ಮೊಳಕೆ ಬರಿಸಿದ ಹೆಸರು ಬೇಳೆ ದೋಸೆ
ಬೇಕಾಗುವ ಪದಾರ್ಥಗಳು
3/4 ಕಪ್ ಮೊಳಕೆ ಬರಿಸಿದ ಹೆಸರು ಬೇಳೆ
3/4 ಕಪ್ ನೆನೆಸಿದ ನವಣೆ ಅಕ್ಕಿ
1 ಇಂಚು ತಾಜಾ ಶುಂಠಿ ತುಂಡು
1-2 ಹಸಿರು ಮೆಣಸಿನಕಾಯಿಗಳು
1 ಟೀಸ್ಪೂನ್ ಜೀರಿಗೆ
ರುಚಿಗೆ ತಕ್ಕಂತೆ ಉಪ್ಪು
ತಾಜಾ ಕೊತ್ತಂಬರಿ ಸೊಪ್ಪು
ಎಣ್ಣೆ/ತುಪ್ಪ
ನವಣೆ ಅಕ್ಕಿಯನ್ನು ಚೆನ್ನಾಗಿ ತೊಳೆದು ಅದನ್ನು ಕನಿಷ್ಠ 2-3 ಗಂಟೆಗಳ ಕಾಲ ನೆನೆಸಿಡಿ.
ನೆನೆದ ನವಣೆ ಅಕ್ಕಿಯನ್ನು ನೀರಿನಿಂದ ಸೋಸಿ. ಮಿಕ್ಸರ್ ಗೆ ನವಣೆ ಅಕ್ಕಿ, ಹೆಸರು ಕಾಳು, ಶುಂಠಿ, ಮೆಣಸಿನಕಾಯಿ, ಜೀರಿಗೆ, ಉಪ್ಪು ಮತ್ತು ಕೊತ್ತಂಬರಿ ಸೊಪ್ಪು ಸೇರಿಸಿ, ರುಬ್ಬಿಕೊಳ್ಳಿ. ಸುಮಾರು 1/2 ಕಪ್ ನೀರು ಸೇರಿಸಿ ಚೆನ್ನಾಗಿ ರುಬ್ಬಿ.
ದೋಸೆ ಕಾವಲಿಯನ್ನು ಬಿಸಿ ಮಾಡಿ. ಕಾದಾಗ ಸ್ವಲ್ಪ ಎಣ್ಣೆ/ತುಪ್ಪ ಹಾಕಿ
ನಂತರ ರುಬ್ಬಿಕೊಂಡ ಹಿಟ್ಟನ್ನು ತೆಗೆದುಕೊಂಡು, ಕಾವಲಿ ಮೇಲೆ ಬಿಡಿ. ವೃತ್ತಾಕಾರದಲ್ಲಿ ಹರಡಿ.

ಎಣ್ಣೆಯನ್ನು ಚಿಮುಕಿಸಿ, ಎರಡು ಬದಿಗಳನ್ನು ಬೇಯಿಸಿ.
ನಿಮಗಿಷ್ಟವಾದ ಚಟ್ನಿಯೊಂದಿಗೆ ಬಿಸಿಯಾಗಿ ನವಣೆ ಅಕ್ಕಿ ಹೆಸರು ಬೇಳೆ ದೋಸೆ ಸೇವಿಸಿ .
ಇದು ರುಚಿಕರವಾದ ಮತ್ತು ಎಲ್ಲಾ ವಯಸ್ಸಿನವರಿಗೆ ಆರೋಗ್ಯಕರ ಉಪಹಾರವಾಗಿದೆ.
