ADVERTISEMENT
Tuesday, October 27, 2026
  • Home
  • About Us
  • Contact Us
  • Privacy Policy
Cini Bazaar
Sports
Advertisement
ADVERTISEMENT
  • Home
  • Newsbeat
  • State
    • Samagra karnataka
    • Malenadu Karnataka
    • Kalyana karnataka
    • Coastal Karnataka
    • Hale Mysore
    • Mumbai Karnataka
  • Politics
  • National
  • International
  • Crime
  • Cinema
  • Sports
  • Astro
  • Health
  • More
    • Life Style
    • TECHNOLOGY
    • Saaksha Special
    • Marjala Manthana
    • Cooking
    • Bigg Boss 8
    • Viral News
    • IPL 2020
    • IPL 2021
    • GALLERY
No Result
View All Result
Home Cinema

ಗಮನ ಸೆಳೆಯುತ್ತಿದೆ ಕಾರ್ತಿಕ್ ಶರ್ಮಾ ನಿರ್ದೇಶನದ ‘ಭಾವಾಂತರ’ ಟ್ರೇಲರ್! ಟ್ರೈಆಂಗಲ್ ಲವ್ ಸ್ಟೋರಿ ಜೊತೆ ಮಂಗಳಮುಖಿಯರ ಬದುಕಿನ ಅನಾವರಣ

admin by admin
October 27, 2026
in Cinema, Newsbeat, ಮನರಂಜನೆ
bhavantara-kannada-movie-trailer-karthik-sharma-transgender-love-story

bhavantara-kannada-movie-trailer-karthik-sharma-transgender-love-story

Share on FacebookShare on TwitterShare on WhatsappShare on Telegram

ಬೆಂಗಳೂರು: ಕನ್ನಡ ಚಿತ್ರರಂಗದಲ್ಲಿ ವಿಭಿನ್ನ ಹಾಗೂ ನೈಜ ಕಥಾಹಂದರ ಹೊಂದಿರುವ ಸಿನಿಮಾಗಳ ಸಾಲಿಗೆ ಹೊಸ ಸೇರ್ಪಡೆಯಾಗಿ ‘ಭಾವಾಂತರ’ ಸಿನಿಮಾ ಸದ್ದು ಮಾಡುತ್ತಿದೆ. ಬಹುಮುಖ ಪ್ರತಿಭೆ ಕಾರ್ತಿಕ್ ಶರ್ಮಾ ಕಥೆ, ಚಿತ್ರಕಥೆ, ಸಂಭಾಷಣೆ, ಸಂಗೀತ ನೀಡಿ, ನಟಿಸಿ ನಿರ್ದೇಶಿಸಿರುವ ಈ ಚಿತ್ರದ ಅಧಿಕೃತ ಟ್ರೇಲರ್ ಅಕ್ಟೋಬರ್ 24ರಂದು ಬಿಡುಗಡೆಯಾಗಿದ್ದು, ಪ್ರೇಕ್ಷಕರಲ್ಲಿ ಭಾರಿ ಕುತೂಹಲ ಮೂಡಿಸಿದೆ. ನೈಜ ಘಟನೆಗಳಿಂದ ಪ್ರೇರಿತವಾದ ಈ ಚಿತ್ರದಲ್ಲಿ ತ್ರಿಕೋನ ಪ್ರೇಮಕಥೆಯ ಜೊತೆಗೆ ಮಂಗಳಮುಖಿಯರ (ಟ್ರಾನ್ಸ್‌ಜೆಂಡರ್) ಸಮುದಾಯದ ಬದುಕು, ಭಾವನೆಗಳು, ನೋವು ಹಾಗೂ ಹೋರಾಟವನ್ನು ಅತ್ಯಂತ ಸೂಕ್ಷ್ಮವಾಗಿ ಕಟ್ಟಿಕೊಡಲಾಗಿದೆ.

