ವೃದ್ಧ ದಂಪತಿಗಳ ದಾರುಣ ಹತ್ಯೆ Shaaksha Tv
ದಾವಣಗೆರೆ: ಸೋಮವಾರ ತಡರಾತ್ರಿ ವೃದ್ಧ ದಂಪತಿಗಳನ್ನು ಕೊಲೆ ಮಾಡಿರುವ ಘಟನೆ ಎಲೆಬೇತೂರು ಗ್ರಾಮದಲ್ಲಿ ನಡೆದಿದೆ. ಇಂದು ಬೆಳಿಗ್ಗೆ ಪ್ರಕರಣ ಬೆಳಕಿಗೆ ಬಂದಿದೆ.
ಗ್ರಾಮದ ಮನೆಯೊಂದರಲ್ಲಿ 80 ವರ್ಷದ ಗುರುಸಿದ್ದಯ್ಯ ಮತ್ತು ಇವರ ಪತ್ನಿ 75 ವರ್ಷದ ಸರೋಜಮ್ಮ ವಾಸವಾಗಿದ್ದರು. ಇವರಿಗೆ ಇಬ್ಬರೂ ಹೆಣ್ಣುಮಕ್ಕಳಿದ್ದು, ಮದುವೆ ಮಾಡಿದ್ದರು. ಹಾಗಾಗಿ ಇವರು ಇಬ್ಬರೇ ವಾಸವಾಗಿದ್ದರು.
ಸೋಮವಾರ ರಾತ್ರಿ ಮನೆಗೆ ನುಗ್ಗಿದ ದುಷ್ಕರ್ಮಿಗಳು ದಂಪತಿಯನ್ನು ಮಾರಕಾಸ್ತ್ರಗಳಿಂದ ಕೊಚ್ಚಿ ಬರ್ಬರವಾಗಿ ಕೊಲೆ ಮಾಡಿದ್ದಾರೆ. ದಂಪತಿಗಳು ಕೊಲೆಯಾಗಿರುವುದು ಯಾರಿಗೂ ತಿಳಿಯದಂತೆ ಆರೋಪಿಗಳು ಹೊರಗಿನಿಂದ ಮನೆ ಬಾಗಿಲನ್ನು ಹಾಕಿಕೊ0ಡು ಪರಾರಿಯಾಗಿದ್ದಾರೆ.
ಇಂದು ಬೆಳೆಗ್ಗೆ ಪಕ್ಕದ ಮನೆಯವರು ಸರೋಜಮ್ಮರಿಗೆ ಭೇಟಿಯಾಗಲೆಂದು ಬಂದಿದ್ದಾರೆ. ಮನೆಯ ಬಾಗಿಲು ಹೊರಗಿನಿಂದ ಹಾಕಿರುವುದನ್ನು ಕಂಡು ಬಾಗಿಲನ್ನು ತೆಗೆದು ಒಳಗೆ ಹೋಗಿದ್ದಾರೆ. ಆಗ ವೃದ್ಧ ದಂಪತಿಗಳು ಕೊಲೆಯಾಗಿದ್ದು, ರಕ್ತದ ಮಡುವಿನಲ್ಲಿದ್ದಿದ್ದನ್ನು ಕಂಡು ಪೊಲೀಸರಿಗೆ ವಿಷಯ ತಿಳಿಸಿದ್ದಾರೆ. ಸ್ಥಳಕ್ಕೆ ಆಗಮಿಸಿದ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಆರೋಪಿಗಳಿಗಾಗಿ ಬಲೆ ಬೀಸಿದ್ದಾರೆ. ಇನ್ನೂ ದಂಪತಿ ಹತ್ಯೆ ಗ್ರಾಮಸ್ಥರಲ್ಲಿ ಭಯದ ವಾತಾವರಣ ಸೃಷ್ಟಿಸಿದೆ.








