ಭರ್ಜರಿ ಯಶಸ್ಸು ಕಾಣುವ ಮೂಲಕ ‘ಪ್ರೇಮದ ಊರಲಿ’ ಸಿನಿಮಾ ಬಾಕ್ಸ್ ಆಫೀಸ್ನಲ್ಲಿ ನೂರು ಕೋಟಿ ರೂಪಾಯಿಗಳ ಮೈಲಿಗಲ್ಲು ತಲುಪಿದೆ.
ಹಾಸನ ಜಿಲ್ಲೆಯ ಬೇಲೂರು ತಾಲ್ಲೂಕಿನ ಅಂದಲೆ ಗ್ರಾಮದವರಾದ ನಿರ್ದೇಶಕ ಮನೋಜ್ ಕುಮಾರ್ ಅವರಿಗೆ ಗ್ರಾಮಸ್ಥರು ಅದ್ಧೂರಿ ಸ್ವಾಗತ ಕೋರಿದ್ದಾರೆ.
ಗ್ರಾಮಕ್ಕೆ ಆಗಮಿಸಿದ ನೆಚ್ಚಿನ ನಿರ್ದೇಶಕ ಮನೋಜ್ಕುಮಾರ್ಗೆ ಗ್ರಾಮದ ಜನತೆ ಪ್ರೀತಿಯಿಂದ ಜೈಕಾರ ಕೂಗಿ ಸಂಭ್ರಮಿಸಿದ್ದಾರೆ.
ಮಗನ ಈ ಐತಿಹಾಸಿಕ ಸಾಧನೆ ಮತ್ತು ಯಶಸ್ಸನ್ನು ಕಂಡು ಮನೋಜ್ ಕುಮಾರ್ ಅವರ ತಂದೆ-ತಾಯಿ ಭಾವುಕರಾಗಿದ್ದಾರೆ.
ನಿರ್ದೇಶಕ ಮನೋಜ್ ಜೊತೆಗೆ ‘ಪ್ರೇಮದ ಊರಲಿ’ ಚಿತ್ರತಂಡ ಕೂಡ ಅಂದಲೆ ಗ್ರಾಮಕ್ಕೆ ಭೇಟಿ ನೀಡಿ ಗ್ರಾಮಸ್ಥರ ಜೊತೆ ಸಂಭ್ರಮ ಹಂಚಿಕೊಂಡಿದೆ.
ನಿರೂಪ್ ಭಂಡಾರಿ ನಟನೆಯ ‘ಸತ್ಯ ಸನ್ ಆಫ್ ಹರಿಶ್ಚಂದ್ರ’ ಚಿತ್ರದಲ್ಲಿ ಶಿವರಾಜ್ಕುಮಾರ್ ಅತಿಥಿ ಪಾತ್ರ
ಬೆಂಗಳೂರು: ನಟ ನಿರೂಪ್ ಭಂಡಾರಿ ಮುಖ್ಯಭೂಮಿಕೆಯಲ್ಲಿ ನಟಿಸುತ್ತಿರುವ ಬಹುನಿರೀಕ್ಷಿತ ‘ಸತ್ಯ ಸನ್ ಆಫ್ ಹರಿಶ್ಚಂದ್ರ’ ಸಿನಿಮಾಗೆ ಕರುನಾಡ ಚಕ್ರವರ್ತಿ ಡಾ. ಶಿವರಾಜ್ಕುಮಾರ್ ಸಾಥ್ ನೀಡಿದ್ದಾರೆ. ಚಿತ್ರದಲ್ಲಿ ಶಿವಣ್ಣ...