ಚಿತ್ರದ ಬಗ್ಗೆ ಸ್ವತಃ ವಿವರ ಹಂಚಿಕೊಂಡಿರುವ ಕಾರ್ತಿಕ್ ಶರ್ಮಾ, ಈ ಕಥೆಯ ಮೂಲ ಮತ್ತು ಸವಾಲುಗಳನ್ನು ಬಿಚ್ಚಿಟ್ಟಿದ್ದಾರೆ. ಹಲವು ವರ್ಷಗಳ ಹಿಂದೆ ಕೇಳಿದ್ದ ಹಳ್ಳಿಯೊಂದರ ವಿಶಿಷ್ಟ ಹಬ್ಬದ ಆಚರಣೆಯ ಹಿನ್ನೆಲೆಯಲ್ಲಿ ಒಂದು ಎಳೆಯನ್ನಿಟ್ಟುಕೊಂಡು ಈ ಕಥೆ ಹೆಣೆಯಲಾಗಿದೆ. ಈವರೆಗೆ ಬಂದಿರುವ ಮಂಗಳಮುಖಿಯರ ಕಥೆಗಳಿಗಿಂತ ಇದು ಸಂಪೂರ್ಣ ಭಿನ್ನವಾಗಿದ್ದು, ಸುಮಾರು 80% ಜನರಿಗೆ ತಿಳಿಯದ ಅಚ್ಚರಿಯ ಆಚರಣೆ ಹಾಗೂ ವಾಸ್ತವ ಸಂಗತಿಗಳು ಸಿನಿಮಾದಲ್ಲಿರಲಿವೆ. ಬರವಣಿಗೆ, ನಟನೆ ಮತ್ತು ಸಂಗೀತ ಎಲ್ಲವನ್ನೂ ತಾವೇ ನಿಭಾಯಿಸಿರುವ ಕಾರ್ತಿಕ್, ಈ ಕಥೆ ಒಬ್ಬ ನಿರ್ದೇಶಕನಾಗಿ ತಮಗೆ ದೊಡ್ಡ ಮಟ್ಟದ ಸೃಜನಶೀಲ ಸವಾಲನ್ನು ಒಡ್ಡಿದೆ ಎಂದಿದ್ದಾರೆ.

Related posts

sathya-son-of-harishchandra-teaser-release-nirup-bhandari-shivarajkumar

ನಿರೂಪ್‌ ಭಂಡಾರಿ ನಟನೆಯ ʻಸತ್ಯ ಸನ್‌ ಆಫ್‌ ಹರಿಶ್ಚಂದ್ರʼ ಸಿನಿಮಾದ ಟೀಸರ್‌ ರಿಲೀಸ್;‌ ಅತಿಥಿ ಪಾತ್ರದಲ್ಲಿ ಶಿವರಾಜ್‌ಕುಮಾರ್‌ ನಟನೆ

October 27, 2026
its-a-medical-miracle-ott-success-15-million-viewing-minutes-manoramamax

ಒಟಿಟಿಯಲ್ಲಿ ‘ಇಟ್ಸ್ ಎ ಮೆಡಿಕಲ್ ಮಿರಾಕಲ್’ ಧಮಾಕ; ಮೊದಲ ವಾರದಲ್ಲೇ 1.5 ಕೋಟಿ ನಿಮಿಷಗಳ ವೀಕ್ಷಣಾ ಸಮಯ ದಾಖಲು, 4 ಭಾಷೆಗಳಲ್ಲಿ ಸ್ಟ್ರೀಮಿಂಗ್ ಆರಂಭ

