರು ಜೀವಗಳನ್ನು ಬಲಿಪಡೆದ ಈ ನೈಸರ್ಗಿಕ...








