ಮತಾಂತರಕ್ಕೆ ಹೆದರಿ ವಿದ್ಯಾರ್ಥಿನಿ ಆತ್ಮಹತ್ಯೆ ಪ್ರಕರಣ – ಸಿಬಿಐಗೆ ವರ್ಗಾವಣೆ.
ಮತಾಂತರಕ್ಕೆ ಹೆದರಿ ಆತ್ಮಹತ್ಯೆ ಮಾಡಿಕೊಂಡಿರುವ ತಾಂಜಾವೂರಿನ ವಿದ್ಯಾರ್ಥಿನಿ ಪ್ರಕರಣಕ್ಕೆ ಸಂಬಂಧಿಸಿದಂತೆ ಮದ್ರಾಸ್ ಹೈಕೋರ್ಟ್ನ ಮಧುರೈ ಪೀಠ ತನಿಖೆಯನ್ನ ಸಿ ಬಿ ಐ ಗೆ ವರ್ಗಾಯಿಸಿದೆ.
ಶಾಲಾ ಬಾಲಕಿ ಮತಾಮತರಕ್ಕೆ ಹೆದರಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ವಿವಾದಾತ್ಮಕ ವೀಡಿಯೋ ಚಿತ್ರಿಸಕರಿಸಿದ್ದ ವ್ಯಕ್ತಿ ವಿಚಾರಣೆಗೆ ಸಹಕರಿಸುತ್ತಿಲ್ಲ ಎಂದು ರಾಜ್ಯ ಸರ್ಕಾರ ಕೋರ್ಟ್ ಗೆ ತಿಳಿಸಿತ್ತು. ಬಾಲಕಿಯ ಪೋಷಕರ ಪರ ವಕೀಲರು ನಮಗೆ ಸರ್ಕಾರದ ತನಿಖೆಯಲ್ಲಿ ನಮಗೆ ನಂಬಿಕೆ ಇಲ್ಲ ಎಂದು ತಿಳಿಸಿದ್ದರು.
ಪ್ರಕರಣದ ವಿಚಾರಣೆ ನಡೆಸಿದ ಮದ್ರಾಸ್ ಹೈ ಕೋರ್ಟ್ ಕೇಸ್ ಅನ್ನು ಸಿ ಬಿ ಐ ಗೆ ವಹಿಸಿದೆ. ಮಿಷನರಿ ಶಾಲೆಯಲ್ಲಿ ಓದುತ್ತಿದ್ದ ಬಾಲಕಿಯನ್ನ ಬಲವಂತವಾಗಿ ಮತಾಂತರಗೊಳಿಸಲಾಗುತ್ತಿತ್ತು ಎಂಬ ಆರೋಪ ಕೇಳಿಬಂದಿತ್ತು.