October 27, 2026

ಚಿತ್ರದ ತಾರಾಗಣದಲ್ಲಿ ಪ್ರತಿಭಾವಂತರ ದಂಡೇ ಇದೆ. ಖ್ಯಾತ ನೃತ್ಯಪಟು ಹಾಗೂ ನಟಿ ತನ್ವಿ ರಾವ್ ‘ರಾಧೆ’ ಎಂಬ ಪ್ರಮುಖ ಪಾತ್ರಕ್ಕೆ ಜೀವ ತುಂಬಿದ್ದಾರೆ. ಈ ಪಾತ್ರಕ್ಕೆ ಅವರೇ ಸೂಕ್ತ ಆಯ್ಕೆಯಾಗಿದ್ದು, ರಂಗಭೂಮಿ ಅನುಭವದ ಅವರ ಅಭಿನಯ ಚಿತ್ರಕ್ಕೆ ದೊಡ್ಡ ಬಲ ತಂದಿದೆ. ಇನ್ನು ‘ಶನಿ’ ಸೇರಿದಂತೆ ಹಲವು ಜನಪ್ರಿಯ ಧಾರಾವಾಹಿಗಳ ಮೂಲಕ ಮನೆಮಾತಾಗಿದ್ದ ಪ್ರತಿಭಾವಂತ ನಟ ಪ್ರಣವ್ ಶ್ರೀಧರ್ ‘ಅಭಿಮನ್ಯು’ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಕಾರ್ತಿಕ್ ಶರ್ಮಾ ಅವರು ‘ಮಾಧವ’ ಹಾಗೂ ‘ಮಾಧವಿ’ ಎಂಬ ವಿಶಿಷ್ಟ ಪಾತ್ರದಲ್ಲಿ ಕಾಣಿಸಿಕೊಂಡಿದ್ದು, ಪ್ರಣವ್ ಮತ್ತು ತನ್ವಿ ರಾವ್ ಅವರೊಂದಿಗಿನ ದೃಶ್ಯಗಳು ಟ್ರೈಆಂಗಲ್ ಲವ್ ಸ್ಟೋರಿಯ ಆಳವನ್ನು ತೆರೆದಿಡಲಿವೆ. ಇವರೊಂದಿಗೆ ಶ್ರೀ ವೈಷ್ಣವ್ ‘ಬ್ಯಾಟರಿ’ ಪಾತ್ರದಲ್ಲಿ ಹಾಗೂ ವೇದಾ ರಾವ್ ‘ತ್ರಿವೇಣಿ’ ಪಾತ್ರದಲ್ಲಿ ಮುಖ್ಯ ಭೂಮಿಕೆಯಲ್ಲಿ ನಟಿಸಿದ್ದಾರೆ.

ಕಾರ್ತಿಕ್ ಶರ್ಮಾ, ಪ್ರತಾಪ್ ಕೃಷ್ಣ ಮತ್ತು ಮನೋಜ್ ಕುಮಾರ್ ಜಂಟಿಯಾಗಿ ಈ ಚಿತ್ರವನ್ನು ನಿರ್ಮಿಸಿದ್ದಾರೆ. ಕೆನಡಾದಲ್ಲಿ ಸಿನಿಮಾಟೋಗ್ರಫಿ ಕಲಿತು, ಮರಾಠಿ ಚಿತ್ರಗಳು ಹಾಗೂ ಜಾಹೀರಾತುಗಳಲ್ಲಿ ಅನುಭವ ಹೊಂದಿರುವ ಕಾರ್ತಿಕ್ ಅವರ ಶಾಲಾ ಗೆಳೆಯ ಸಾಗರ್ ಆಥಡ್ಕರ್ ಅವರ ಛಾಯಾಗ್ರಹಣ ಚಿತ್ರದ ದೃಶ್ಯ ವೈಭವವನ್ನು ಹೆಚ್ಚಿಸಿದೆ.

ಇತ್ತೀಚಿನ ದಿನಗಳಲ್ಲಿ ಹೊಸಬರ ಸಿನಿಮಾಗಳಿಗೆ ಆಡಿಯೋ ಮಾರುಕಟ್ಟೆಯಲ್ಲಿ ಬೇಡಿಕೆ ಕಡಿಮೆಯಿರುವ ಸಂದರ್ಭದಲ್ಲಿ, ಸ್ಯಾಂಡಲ್‌ವುಡ್‌ನ ಪ್ರತಿಷ್ಠಿತ ಸಂಸ್ಥೆ ‘ಹೊಂಬಾಳೆ ಮ್ಯೂಸಿಕ್’ ಭಾವಾಂತರ ಚಿತ್ರದ ಆಡಿಯೋ ಹಕ್ಕುಗಳನ್ನು ಪಡೆದುಕೊಂಡು ಇಂಡಿಪೆಂಡೆಂಟ್ ಆಲ್ಬಂಗೆ ಅಭೂತಪೂರ್ವ ಪ್ರೋತ್ಸಾಹ ನೀಡಿರುವುದು ಚಿತ್ರತಂಡದ ಉತ್ಸಾಹವನ್ನು ದುಪ್ಪಟ್ಟು ಮಾಡಿದೆ. ಅಪರೂಪದ ಕಥಾವಸ್ತು, ಭಾವನಾತ್ಮಕ ಸನ್ನಿವೇಶಗಳು ಮತ್ತು ಹೊಸ ತಲೆಮಾರಿನ ತಂತ್ರಜ್ಞರ ಶ್ರಮದಿಂದ ಮೂಡಿಬಂದಿರುವ ‘ಭಾವಾಂತರ’ ಸದ್ಯದಲ್ಲೇ ಬೆಳ್ಳಿಪರದೆಯ ಮೇಲೆ ಬರಲು ಸಜ್ಜಾಗಿದೆ.