ದಿಢೀರ್ ಸೆಟ್ ದೋಸೆ
ಬೇಕಾಗುವ ಸಾಮಗ್ರಿಗಳು
1 ಕಪ್ ರವೆ
1/2 ಕಪ್ ಅವಲಕ್ಕಿ
1/2 ಕಪ್ ಮೊಸರು
ಚಿಟಕಿ ಅಡುಗೆ ಸೋಡಾ
1.25 ಕಪ್ ನೀರು
ರುಚಿಗೆ ತಕ್ಕಷ್ಟು ಉಪ್ಪು
ಎಣ್ಣೆ/ ತುಪ್ಪ
ಮಾಡುವ ವಿಧಾನ: Saakshatv cooking recipes set dosa

ಒಂದು ಪಾತ್ರೆಯಲ್ಲಿ ಅವಲಕ್ಕಿ ತೆಗೆದುಕೊಂಡು ನೀರಿನಲ್ಲಿ ತೊಳೆಯಿರಿ. ನಂತರ ಅದಕ್ಕೆ ರವೆ ಮತ್ತು ನೀರು ಸೇರಿಸಿ. ಅದಕ್ಕೆ ಮೊಸರು ಬೆರೆಸಿ. ಹತ್ತು ನಿಮಿಷ ನೆನೆಯಲು ಬಿಡಿ
ಬಳಿಕ ಮಿಕ್ಸಿಯಲ್ಲಿ ನುಣ್ಣಗಾಗುವಂತೆ ಅರೆಯಿರಿ.
ಅದಕ್ಕೆ ಅಡುಗೆ ಸೋಡಾ ಮತ್ತು ರುಚಿಗೆ ತಕ್ಕಷ್ಟು ಉಪ್ಪು ಸೇರಿಸಿ. ಚೆನ್ನಾಗಿ ಕಲಸಿ. ಅಗತ್ಯವಿದ್ದರೆ ನೀರು ಸೇರಿಸಿ. ಉದ್ದಿನ ದೋಸೆ ಹಿಟ್ಟಿನ ಹದದಂತೆ ಇರಲಿ.
ಈಗ ದೋಸೆ ಹೆಂಚು ಅಥವಾ ನಾನ್ ಸ್ಟಿಕ್ ಪ್ಯಾನ್ ಬಿಸಿ ಮಾಡಿ. ದೋಸೆ ಕಾವಲಿಗೆ ದೋಸೆ ಹಿಟ್ಟನ್ನು ಸೌಟಿನಿಂದ ಸುರಿಯಿರಿ. ಸೆಟ್ ದೋಸೆಯಂತೆ ಸ್ವಲ್ಪ ಅಗಲ ಮಾಡಿ.
ಮುಚ್ಚಳ ಮುಚ್ಚಿ ಬೇಯಿಸಿ.

ಹತ್ತು ಸೆಕೆಂಡುಗಳ ನಂತರ ದೋಸೆಯ ಮೇಲೆ ಎಣ್ಣೆ ಅಥವಾ ತುಪ್ಪ ಹಾಕಿ. ನಂತರ ದೋಸೆಯನ್ನು ತಿರುಗಿಸಿ ಹಾಕಿ. ಎರಡೂ ಬದಿಯೂ ಕಾಯಿಸಿ.
ದೋಸೆಯನ್ನು ತವೆಯಿಂದ ತೆಗೆದು, ತೆಂಗಿನ ಕಾಯಿ ಚಟ್ನಿ ಅಥವಾ ಸಾಂಬಾರ್ ಅಥವಾ ಸಾಗುವಿನೊಂದಿಗೆ ಸೇವಿಸಿ.
