ಸುಧೀರ್ ಗೆ ಕೈಕೊಟ್ಟು.. ಸೀಕ್ರೆಟ್ ಮದ್ವೆಯಾದ ರಷ್ಮಿ..!! sudheer rashmi marriage
ಆಂಕರ್ ರಶ್ಮಿ ಗೌತಮ್ ಸದ್ಯ ಟಾಲಿವುಡ್ ನಲ್ಲಿ ಟಾಪ್ ಆಂಕರ್ ಆಗಿದ್ದಾರೆ.
ತೆಲುಗಿನಲ್ಲಿ ಜನಪ್ರಿಯ ಕಾಮಿಡಿ ಶೋಗೆ ನಿರೂಪಕರಾಗಿರುವ ರಶ್ಮಿ, ಸುಡಿಗಾಲಿ ಸುಧೀರ್ ಜೊತೆ ಲವ್ ಟ್ರ್ಯಾಕ್ ಮೂಲಕ ಮನೆ ಮಾತಾಗಿದ್ದಾರೆ.
ಕಿರುತೆರೆಯಲ್ಲಿ ಈ ಜೋಡಿಗೆ ಸಾಕಷ್ಟು ಮಂದಿ ಅಭಿಮಾನಿಗಳಿದ್ದಾರೆ.
ಆದರೆ, ರಶ್ಮಿ ಬಗ್ಗೆ ಇತ್ತೀಚಿನ ಸುದ್ದಿಯೊಂದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.
ಕಳೆದ ವರ್ಷ ಲಾಕ್ ಡೌನ್‌ನಲ್ಲಿ ರಶ್ಮಿ ರಹಸ್ಯವಾಗಿ ಮದುವೆಯಾಗಿದ್ದಾರಂತೆ.

ಈ ಹಿಂದೆ ಸುಧೀರ್ ಜಸ್ಟ್ ಫ್ರೆಂಡ್ ಅಂದಿದ್ದ ರಷ್ಮಿ, ಲವ್ ಟಾಕ್ ಗೆ ಸ್ಪಷ್ಟನೆ ನೀಡಿದ್ದರು.
ಇತ್ತೀಚಿನ ಮಾಹಿತಿ ಪ್ರಕಾರ ರಶ್ಮಿ ಇಂಡಸ್ಟ್ರಿಗೆ ಸಂಬಂಧವೇ ಇಲ್ಲದ ವ್ಯಕ್ತಿಯನ್ನು ಗುಟ್ಟಾಗಿ ಮದುವೆಯಾಗಿದ್ದಾರಂತೆ.
ರಷ್ಮಿ ಪತಿ ಖಾಸಗಿ ಕಂಪನಿಯೊಂದರಲ್ಲಿ ಮ್ಯಾನೇಜರ್ ಆಗಿ ಕೆಲಸ ಮಾಡುತ್ತಿದ್ದಾರಂತೆ.
ಸದ್ಯ ರಷ್ಮಿ ಪತಿಯೊಂದಿಗೆ ಹೈದರಾಬಾದ್‌ನಲ್ಲಿ ನೆಲೆಸಿದ್ದಾರಂತೆ. ಸದ್ಯದಲ್ಲೇ ಈ ಬಗ್ಗೆ ರಶ್ಮಿ ಸ್ಪಷ್ಟನೆ ನೀಡುವ ಸಾಧ್ಯತೆ ಇದೆ ಎಂದು ಟಾಲಿವುಡ್ ಮೂಲಗಳು ತಿಳಿಸುತ್ತಿವೆ.








