ಏರ್ ಇಂಡಿಯಾದ ಹಸ್ತಾಂತರಕ್ಕೂ ಮುನ್ನ ಪ್ರಧಾನಿ ಭೇಟಿ ಮಾಡಿದ ಟಾಟಾ ಸನ್ಸ್ ಅಧ್ಯಕ್ಷರು
ಟಾಟಾ ಗ್ರೂಪ್‌ಗೆ ಏರ್ ಇಂಡಿಯಾವನ್ನು ಅಧಿಕೃತ ಹಸ್ತಾಂತರಿಸುವ ಮೊದಲು ಟಾಟಾ ಸನ್ಸ್ ಅಧ್ಯಕ್ಷ ಎನ್ ಚಂದ್ರಶೇಖರನ್ ಗುರುವಾರ ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿ ಮಾಡಿದರು. ಪ್ರಧಾನಿ ಮೋದಿ ಮತ್ತು ಟಾಟಾ ಅಧ್ಯಕ್ಷರ ಭೇಟಿಯ ಫೋಟೋವನ್ನು ಪ್ರಧಾನಿ ಕಾರ್ಯಾಲಯ ಬಿಡುಗಡೆ ಮಾಡಿದೆ.
ಏರ್ ಇಂಡಿಯಾದ ಅಧಿಕೃತ ಹಸ್ತಾಂತರವು ಕಳೆದ ಕೆಲವು ದಶಕಗಳಲ್ಲಿ ಖಾಸಗೀಕರಣದ ಮೊದಲ ಪ್ರಮುಖ ಯಶಸ್ವಿ ಒಪ್ಪಂದವಾಗಿದೆ. ಇದು ಟಾಟಾ ಗ್ರೂಪ್‌ನ ಮಾಜಿ ಅಧ್ಯಕ್ಷ ಜೆಆರ್‌ಡಿ ಟಾಟಾ ಅವರು 1932 ರಲ್ಲಿ ಆರಂಭಿಸಿದ ಏರ್ ಇಂಡಿಯಾ ಸ್ವ ಸಂಸ್ಥೆಗೆ ಮರಳುವುದನ್ನು ಸಹ ಸೂಚಿಸುತ್ತದೆ. Tata Sons chairman meets PM Modi before official handover of Air India
ಟಾಟಾ ಸಮೂಹವು ಏರ್ ಇಂಡಿಯಾಯವನ್ನ ಸ್ವಾಧಿನಪಡಿಸಿಕೊಳ್ಳುವ ಮೊದಲ ಕ್ರಮವಾಗಿ ವರ್ಧಿತ ಊಟ ಸೇವೆ ನೀಡುತ್ತಿದೆ. ಈಗಾಗಲೇ ಮುಂಬೈನಿಂದ ನಾಲ್ಕು ವಿಮಾನಗಳಲ್ಲಿ ಗುರುವಾರ ಜಾರಿಗೆ ತರಲಾಗಿದೆ. ಟಾಟಾ ಗ್ರೂಪ್ AI864 (ಮುಂಬೈ-ದೆಹಲಿ), AI687 (ಮುಂಬೈ-ದೆಹಲಿ), AI945 (ಮುಂಬೈ-ಅಬುಧಾಬಿ) ಮತ್ತು AI639 (ಮುಂಬೈ-ಬೆಂಗಳೂರು) ನಲ್ಲಿ ವರ್ಧಿತ ಊಟ ಸೇವೆಗಳನ್ನು ಒದಗಿಸಿದೆ.