ಗರಿಗರಿಯಾದ ದಿಢೀರ್ (instant dosa) ದೋಸೆ
ಬೇಕಾಗುವ ಸಾಮಗ್ರಿಗಳು
ಅಕ್ಕಿ 11/2 ಕಪ್
ಉದ್ದಿನ ಬೇಳೆ 1/2 ಕಪ್
ತೊಗರಿಬೇಳೆ 2 ಟೇಬಲ್ಸ್ಪೂನ್
ಕಡಲೆಬೇಳೆ 2 ಟೇಬಲ್ಸ್ಪೂನ್
ಮೆಂತ್ಯೆ 1/4 ಟೇಬಲ್ಸ್ಪೂನ್
ಅವಲಕ್ಕಿ- 1 ಟೇಬಲ್ಸ್ಪೂನ್
ರವೆ 2 ಟೇಬಲ್ಸ್ಪೂನ್
ಸಕ್ಕರೆ 1 ಟೀಸ್ಪೂನ್
ಬಿಸಿ ಮಾಡಿದ ಎಣ್ಣೆ 2 ಟೇಬಲ್ಸ್ಪೂನ್
ರುಚಿಗೆ ತಕ್ಕಷ್ಟು ಉಪ್ಪು
ಅಡಿಗೆ ಸೋಡಾ/ಬೇಕಿಂಗ್ ಸೋಡಾ- 1/4 ಚಮಚ
ಮೊಸರು 1/2 ಕಪ್
Saakshatv cooking recipes instant dosa

ಮಾಡುವ ವಿಧಾನ
ಮೊದಲಿಗೆ ಅಕ್ಕಿಯನ್ನು ಚೆನ್ನಾಗಿ ತೊಳೆಯಿರಿ. ಬಳಿಕ ಬಾಣಲೆ ಬಿಸಿ ಮಾಡಿ ಅದಕ್ಕೆ ಅಕ್ಕಿಯನ್ನು ಹಾಕಿ ನೀರಿನ ಅಂಶ ಹೋಗುವವರೆಗೆ ಸ್ವಲ್ಪ ಪ್ರಮಾಣದಲ್ಲಿ ಹುರಿಯಿರಿ. ನಂತರ ಅಕ್ಕಿ ಸಂಪೂರ್ಣವಾಗಿ ತಣ್ಣಗಾದ ಬಳಿಕ ಅದನ್ನು ಪುಡಿ ಮಾಡಿ.
ನಂತರ ಅದೇ ಬಾಣಲೆಯಲ್ಲಿ ಉದ್ದಿನ ಬೇಳೆ, ತೊಗರಿಬೇಳೆ, ಕಡಲೆಬೇಳೆ, ಮೆಂತ್ಯೆ, ಅವಲಕ್ಕಿ, ರವೆ ಎಲ್ಲವನ್ನೂ ಹುರಿದಿಟ್ಟುಕೊಳ್ಳಿ. ತಣ್ಣಗಾದ ಬಳಿಕ ಅವೆಲ್ಲವನ್ನೂ ಹುಡಿ ಮಾಡಿ.

ಬಳಿಕ ಈಗಾಗಲೇ ಪುಡಿ ಮಾಡಿಟ್ಟುಕೊಂಡ ಅಕ್ಕಿ ಹಿಟ್ಟಿಗೆ ಸೇರಿಸಿ ಚೆನ್ನಾಗಿ ಕಲಸಿ. ಈಗ 2 ಟೀಸ್ಪೂನ್ ಬಿಸಿ ಎಣ್ಣೆ, ರುಚಿಗೆ ತಕ್ಕಷ್ಟು ಉಪ್ಪು, ಮೊಸರು, ಅಡಿಗೆ ಸೋಡಾ, ಸಕ್ಕರೆ ಸೇರಿಸಿ ಚೆನ್ನಾಗಿ ಮಿಶ್ರ ಮಾಡಿ. ನಂತರ ಅಗತ್ಯವಿದ್ದಷ್ಟು ನೀರು ಸೇರಿಸಿ ಹಿಟ್ಟು ತಯಾರಿಸಿ.
ಈಗ ಒಲೆಯ ಮೇಲೆ ಕಾವಲಿ ಇಟ್ಟು ಬಿಸಿ ಮಾಡಿ. ದೋಸೆ ಹಿಟ್ಟನ್ನು ಕಾವಲಿಯ ಮೇಲೆ ಬಿಡಿ. ವೃತ್ತಾಕಾರದಲ್ಲಿ ಹರಡಿ.
ಎಣ್ಣೆಯನ್ನು ಚಿಮುಕಿಸಿ, ಎರಡು ಬದಿಗಳನ್ನು ಮಧ್ಯಮ ಉರಿಯಲ್ಲಿ ಚೆನ್ನಾಗಿ ಬೇಯಿಸಿ.
ರುಚಿಕರವಾದ ಗರಿಗರಿ ದಿಢೀರ್ ದೋಸೆ ಸವಿಯಲು ಸಿದ್ಧವಾಗಿದೆ.
