ಬುಲ್ಸ್ – ಪಲ್ಟನ್ಸ್ ನಡುವೆ ಇಂದು ರಣರೋಚಕ ಹಣಾಹಣಿ : ಗೆದ್ದು ಮೊದಲ ಸ್ಥಾನಕ್ಕೆ ಹೋಗ್ತಾರಾ ಗೂಳಿಗಳು
ಬೆಂಗಳೂರಿನ ವೈಟ್ ಫೀಲ್ಡ್ ನಲ್ಲಿ ನಡೆಯುತ್ತಿರುವ ಪ್ರೋ ಕಬಡ್ಡಿ ಲೀಗ್ 2022ರಲ್ಲಿ ನಿನ್ನೆ ಅಂದ್ರೆ ಶುಕ್ರವಾರ ನಡೆದ ಮೊದಲನೇ ಪಂದ್ಯದಲ್ಲಿ ದಬಾಂಗ್ ಡೆಲ್ಲಿ ವಿರುದ್ಧ ಹರೀಯಾಣ ಸ್ಟೀಲರ್ಸ್ 3 ಅಂಕಗಳ ಅಂತರದಿಂದ ಭರ್ಜರಿ ಜಯ ದಾಖಲಿಸಿದ್ದಾರೆ.. ಆದ್ರೂ ಲೀಡ್ ಅಂತರ ಹೆಚ್ಚಿಲ್ಲದ ಕಾರಣ ದಬಾಂಗ್ ಈಗ್ಲೂ ಅಂಕಪಟ್ಟಿಯಲ್ಲಿ ಮೊದಲ ಸ್ಥಾನದಲ್ಲೇ ವಿರಾಜಮಾನವಾಗಿದೆ.. ಮತ್ತೊಂದ್ ಕಡೆ ಹರಿಯಾಣಾ ಸ್ಟೀಲರ್ಸ್ ಉತ್ತಮ ಪ್ರದರ್ಶನ ನೀಡಿ 7 ನೇ ಸ್ಥಾನದಿಂದ 6 ಸ್ಥಾನಕ್ಕೆ ಜಿಗಿದಿದೆ..
ದಿನದ 2ನೇ ಪಂದ್ಯದಲ್ಲಿ ಬೆಂಗಾಲ್ ವಾರಿಯರ್ಸ್ ಮತ್ತೆ ಯುಪಿ ಯೋಧ ಸೆಣಸಾಟ ನಡೆಸಿದ್ದು , ವಾರಿಯರ್ಸ್ ವಿರುದ್ಧ ಯೋಧಾಸ್ 4 ಅಂಕಗಳ ಅಂತರದಿಂದ ಭರ್ಜರಿ ಜಯ ದಾಖಲಿಸುವ ಮೂಲಕ ಅಂಕ ಪಟ್ಟಿಯಲ್ಲಿ 4ನೇ ಸ್ಥಾನಕ್ಕೆ ಜಿಗಿದಿದ್ರೆ , ವಾರಿಯರ್ಸ್ 4ರಿಂದ 5ನೇ ಸ್ಥಾನಕ್ಕೆ ಕುಸಿದಿದ್ದಾರೆ..
ಇನ್ನೂ ಲೀಗ್ ನ ಆರಂಭದಿಂದಲೂ ಉತ್ತಮವಾಗಿಯೇ ಆಡುತ್ತಾ ಬಂದಿರುವ ಬೆಂಗಳೂರು ಗೂಳಿಗಳು ಇಂದು ದಿನದ ಮೊದಲನೇ ಪಂದ್ಯದಲ್ಲಿ ಪುಣೇರಿ ಪಲ್ಟನ್ಸ್ ವಿರುದ್ಧ ಸೆಣಸಾಡಲಿದ್ದಾರೆ.. ಪವನ್ ಶೆರಾವತ್ ಎಂದಿನಂತೆಯೇ ಎದುರಾಳಿಗಳಿಗೆ ಸಿಂಹಸ್ವಪ್ನವಾಗು ನಿರೀಕ್ಷೆಯಿದ್ದು , ಈ ಹಿಂದಿನ ಎರೆಡು ಮ್ಯಾಚ್ ಗಳಲ್ಲಿ ಸೋತಿರುವ ಗೂಳಿಗಳು ಇಂದು ಗೆಲ್ಲಲೇ ಬೇಕಾದ ಅನಿವಾರ್ಯತೆ ಇದೆ.. ಅದು ಕೂಡ ಹೆಚ್ಚು ಪಾಯಿಂಟ್ ಗಳ ಅಂತರದಿಂದ. ಲೀಗ್ ನಲ್ಲಿ ಅತ್ಯುತ್ತಮ ಪ್ರದರ್ಶನದ ಕಾರಣದಿಂದಾಗಿ ಹಿಂದಿನ ಎರೆಡೂ ಮ್ಯಾಚ್ ಗಳಲ್ಲಿ ಸೋತರೂ ಬುಲ್ಸ್ ಅಂಕಪಟ್ಟಿಯಲ್ಲಿ 2ನೇ ಸ್ಥಾನದಲ್ಲಿದೆ.. ಆರಂಭದಿಂದಲೂ ಬುಲ್ಸ್ ಮೊದಲ ಮೂರು ಸ್ಥಾನದಲ್ಲೇ ಇದೆ..
ಇತ್ತ ಪುಣೇರಿ ಕೂಡ ಬಲಶಾಲಿಯಾಗಿದೆ.. ಸ್ಟಾರ್ ಆಟಗಾರರಿಂದ ಬುಲ್ಸ್ ಗೆ ದೊಡ್ಡ ಸವಾಲಾಗಲಿದೆ.. ಆದ್ರೆ ಬೆಂಗಳೂರು ಮುಂದೆ ಲೆಕ್ಕಾಚಾರ ಹಾಕಿ ನೋಡಿದ್ರೆ ಬೆಂಗಳೂರು ಆಡಿರುವ 12 ಪಂದ್ಯಗಳಲ್ಲಿ 7 ರಲ್ಲಿ ಗೆದ್ದು , 2 ಟೈ ಮಾಡಿಕೊಂಡು ನಾಲ್ಕರಲ್ಲಿ ಸೋತಿದ್ರೆ , ಪುಣೇರಿ 11 ರಲ್ಲಿ 4 ಗೆದ್ದು , 7 ಸೋತಿದೆ.. ಅಂಕಪಟ್ಟಿಯಲ್ಲಿ 11 ನೇ ಸ್ಥಾನೆದಲ್ಲಿದೆ.. ಸದ್ಯ ಪಲ್ಟನ್ಸ್ ಹಾಗೂ ಬುಲ್ಸ್ ನಡುವಿನ ಕಾದಾಟ ಮಾತ್ರ ರಣರೋಚಕಕವಾಗಿರಲಿದೆ.. ಸಂಜೆ 7. 30 ಕ್ಕೆ ಪಂದ್ಯ ಆರಂಭವಾಗಲಿದೆ.









