ಪ್ರೋ ಕಬಡ್ಡಿ 2022 : ರೇಡ್ ಪಾಯಿಂಟ್ ನಲ್ಲಿ ನಮ್ಮ ಬೆಂಗಳೂರಿನ ಗೂಳಿಗೆ ಅಗ್ರಸ್ಥಾನ
ಪ್ರೋ ಕಬಡ್ಡಿ 2022ರಲ್ಲಿ ಗುರುವಾರ ನಡೆದ 2 ಪಂದ್ಯಗಳಲ್ಲಿ , ಮೊದಲ ಪಂದ್ಯದಲ್ಲಿ ಗುಜರಾತ್ ಜೇಂಟ್ಸ್ ತಮಿಳ್ ತಲೈವಾಸ್ ವಿರುದ್ಧ ಭರ್ಜರಿ ಜಯ ದಾಖಲಿಸಿದ್ರೆ , 2 ನೇ ಪಂದ್ಯದಲ್ಲಿ ಬೆಂಗಳೂರು ಬುಲ್ಸ್ ಒಂದೇ ಒಂದು ಅಂಕದಿಂದ ಬೆಂಗಾಲ್ ವಾರಿಯರ್ಸ್ ವಿರುದ್ಧ ಸೋಲುವ ಮೂಲಕ ಟ್ಯೂರ್ನಿಯಲ್ಲಿ 4ನೇ ಸೋಲು ಕಂಡಿತು..
ಆದ್ರೆ ಬೆಂಗಳೂರಿನ ಗೂಳಿಗಳು ಅಬ್ಬರದ ಆಟವಾಡಿದ ಪರಿಣಾಮ ಅಂಕಪಟ್ಟಿಯಲ್ಲಿ 2ನೇ ಸ್ಥಾನದಲ್ಲಿದ್ದಾರೆ.. ಇನ್ನೂ ನಿನ್ನೆ ನಡೆದ ಪಂದ್ಯದಲ್ಲಿ ಬುಲ್ಸ್ ನ ಕ್ಯಾಪ್ಟನ್ ಸ್ಟಾರ್ ರೇಡರ್ ಪವನ್ ಶೆರಾವತ್ ಅಬ್ಬರಿಸಿ ಬೊಬ್ಬಿರಿದಿದ್ದಾರೆ.. ಸೂಪರ್ 10 (13) ಅಂಕಗಳನ್ನ ಪಡೆದು ಮಿಂಚಿದ್ದಾರೆ.. ಈ ಮೂಲಕ ಈಗಲೂ ಟ್ಯೂರ್ನಿಯಲ್ಲಿ ಹೆಚ್ಚು ರನ್ ಪಾಯಿಂಟ್ ಗಳನ್ನ ಗಳಿಸಿ ರೇಡ್ ಪಾಯಿಂಟ್ಸ್ ಟೇಬಲ್ ನಲ್ಲಿ ಅಗ್ರಸ್ಥಾನದಲ್ಲಿದ್ದಾರೆ ಬೆಂಗಳೂರಿನ ಗೂಳಿ..
ಇಂದಿನಿಂದ ಏಷ್ಯಾಕಪ್ ಹಾಕಿ ಟೂರ್ನಿ ಆರಂಭ : ಭಾರತಕ್ಕೆ ಮಲೇಷ್ಯಾ ಸವಾಲು..!!!
ಹೌದು.. ಆಡಿರುವ 12 ಮ್ಯಾಚ್ ಗಳಲ್ಲಿ ಪವನ್ ಶೆರಾವತ್ ಒಟ್ಟಾರೆಯಾಗಿ 164 ಪಾಯಿಂಟ್ ಗಳನ್ನ ಪಡೆದು ಅಗ್ರಸ್ಥಾನದಲ್ಲಿ ಇದ್ರೆ ,, 2ನೇ ಸ್ಥಾನದಲ್ಲಿ 12 ಮ್ಯಾಚ್ ಗಳಲ್ಲಿ 146 ಅಂಕ ಗಳಿಸಿರುವ ಬೆಂಗಾಲ್ ವಾರಿಯರ್ಸ್ ನ ಮಣಿಂದರ್ ಸಿಂಗ್ ಇದ್ದಾರೆ.. 9 ಮ್ಯಾಚ್ ಗಳಲ್ಲಿ 135 ಅಂಕಗಳನ್ನ ಕಲೆ ಹಾಕುವ ಮೂಲಕ 3ನೇ ಸ್ಥಾನದಲ್ಲಿ ದಬಾಂಗ್ ದೆಹಲಿಯ ನವೀನ್ ಕುಮಾರ್ ಇದ್ದಾರೆ. ಜೈಪುರ ಪಿಂಕ್ ಪ್ಯಾಂಥರ್ಸ್ ನ ಅರ್ಜುನ್ ದೇಶ್ವಾಲ್ 11 ಮ್ಯಾಚ್ ಗಳಲ್ಲಿ 127 ಅಂಕ ಗಳಿಸಿ 4ನೇ ಸ್ಥಾನದಲ್ಲಿದ್ರೆ 5ನೇ ಸ್ಥಾನದಲ್ಲಿ ಯುಪಿ ಯೋಧ ಟೀಮ್ ನ ಸುರೇಂದರ್ ಗಿಲ್ ಇದ್ದು ಒಟ್ಟು 11 ಮ್ಯಾಚ್ ಗಳಲ್ಲಿ 94 ಅಂಕಗಳನ್ನ ಗಳಿಸಿದ್ಧಾರೆ..