ಧಿಡೀರ್ (instant) ಅವಲಕ್ಕಿ ಉತ್ತಪ್ಪ
ಬೇಕಾಗುವ ಸಾಮಗ್ರಿಗಳು :
ಅವಲಕ್ಕಿ 1/2 ಕಪ್
ಮೊಸರು 1/2 ಕಪ್
ರವೆ 1/2 ಕಪ್
ಚಿಕ್ಕದಾಗಿ ಕತ್ತರಿಸಿದ ತರಕಾರಿಗಳು (ಈರುಳ್ಳಿ, ಕ್ಯಾಪ್ಸಿಕಂ, ಕ್ಯಾರೆಟ್, ಹಸಿಮೆಣಸು, ಬೀನ್ಸ್)
ಕೊತ್ತಂಬರಿ ಸೊಪ್ಪು ಸ್ವಲ್ಪ
ರುಚಿಗೆ ತಕ್ಕಷ್ಟು ಉಪ್ಪು
ಎಣ್ಣೆ

ಮಾಡುವ ವಿಧಾನ :
ಮೊದಲಿಗೆ ಅವಲಕ್ಕಿಯನ್ನು ನೀರಿನಲ್ಲಿ ಚೆನ್ನಾಗಿ ನೆನೆಸಿ. ಬಳಿಕ ನೆನೆದ ಅವಲಕ್ಕಿಯನ್ನು ಮಿಕ್ಸಿಯಲ್ಲಿ ಹಾಕಿ ನುಣ್ಣಗೆ ರುಬ್ಬಿ. ಇದಕ್ಕೆ ರವೆ, ಮೊಸರು ಸೇರಿಸಿ ಚೆನ್ನಾಗಿ ಕಲಸಿ. ಬೇಕಿದ್ದರೆ ಸ್ವಲ್ಪ ನೀರು ಸೇರಿಸಿ, ದೋಸೆ ಹಿಟ್ಟಿನ ಹದಕ್ಕೆ ತಯಾರಿಸಿಕೊಳ್ಳಿ. ಉಪ್ಪು ಸೇರಿಸಿ 20 ನಿಮಿಷ ಹಾಗೆ ಬಿಡಿ.

ಇನ್ನೊಂದು ಪಾತ್ರೆಯಲ್ಲಿ ಸಣ್ಣಗೆ ಹೆಚ್ಚಿದ ತರಕಾರಿಗಳಿಗೆ ಸ್ವಲ್ಪ ಉಪ್ಪು ಹಾಕಿ ಮಿಶ್ರ ಮಾಡಿ ಪಕ್ಕದಲ್ಲಿ ಇಟ್ಟುಕೊಳ್ಳಿ. ನಂತರ ದೋಸೆ ಕಾವಲಿಯನ್ನು ಬಿಸಿ ಮಾಡಿ. ಮಾಡಿಟ್ಟುಕೊಂಡ ಅವಲಕ್ಕಿ ಹಿಟ್ಟನ್ನು ಕಾವಲಿ ಮೇಲೆ ದೋಸೆಯಂತೆ ಹುಯ್ಯಿರಿ. ಬಳಿಕ ದೋಸೆ ಮೇಲೆ ಹೆಚ್ಚಿಟ್ಟುಕೊಂಡ ತರಕಾರಿಯನ್ನು ಉದುರಿಸಿ. ಸ್ವಲ್ಪ ಎಣ್ಣೆ ಹಾಕಿ ಎರಡೂ ಬದಿ ಚೆನ್ನಾಗಿ ಬೇಯಿಸಿ. ರುಚಿಯಾದ ಅವಲಕ್ಕಿ ಉತ್ತಪ್ಪ ಸವಿಯಲು ರೆಡಿ.
