ರೋಗಿಯ ಜೀವ ಉಳಿಸಿದ ಟ್ರಾಫಿಕ್ ಪೊಲೀಸ್ Saaksha Tv
ಬೆಂಗಳೂರು; ಟ್ರಾಪಿಕ್ ಪೊಲೀಸ್ ಅವರ ಸಮಯ ಪ್ರಜ್ಞೆಯಿಂದ ವ್ಯಕ್ತಿಯ ಪ್ರಾಣ ಉಳಿದರವ ಘಟನೆ ವಿಧಾನಸೌಧದ ಸಿಐಡಿ ಕಚೇರಿ ಬಳಿ ನಡೆದಿದೆ.
ವ್ಯಕ್ತಿಯೊಬ್ಬರನ್ನು ಆಂಬುಲೆನ್ಸ್ ಮೂಲಕ ಗ್ಲೋಬಲ್ ಆಸ್ಪತ್ರೆಯಿಂದ ಮತ್ತೊಂದು ಆಸ್ಪತ್ರೆಗೆ ಸಾಗಿಸಲಾಗುತ್ತಿತ್ತು. ವಿಧಾನಸೌಧದ ಸಿಐಡಿ ಕಚೇರಿ ಬಳಿ ಟಯರ್ ಪಂಕ್ಚರ್ ಆಗಿತ್ತು. ರೋಗಿಯ ಪತ್ನಿ ಹಾಗೂ ಮಗಳು ಸಹಾಯಕ್ಕಾಗಿ ಅಂಗಲಾಚಿದರೂ ಯಾರೂ ನೆರವಿಗೆ ಧಾವಿಸಲಿಲ್ಲ. ಬೇರೆ ಆಂಬುಲೆನ್ಸ್ ಗಳಿಗೆ ಕರೆಮಾಡಿದರೂ ಪ್ರಯೋಜನಾವಗಲಿಲ್ಲ.
ರಸ್ತೆ ಬದಿಯಲ್ಲಿ ನಿಂತು ತಾಯಿ ಮಗಳು ಸಹಾಯಕ್ಕಾಗಿ ಅಂಗಲಾಚುತ್ತಿರುವುದನ್ನು ಕಂಡ ಕಬ್ಬನ್ ಪಾರ್ಕ್ ಸಂಚಾರ ಪೊಲೀಸ್ ಠಾಣೆಯ ಸಿಬ್ಬಂದಿ ಕಾಶಪ್ಪ ಕಲ್ಲೂರು ಕೂಡ ಆಂಬುಲೆನ್ಸ್ ಗೆ ಕರೆ ಮಾಡಿದ್ದಾರೆ. ಆದರೆ ಸುಮಾರು ಹೊತ್ತು ಕಾದರೂ ಆಂಬುಲೆನ್ಸ್ ಬಂದಿಲ್ಲ. ಹೀಗಾಗಿ ಪಂಕ್ಚರ್ ಆಗಿದ್ದ ಚಕ್ರವನ್ನು ಅವರೇ ಬದಲಿಸಿ ಆಂಬುಲೆನ್ಸ್ ಹೊರಡಲು ನೆರವಾಗಿದ್ದಾರೆ. ಇದರಿಂದ ರೋಗಿಯ ಜೀವ ಉಳಿದಿದೆ








