2022-23 ರ ಆರ್ಥಿಕ ಬೆಳವಣಿಗೆ ದರ 8 ರಿಂದ 8.5ರಷ್ಟು ಇರಲಿದೆ – ಆರ್ಥಿಕ ಸಮೀಕ್ಷೆ
ಇಂದಿನಿಂದ ನಡೆಯುತ್ತಿರುವ ಸಂಸತ್ತ ಅಧಿವೇಶನದಲಿ ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಆರ್ಥಿಕ ಸಮೀಕ್ಷೆ ಮಂಡಿಸಿದ್ದಾರೆ. 2022-23 ರಲ್ಲಿ ನೈಜ ಜೆಡಿಪಿ ಬೆಳವಣಿಗೆ ದರ ಶೇ. 8 ರಿಂದ 8-5 ರಷ್ಟು ಇರಲಿದೆ ಎಂದು ಆರ್ಥಿಕ ಸಮೀಕ್ಷೆ ವರದಿ ಅಂದಾಜಿಸಿದೆ.
ದೇಶದಲ್ಲಿ ವ್ಯಾಪಕವಾಗಿ ಕೋವಿಡ್ ಲಸಿಕೆ ನೀಡಿಕೆ, ದೃಢವಾದ ರಫ್ತು ಬೆಳವಣಿಗೆ ಮತ್ತು ಬಂಡವಾಳದ ವೆಚ್ಚವನ್ನು ಹೆಚ್ಚಿಸಲು ಹಣಕಾಸಿನ ಸ್ಥಳಾವಕಾಶದ ಲಭ್ಯತೆ 2022-23ರಲ್ಲಿ ಆರ್ಥಿಕ ಬೆಳವಣಿಗೆಗೆ ಬೆಂಬಲ ನೀಡಲಿವೆ ಎಂದು ವರದಿ ಹೇಳಿದೆ.
ಆರ್ಥಿಕ ಸಮೀಕ್ಷೆ ಎಂದರೇನು?
ಪ್ರತಿ ವರ್ಷ ಫೆಬ್ರವರಿ 1 ರಂದು ಬಜೆಟ್ ಮಂಡಿಸಲಾಗುತ್ತದೆ. ಕಳೆದ ವರ್ಷ ಜನವರಿ 29 ರಂದು ಮಂಡಿಸಲಾಗಿದ್ದರೂ ಆರ್ಥಿಕ ಸಮೀಕ್ಷೆಯನ್ನು ಅದರ ಒಂದು ದಿನದ ಮೊದಲು ಹಾಕಲಾಗಿದೆ. ಆರ್ಥಿಕ ಸಮೀಕ್ಷೆಯು ಬಜೆಟ್ನ ಆಧಾರವಾಗಿದೆ ಮತ್ತು ಅದರಲ್ಲಿ ಆರ್ಥಿಕತೆಯ ಸಂಪೂರ್ಣ ಚಿತ್ರವನ್ನು ಪ್ರಸ್ತುತಪಡಿಸಲಾಗುತ್ತದೆ ಮತ್ತು ಸಂಪೂರ್ಣ ಖಾತೆಯನ್ನು ಇಡಲಾಗುತ್ತದೆ. ಬೇರೆ ರೀತಿಯಲ್ಲಿ ಹೇಳುವುದಾದರೆ, ಆರ್ಥಿಕ ಸಮೀಕ್ಷೆಯು ದೇಶದ ಆರ್ಥಿಕ ಆರೋಗ್ಯದ ಖಾತೆಯಾಗಿದೆ. ಈ ಮೂಲಕ ಸರ್ಕಾರವು ದೇಶದ ಆರ್ಥಿಕತೆಯ ಸ್ಥಿತಿಯನ್ನು ಹೇಳುತ್ತದೆ. ಇದರಲ್ಲಿ ವರ್ಷವಿಡೀ ಅಭಿವೃದ್ಧಿಯ ಟ್ರೆಂಡ್ ಹೇಗಿತ್ತು, ಯಾವ ಪ್ರದೇಶದಲ್ಲಿ ಎಷ್ಟು ಬಂಡವಾಳ ಬಂತು, ವಿವಿಧ ಯೋಜನೆಗಳು ಹೇಗೆ ಜಾರಿಯಾದವು ಇತ್ಯಾದಿ. ಇದರೊಂದಿಗೆ, ಇದು ಸರ್ಕಾರದ ನೀತಿಗಳ ಬಗ್ಗೆ ಮಾಹಿತಿಯನ್ನು ಒಳಗೊಂಡಿದೆ.
2022-23 ರಲ್ಲಿ ಭಾರತದಲ್ಲಿನ ಆರ್ಥಿಕ ಬೆಳವಣಿಗೆ ಶೇ. 8.7 ರಿಂದ ಶೇ. 7.5 ರಷ್ಟು ಇರಲಿದೆ ಎಂದು ವಿಶ್ವ ಬ್ಯಾಂಕ್ ಮತ್ತು ಏಷಿಯನ್ ಅಭಿವೃದ್ಧಿ ಬ್ಯಾಂಕ್ ಇತ್ತೀಚಿಗೆ ಅಂದಾಜಿಸಿತ್ತು








