IPL 2022 | ಲಕ್ನೋ ಸೂಪರ್ ಜೈಂಟ್ಸ್ ನ ಲೋಗೋದಲ್ಲಿ ‘ಮಿಸ್ಟೇಕ್’ ipl-2022-lucknow-super-giants-mistake-logo saaksha tv
ಟೀಂ ಇಂಡಿಯಾದ ಉಪನಾಯಕ ಕೆ.ಎಲ್.ರಾಹುಲ್ ನಾಯಕತ್ವದ ಲಕ್ನೋ ಸೂಪರ್ ಜೈಂಟ್ಸ್ ತಂಡದ ಲೋಗೋ ಇಂದು ಬಿಡುಗಡೆಯಾಗಿದೆ.
ಲೋಗೋವನ್ನು ಬಹಳ ಎಚ್ಚರಿಕೆಯಿಂದ ವಿನ್ಯಾಸಗೊಳಿಸಲಾಗಿದೆ ಎಂದು ಲಕ್ನೋ ಮಾಲೀಕ ಸಂಜೀವ್ ಗೋಯೆಂಕಾ ಹೇಳಿದ್ದಾರೆ.
ಆದರೆ, ಲಕ್ನೋ ಸೂಪರ್ ಜೈಂಟ್ಸ್ (ಎಲ್ಎಸ್ಜಿ) ಲೋಗೋದಲ್ಲಿ ದೊಡ್ಡ ತಪ್ಪೊಂದು ಎದ್ದು ಕಾಣುತ್ತಿದೆ.
ಉದ್ಯಮಿ ಸಂಜೀವ್ ಗೋಯೆಂಕಾ ಅಂತಹ ಸಣ್ಣ ಲಾಜಿಕ್ ಅನ್ನು ಹೇಗೆ ಮರೆತರು ಎಂದು ಸೋಶಿಯಲ್ ಮಿಡಿಯಾದಲ್ಲಿ ವ್ಯಂಗ್ಯವಾಡುತ್ತಿದ್ದಾರೆ.

ವಿವರಗಳಿಗೆ ಹೋಗುವುದಾದರೆ.. ಗರುಡ ಪಕ್ಷಿಯನ್ನು ಹೋಲುವ LSG ಲಾಂಛನವನ್ನು ಫ್ರಾಂಚೈಸಿ ಮಾಲೀಕ ಸಂಜೀವ್ ಗೋಯೆಂಕಾ ಅವರು ತ್ರಿವರ್ಣ ಧ್ವಜದ ಮೂರು ಬಣ್ಣಗಳಲ್ಲಿ ರೆಕ್ಕೆಗಳನ್ನು, ಮಧ್ಯದಲ್ಲಿ ಚೆಂಡು ಮತ್ತು ಬ್ಯಾಟ್ನೊಂದಿಗೆ ವಿಶೇಷವಾಗಿ ವಿನ್ಯಾಸಗೊಳಿಸಿದ್ದಾರೆ. ಇಷ್ಟೆಲ್ಲ ಆದರೂ ಲೋಗೋದಲ್ಲಿ ತಪ್ಪು ಎದ್ದು ಕಾಣುತ್ತಿದೆ.
ಅದೇನಂದರೇ ಕ್ರಿಕೆಟ್ ಮಾದರಿಗೆ ಅನುಗುಣವಾಗಿ ಚೆಂಡಿನ ಬಣ್ಣ ಬದಲಾಗುತ್ತದೆ.
ಐಸಿಸಿ ನಿಯಮಗಳ ಪ್ರಕಾರ, ಟೆಸ್ಟ್ ಕ್ರಿಕೆಟ್ ನಲ್ಲಿ ಕೆಂಪು ಚೆಂಡನ್ನು, ಹಗಲು ಮತ್ತು ರಾತ್ರಿ ಟೆಸ್ಟ್ಗಳಿಗೆ ಗುಲಾಬಿ ಚೆಂಡನ್ನು ಮತ್ತು ODI ಮತ್ತು T20 ಗಳಿಗೆ ಬಿಳಿ ಚೆಂಡನ್ನು ಬಳಸಲಾಗುತ್ತದೆ.
ಆದರೆ, ಎಲ್ ಎಸ್ ಜಿ ಲೋಗೋದಲ್ಲಿ ಬಿಳಿ ಚೆಂಡಿನ ಜಾಗದಲ್ಲಿ ಕೆಂಪು ಚೆಂಡು ಕಾಣಿಸಿಕೊಂಡಿದೆ. ಇದು ಸೋಶಿಯಲ್ ಮೀಡಿಯಾದಲ್ಲಿ ಟ್ರೋಲ್ ಗೆ ಗುರಿಯಾಗಿದೆ.








