Triple Talaq ಇನ್ಸ್ಟಾಗ್ರಾಮ್ ನಲ್ಲೇ ತಲಾಖ್ ಕೊಟ್ಟವನ ವಿರುದ್ಧ ಕೇಸ್..!!!
ತಲಾಖ್ ಕಾನೂನುಬಾಹಿರವೆಂದು ಕಾನೂನು ಜಾರಿಗೆ ತಂದಿದ್ದರೂ ಸಹ ಈಗಲೂ ಅಲ್ಲಲ್ಲಿ ಈ ಇಂತಹ ಪ್ರಕರಣಗಳು ಬೆಳಕಿಗೆ ಬರುತ್ತಲೇ ಇವೆ.. ಇದೀಗ ಇನ್ಸ್ಟಾಗ್ರಾಮ್ ನಲ್ಲೇ ವ್ಯಕ್ತಿಯೊಬ್ಬ ತನ್ನ ಪತ್ನಿಗೆ ತ್ರಿವಳಿ ತಲಾಖ್ ( TRIPLE TALAQ) ನೀಡಿದ್ದಾನೆ… ಗುಜರಾತ್ ನ ಆನಂದ್ ಜಿಲ್ಲೆಯಲ್ಲಿ ಈ ಘಟನೆ ನಡೆದಿದೆ. 28 ವರ್ಷದ ವ್ಯಕ್ತಿ ತನ್ನ ಪತ್ನಿಗೆ ಇನ್ಸ್ಟಾಗ್ರಾಮ್ ನ ಮೂಲಕ ತಲಾಖ್ ನೀಡಿದ್ದು ಈತನ ವಿರುದ್ಧ ಗುಜರಾತ್ ಪೊಲೀಸರು ದೂರು ದಾಖಲಿಸಿದ್ದಾರೆ.
ಮಹಿಸಾಗರ್ ಜಿಲ್ಲೆಯ ದೇಬಾರ್ ಗ್ರಾಮದ ವ್ಯಕ್ತಿ 2019ರ ನವೆಂಬರ್ನಲ್ಲಿ ಆನಂದ್ ಜಿಲ್ಲೆಯ ಉಮ್ರೆತ್ ನ 27 ವರ್ಷದ ಮಹಿಳೆಯನ್ನು ವಿವಾಹವಾಗಿದ್ದನು. ಗಂಡ, ಹೆಂಡತಿ ನಡುವೆ ಆಗಾಗ ಜಗಳ ನಡೆಯುತ್ತಿದ್ದು, ಜುಲೈನಲ್ಲಿ ಮಹಿಳೆಗೆ ತಲಾಖ್ ನೀಡುವಂತೆ ಹೇಳಿ ಆಕೆಯನ್ನು ಗಂಡನ ಮನೆಯಿಂದ ಹೊರಗೆ ಹಾಕಲಾಗಿದೆ. ಬಳಿಕ ಮಹಿಳೆ ತನ್ನ ಪೋಷಕರ ಮನೆಗೆ ಹಿಂದಿರುಗಿ ವಾಸಿಸುತ್ತಿದ್ದಳು. ಆದರೆ ಈ ವೇಳೆ ಮಹಿಳೆಗೆ ತ್ರಿವಳಿ ತಲಾಖ್ ವಿರುದ್ಧ ಜಾರಿಯಾಗಿರುವ ಕಾನೂನಿನ ಬಗ್ಗೆ ತಿಳಿದಿರಲಿಲ್ಲ. ಹಾಗಾಗಿ ಆಗ ದೂರು ನೀಡಿರಲಿಲ್ಲ.
man pronounced triple talaq to his wife through instagram
ಇತ್ತೀಚೆಗೆ ಸೋಶಿಯಲ್ ಮೀಡಿಯಾದಲ್ಲಿ ತಮ್ಮ ಪತಿಯ ಚಟುವಟಿಕೆಯನ್ನು ಪರಿಶೀಲಿಸಲು ಇನ್ಸ್ಟಾಗ್ರಾಮ್ನಲ್ಲಿ ಫೇಕ್ ಪ್ರೊಫೈಲ್ ಕ್ರಿಯೆಟ್ ಮಾಡಿ ಮಾತನಾಡಲು ಪ್ರಯತ್ನಿಸಿದ್ದಾರೆ. ಈ ವೇಳೆ ಈ ಪ್ರೊಫೈಲ್ ಹಿಂದೆ ತನ್ನ ಪತ್ನಿ ಇದ್ದಾಳೆ ಎಂಬುವುದನ್ನು ತಿಳಿದು ವ್ಯಕ್ತಿ ಮತ್ತೊಮ್ಮೆ ತ್ರಿವಳಿ ತಲಾಖ್ ಉಚ್ಚರಿಸಿದ್ದಾನೆ. ನಂತರ ಈ ಕುರಿತಂತೆ ಮಹಿಳೆ ಕುಟುಂಬಕ್ಕೆ ಮಾಹಿತಿ ನೀಡಿ, ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ..