ಏಷ್ಯನ್ ಫುಟ್ ಬಾಲ್ : ಭಾರತ ಇರಾನ್ ನಡುವೆ ಗೋಲು ರಹಿತ ಡ್ರಾ..!!
ಮುಂಬೈ : ಗುರುವಾರ ನಡೆದ ಎಎಫ್‌ಸಿ ಮಹಿಳಾ ಏಷ್ಯನ್ ಫುಟ್ಬಾಲ್ ಟೂರ್ನಿಯ ಆರಂಭಿಕ ಪಂದ್ಯದಲ್ಲಿ ಆತಿಥೇಯ ಭಾರತ ಹಾಗೂ ಇರಾನ್ ನಡುವೆ ಟೈ ಆಗಿದೆ… ಉಭಯ ತಂಡಗಳ ನಡುವೆ ಗೋಲು ರಹಿತ ಮ್ಯಾಚ್ ಡ್ರಾ ಆಗಿದೆ.. ಇತ್ತಂಡಗಳು ಎಷ್ಟೇ ಹರಸಾಹಸ ಪಟ್ರೂ ಒಂದೇ ಒಂದು ಗೋಲು ತೆಗೆದುಕೊಳ್ಲಲು ಸಾಧ್ಯವಾಗಿಲ್ಲ..
ಉಭಯ ತಂಡಗಳು ತಲಾ 1 ಅಂಕ ಹಂಚಿಕೊಂಡಿದ್ದು, ‘ಎ’ ಗುಂಪಿನಲ್ಲಿ ಭಾರತ 2ನೇ ಹಾಗೂ ಇರಾನ್ 3ನೇ ಸ್ಥಾನದಲ್ಲಿದೆ. ಇನ್ನೂ ಭಾರತ ಭಾನುವಾರ ಚೈನೀಸ್ ತೈಪೆ ವಿರುದ್ಧ ಮುಂದಿನ ಪಂದ್ಯದಲ್ಲಿ ಸೆಣಸಾಟ ನಡೆಸಲಿದೆ.