ಈರುಳ್ಳಿ ಉತ್ತಪ್ಪಂ
ಬೇಕಾಗುವ ಪದಾರ್ಥಗಳು
1 ಕಪ್ ಉದ್ದಿನ ಬೇಳೆ
3 ಕಪ್ ಅಕ್ಕಿ
1 ಟೀಸ್ಪೂನ್ ಮೆಂತ್ಯ
1 ಟೀಸ್ಪೂನ್ ಕಡ್ಲೆಬೇಳೆ
ರುಚಿಗೆ ತಕ್ಕಷ್ಟು ಉಪ್ಪು
ನುಣ್ಣಗೆ ಕತ್ತರಿಸಿದ ಕೊತ್ತಂಬರಿ, ಈರುಳ್ಳಿ, ಹಸಿಮೆಣಸಿನಕಾಯಿ ಮತ್ತು ಕರಿಬೇವು ಸೊಪ್ಪು
ಮಾಡುವ ವಿಧಾನ
ಕಡ್ಲೆಬೇಳೆ, ಅಕ್ಕಿ ಮತ್ತು ಮೆಂತೆಯನ್ನು 3 ರಿಂದ 4 ಗಂಟೆಗಳ ಕಾಲ ಅಥವಾ ರಾತ್ರಿಯಿಡೀ ನೆನೆಸಿಡಿ. ಉದ್ದಿನ ಬೇಳೆಯನ್ನು ಕೂಡ 3 ರಿಂದ 4 ಗಂಟೆ ಅಥವಾ ರಾತ್ರಿಯಿಡೀ ನೀರಿನಲ್ಲಿ ನೆನೆಸಿಡಿ.
ಉದ್ದಿನ ಬೇಳೆಯಿಂದ ನೀರನ್ನು ಸೋಸಿ ಅಗತ್ಯವಿರುವಷ್ಟು ನೀರನ್ನು ಸೇರಿಸಿ ನಯವಾಗಿ ಅರೆಯಿರಿ. ನೆನೆಸಿದ ಕಡ್ಲೆಬೇಳೆ, ಅಕ್ಕಿ ಮತ್ತು ಮೆಂತೆಯ ನೀರನ್ನು ಸೋಸಿ, ಅಗತ್ಯವಿರುವಷ್ಟು ನೀರನ್ನು ಸೇರಿಸಿ ಸ್ವಲ್ಪ ಒರಟಾಗಿ ಅರೆಯಿರಿ.

ಉದ್ದಿನ ಬೇಳೆ ಹಿಟ್ಟನ್ನು ಅಕ್ಕಿ ಹಿಟ್ಟಿನ ಮಿಶ್ರಣದ ಜೊತೆ ಸೇರಿಸಿ, ಚೆನ್ನಾಗಿ ಕಲಸಿ. ಇದನ್ನು 8-10 ಗಂಟೆಗಳ ಕಾಲ ಮುಚ್ಚಿ, ರಾತ್ರಿಯಿಡೀ ಹುದುಗಿಸಲು ಬಿಡಿ. ರುಚಿಗೆ ತಕ್ಕಷ್ಟು ಉಪ್ಪನ್ನು ಸೇರಿಸಿ ಚೆನ್ನಾಗಿ ಕಲಸಿ.
ದೋಸೆ ಕಾವಲಿಯನ್ನು ಬಿಸಿ ಮಾಡಿ, ಹಿಟ್ಟನ್ನು ಹಾಕಿ ಸ್ವಲ್ಪ ದಪ್ಪವಾಗಿ ವೃತ್ತಾಕಾರವಾಗಿ ಹರಡಿ. ನುಣ್ಣಗೆ ಕತ್ತರಿಸಿದ ಕೊತ್ತಂಬರಿ ಸೊಪ್ಪು, ಈರುಳ್ಳಿ, ಮೆಣಸಿನಕಾಯಿ ಮತ್ತು ಕರಿಬೇವು ಸೊಪ್ಪನ್ನು ಸಿಂಪಡಿಸಿ. ಅದರ ಸುತ್ತಲೂ ಒಂದು ಚಮಚ ಎಣ್ಣೆಯನ್ನು ಸುರಿಯಿರಿ. 2 ನಿಮಿಷಗಳ ಕಾಲ ಮಧ್ಯಮ ಉರಿಯಲ್ಲಿ ಮುಚ್ಚಳವನ್ನು ಮುಚ್ಚಿ ಬೇಯಿಸಿ. ಇನ್ನೊಂದು ಬದಿಯನ್ನು ತಿರುಗಿಸಿ ಬೇಯಿಸಿ.
ತೆಂಗಿನಕಾಯಿ ಚಟ್ನಿಯೊಂದಿಗೆ ಬಿಸಿ ಈರುಳ್ಳಿ ಉತ್ತಪಂ ಅನ್ನು ಸವಿಯಿರಿ