ShareTweetSendShare
Join us on:

Related Posts

sathya-son-of-harishchandra-teaser-release-nirup-bhandari-shivarajkumar

ನಿರೂಪ್‌ ಭಂಡಾರಿ ನಟನೆಯ ʻಸತ್ಯ ಸನ್‌ ಆಫ್‌ ಹರಿಶ್ಚಂದ್ರʼ ಸಿನಿಮಾದ ಟೀಸರ್‌ ರಿಲೀಸ್;‌ ಅತಿಥಿ ಪಾತ್ರದಲ್ಲಿ ಶಿವರಾಜ್‌ಕುಮಾರ್‌ ನಟನೆ

by admin
October 27, 2026
0

ಬೆಂಗಳೂರು: ‘ರಂಗಿತರಂಗ’ ಖ್ಯಾತಿಯ ನಟ ನಿರೂಪ್‌ ಭಂಡಾರಿ ನಾಯಕರಾಗಿ ನಟಿಸಿರುವ ಬಹುನಿರೀಕ್ಷಿತ ‘ಸತ್ಯ ಸನ್‌ ಆಫ್‌ ಹರಿಶ್ಚಂದ್ರ’ ಸಿನಿಮಾದ ಟೀಸರ್‌ ಅಧಿಕೃತವಾಗಿ ಬಿಡುಗಡೆಯಾಗಿದೆ. ತೀರ್ಥಹಳ್ಳಿ ಸೇರಿದಂತೆ ಸುಂದರ...

its-a-medical-miracle-ott-success-15-million-viewing-minutes-manoramamax

ಒಟಿಟಿಯಲ್ಲಿ ‘ಇಟ್ಸ್ ಎ ಮೆಡಿಕಲ್ ಮಿರಾಕಲ್’ ಧಮಾಕ; ಮೊದಲ ವಾರದಲ್ಲೇ 1.5 ಕೋಟಿ ನಿಮಿಷಗಳ ವೀಕ್ಷಣಾ ಸಮಯ ದಾಖಲು, 4 ಭಾಷೆಗಳಲ್ಲಿ ಸ್ಟ್ರೀಮಿಂಗ್ ಆರಂಭ

by admin
October 27, 2026
0

ಬೆಂಗಳೂರು: ಚಿತ್ರಮಂದಿರಗಳಲ್ಲಿ ಪ್ರೇಕ್ಷಕರ ಮೆಚ್ಚುಗೆಗೆ ಪಾತ್ರವಾಗಿದ್ದ ಜನಪ್ರಿಯ ಕಾಮಿಕ್ ಥ್ರಿಲ್ಲರ್ ‘ಇಟ್ಸ್ ಎ ಮೆಡಿಕಲ್ ಮಿರಾಕಲ್’ ಇದೀಗ ಡಿಜಿಟಲ್ ಜಗತ್ತಿನಲ್ಲೂ ಭರ್ಜರಿ ಯಶಸ್ಸು ಕಾಣುತ್ತಿದೆ. ಪ್ರಸಿದ್ಧ ಒಟಿಟಿ...

naman-arora-kannada-debut-hubballi-hunters-sandalwood

ಇಂಡಿಯಾಸ್ ಗಾಟ್ ಲೇಟೆಂಟ್’ ಖ್ಯಾತಿಯ ನಟ ನಮನ್ ಅರೋರಾ ಸ್ಯಾಂಡಲ್‌ವುಡ್‌ಗೆ ಎಂಟ್ರಿ; ‘ಹುಬ್ಬಳ್ಳಿ ಹಂಟರ್ಸ್’ ಚಿತ್ರದ ಮೂಲಕ ಚಂದನವನಕ್ಕೆ ಪಾದಾರ್ಪಣೆ

