ಗೋವಾ ಚುನಾವಣೆ – ಅಮಿತ್ ಪಾಲೇಕಾರ್ ಆಪ್ ಪಕ್ಷದ ಸಿ ಎಂ ಕ್ಯಾಂಡಿಡೇಟ್…
ಫೆಬ್ರವರಿ 10 ರಿಂದ ಆರಂಭವಾಗಲಿರುವ ಪಂಚರಾಜ್ಯಗಳ ಚುನಾವಣೆಯನ್ನ ಅಮ್ ಆದ್ಮಿ ಪಕ್ಷ ಗಂಭೀರವಾಗಲಿ ಪರಿಗಣಿಸಿದೆ. ನಿನ್ನೆ ಯಷ್ಟೆ ಪಂಜಾಬ್ ಚುನಾವಣಾ ಅಭ್ಯರ್ಥಿ ಹೆಸರನ್ನ ಘೋಷಿಸಿದ್ದ ಆಪ್ ಪಕ್ಷ ಇಂದು ಗೋವಾ ಮುಖ್ಯಮಂತ್ರಿ ಯಾರು ಎನ್ನುವುದನ್ನನ ರಿವಿಲ್ ಮಾಡಿದ್ದಾರೆ. ಆಪ್ ಪಕ್ಷದ ಮುಖ್ಯಮಂತ್ರಿ ಅಭ್ಯರ್ಥಿಯಾಗಿ ಅಮಿತ್ ಪಾಲೇಕರ್ ಅವರ ಹೆಸರನ್ನ ಸುದ್ದಿಗೊಷ್ಟಿಯಲ್ಲಿ ಅರವಿಂದ್ ಕೇಜ್ರಿವಾಲ್ ತಿಳಿಸಿದ್ದಾರೆ.
ಗೋವಾದಲ್ಲಿ ಒಟ್ಟು 40 ವಿಧಾನಸಭಾ ಕ್ಷೇತ್ರಗಲಲ್ಲಿ ಅಮ್ ಆದ್ಮಿ ಪಕ್ಷ ಸ್ಪರ್ಧಿಸಲಿದೆ ಎಂದು ಹೇಳಿದೆ. ಕಳೆದ ಭಾರಿಯ ಗೋವಾ ಚುನಾವಣೆಯಲ್ಲಿ ಆಪ್ 1 ಸ್ಥಾನವನ್ನ ಗೆದ್ದಿರಲಿಲ್ಲ. ಅಮಿತ್ ಅವರನ್ನ ಸಿ ಎಂ ಕ್ಯಾಂಡಿಡೇಟ್ ಎಂದು ಘೋಷಿಸುವ ಮೂಲಕ ಗೋವಾದ ಭಂಡಾರಿ ಸಮುದಾಯದ ಮತಗಳನ್ನ ಸೆಳೆದುಕೊಳ್ಳಲು ಪಣ ತೊಟ್ಟಿದೆ.
ಮಂಗಳವಾರ ಕೇಜ್ರಿವಾಲ್ ಅವರು ಪಂಜಾಬ್ ಸಿಎಂ ಸ್ಥಾನಕ್ಕೆ ಭಗವಂತ್ ಮಾನ್ ಹೆಸರನ್ನು ಘೋಷಿಸಿದ್ದರು. ಗೋವಾ ವಿಧಾನಸಭಾ ಚುನಾವಣೆಗೆ ಫೆಬ್ರವರಿ 14 ರಂದು ಮತದಾನ ನಡೆಯಲಿದೆ. ಮಾರ್ಚ್ 10 ರಂದು ಫಲಿತಾಂಶ ಬರಲಿದೆ.








