ಇಂದಿನಿಂದ ಏಷ್ಯಾಕಪ್ ಹಾಕಿ ಟೂರ್ನಿ ಆರಂಭ : ಭಾರತಕ್ಕೆ ಮಲೇಷ್ಯಾ ಸವಾಲು..!!!
ಮಸ್ಕಟ್ : ಇಂದಿನಿಂದ ಒಮನ್ ನ ಮಸ್ಕಟ್ ನಲ್ಲಿ ಆರಂಭಗೊಳ್ಳಲಿರುವ ಏಷ್ಯಾಕಪ್ ಹಾಕಿ ಟೂರ್ನಿಯಲ್ಲಿ ಮೊದಲ ಪಂದ್ಯದಲ್ಲಿ ಭಾರತಕ್ಕೆ ಮಲೇಷ್ಯಾ ಸವಾಲಾಗಲಿದೆ. ಟೋಕಿಯೋ ಒಲಿಂಪಿಕ್ಸ್ ನಲ್ಲಿ ಐತಿಹಾಸಿಕ 4ನೇ ಸ್ಥಾನ ಪಡೆದ ಭಾರತ ಮಹಿಳಾ ಹಾಕಿ ತಂಡ ಇದೀಗ ಮೊದಲ ಪಂದ್ಯದಲ್ಲಿ ಮಲೇಷ್ಯಾ ವಿರುದ್ಧ ಕಾದಾಡಲಿದೆ. ಏಷ್ಯಾಕಪ್ ಟೂರ್ನಿಯಲ್ಲಿ ಪ್ರಶಸ್ತಿ ಉಳಿಸಿಕೊಳ್ಳಲು ಹೋರಾಟ ನಡೆಸಲಿದೆ. ಇನ್ನು ಪಂದ್ಯದಲ್ಲಿ ರಾಣಿ ರಾಂಪಾಲ್ ಅನುಪಸ್ಥಿತಿಯಲ್ಲಿ ಭಾರತ ತಂಡವನ್ನು ಗೋಲ್ ಕೀಪರ್ ಸವಿತಾ ಪೂನಿಯಾ ಮುನ್ನಡೆಸಲಿದ್ದಾರೆ.
ಏಷ್ಯನ್ ಫುಟ್ ಬಾಲ್ : ಭಾರತ ಇರಾನ್ ನಡುವೆ ಗೋಲು ರಹಿತ ಡ್ರಾ..!!
ಟ್ಯೂರ್ನಮೆಂಟ್ ನಲ್ಲಿ ಒಟ್ಟು 8 ತಂಡಗಳು ಪಾಲ್ಗೊಳ್ಳಲಿದ್ದು, ತಲಾ 4 ತಂಢಗಳ 2 ಗುಂಪುಗಳಿವೆ. ಭಾರತ ‘ಎ’ ಗುಂಪಿನಲ್ಲಿದ್ದು ಜಪಾನ್, ಸಿಂಗಾಪುರ ಸಹ ಇದೇ ಗುಂಪಿನಲ್ಲಿವೆ. ಮತ್ತೊಂದು ಗುಂಪಿನಲ್ಲಿ ಚೀನಾ, ಇಂಡೋನೇಷ್ಯಾ, ದಕ್ಷಿಣ ಕೊರಿಯಾ, ಥಾಯ್ಲೆಂಡ್ ಸ್ಥಾನ ಪಡೆದಿವೆ. ಗುಂಪಿನಲ್ಲಿ ಅಗ್ರ 2 ಸ್ಥಾನಗಳನ್ನು ಪಡೆಯುವ ತಂಡಗಳು ಸೆಮೀಸ್ ಗೇರಲಿವೆ. ಜೊತೆಗೆ 2022ರ ವಿಶ್ವಕಪ್‌ಗೆ ಅರ್ಹತೆ ಪಡೆಯಲಿವೆ.