by admin
October 27, 2026
0

ಬೆಂಗಳೂರು: ದೇಶಾದ್ಯಂತ ಡಿಜಿಟಲ್ ಮನರಂಜನಾ ಲೋಕದಲ್ಲಿ ಹಾಗೂ ಬಾಲಿವುಡ್ ಚಿತ್ರರಂಗದಲ್ಲಿ ತಮ್ಮ ಸಹಜ ಹಾಸ್ಯ ಮತ್ತು ನಟನೆಯ ಮೂಲಕ ಗಮನ ಸೆಳೆದಿರುವ ಖ್ಯಾತ ನಟ ಹಾಗೂ ಸ್ಟ್ಯಾಂಡಪ್...

navu-tumba-olleyavaru-kannada-movie-trailer-release-december-2026

ಪಪ್ಪಿ’ ತಂಡದಿಂದ ಮತ್ತೊಂದು ಜವಾರಿ ಸೊಗಡಿನ ಚಿತ್ರ; ‘ನಾವು ತುಂಬಾ ಒಳ್ಳೆಯವರು’ ಟ್ರೇಲರ್‌ ಬಿಡುಗಡೆ, ಡಿಸೆಂಬರ್‌ನಲ್ಲಿ ಸಿನಿಮಾ ರಿಲೀಸ್

by admin
October 27, 2026
0

ಕಳೆದ ವರ್ಷ ಪ್ರೇಕ್ಷಕರ ಮನಗೆದ್ದು ಗಮನಾರ್ಹ ಯಶಸ್ಸು ಕಂಡಿದ್ದ ‘ಪಪ್ಪಿ’ ಸಿನಿಮಾದ ಯಶಸ್ವಿ ತಂಡದಿಂದ ಇದೀಗ ಮತ್ತೊಂದು ಹೊಸ ಚಿತ್ರ ತೆರೆಗೆ ಬರಲು ಸಜ್ಜಾಗಿದೆ. ನಿರ್ದೇಶಕ ಆಯುಷ್...

premada-oorali-movie-100-crore-box-office-success-director-manoj-kumar

ಭರ್ಜರಿ ಯಶಸ್ಸು ಕಾಣುವ ಮೂಲಕ ‘ಪ್ರೇಮದ ಊರಲಿ’ ಸಿನಿಮಾ ಬಾಕ್ಸ್ ಆಫೀಸ್‌ನಲ್ಲಿ ನೂರು ಕೋಟಿ

by admin
October 27, 2026
0

ಭರ್ಜರಿ ಯಶಸ್ಸು ಕಾಣುವ ಮೂಲಕ 'ಪ್ರೇಮದ ಊರಲಿ' ಸಿನಿಮಾ ಬಾಕ್ಸ್ ಆಫೀಸ್‌ನಲ್ಲಿ ನೂರು ಕೋಟಿ ರೂಪಾಯಿಗಳ ಮೈಲಿಗಲ್ಲು ತಲುಪಿದೆ. ಹಾಸನ ಜಿಲ್ಲೆಯ ಬೇಲೂರು ತಾಲ್ಲೂಕಿನ ಅಂದಲೆ ಗ್ರಾಮದವರಾದ...

Load More

Saakshatv News

  • Home
  • About Us
  • Contact Us
  • Privacy Policy

© 2026 SaakshaTV - All Rights Reserved | Powered by Kalahamsa Infotech Pvt. ltd.

No Result
View All Result
  • Home
  • Newsbeat
  • State
    • Kalyana karnataka
    • Karavali Karnataka
    • Malenadu Karnataka
    • Mumbai Karnataka
    • Samagra karnataka
    • Hale Mysore
  • Politics
  • National
  • International
  • Crime
  • Cinema
  • Sports
  • Astrology
  • Health
  • More
    • Business
    • Asia Cup 2022
    • Marjala Manthana
    • Cooking
    • Culture
    • GALLERY
    • Saaksha Special
    • Life Style
    • TECHNOLOGY
    • Travel
    • Viral News
    • Bigg Boss 8
    • IPL 2021
    • CPL 2020
    • IPL 2020

© 2026 SaakshaTV - All Rights Reserved | Powered by Kalahamsa Infotech Pvt. ltd.

  • →
  • Telegram