Bengalore | ಬಿಬಿಎಂಪಿ ಬಜೆಟ್ : ಗೌರವ್ ಗುಪ್ತ ಹೇಳಿದ್ದೇನು..? bengalore-BBMP Budget: What did Gaurav Gupta reaction saaksha tv
ಬೆಂಗಳೂರು : ಬಿಬಿಎಂಪಿ ಬಜೆಟ್ ಕುರಿತ ಚಟುವಟಿಕೆ ಇನ್ನಷ್ಟೇ ಆರಂಭವಾಗಬೇಕಿದೆ ಎಂದು ಬಿಬಿಎಂಪಿ ಮುಖ್ಯ ಆಯುಕ್ತ ಗೌರವ್ ಗುಪ್ತ ತಿಳಿಸಿದ್ದಾರೆ.
ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಮ್ಮ ಆದಾಯದ ಮೂಲ, ಸರ್ಕಾರದ ಆದಾಯ ಮೂಲ ನೋಡಿಕೊಂಡು ಸಿದ್ಧತೆ ಮಾಡಲಾಗುವುದು.
ದಿನನಿತ್ಯದ ನಿರ್ವಹಣೆ, ಕಾಮಗಾರಿಗಳಿಗೆ ಬೇಕಾದ ಅನುದಾನದ ಅಧ್ಯಯನ ಮಾಡಲಾಗುವುದು. ಸಿಎಂ, ಜನಪ್ರತಿನಿಧಿಗಳ ಜೊತೆಗೂ ಚರ್ಚಿಸಲಾಗುವುದು ಎಂದು ತಿಳಿಸಿದರು.
ಇದೇ ವೇಳೆ ಕೋವಿಡ್ ಲಸಿಕೆ ಬಗ್ಗೆ ಮಾಹಿತಿ ನೀಡಿದ ಆಯುಕ್ತರು, ಬಿಬಿಎಂಪಿ ವ್ಯಾಪ್ತಿಯಲ್ಲಿ 1,2 ನೇ ಡೋಸ್, ಬೂಸ್ಟರ್ ಡೋಸ್ ಹಾಗೂ ಮಕ್ಕಳ ಲಸಿಕೆ ಸಮರ್ಪಕವಾಗಿ ನಡೆಯುತ್ತಿದೆ.
ಪ್ರತಿನಿತ್ಯ 60 ಸಾವಿರ ವ್ಯಾಕ್ಸಿನೇಷನ್ ಕೂಡಾ ನಡೆಯುತ್ತಿದೆ. ಹಲವಾರು ಕ್ಯಾಂಪ್ ಗಳಲ್ಲಿ, ಶಾಲಾ ಆವರಣ, ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ನೀಡಲಾಗುತ್ತಿದೆ.
ಶೇಕಡಾ 85% , 15 ವರ್ಷ ಮೇಲ್ಪಟ್ಟ ವಿಧ್ಯಾರ್ಥಿಗಳು ಖಾಸಗಿ ಶಾಲೆಗಳಲ್ಲಿದ್ದಾರೆ .ಖಾಸಗಿ ಶಾಲೆಗಳು ಆನ್ ಲೈನ್ ತರಗತಿಯಲ್ಲಿದ್ದಾರೆ.
ಕೋವಿಡ್ ಕಡಿಮೆಯಾಗಿ ಆಫ್ ಲೈನ್ ತರಗತಿ ಆರಂಭವಾದರೆ ವ್ಯಾಕ್ಸಿನೇಷನ್ ಪ್ರಮಾಣದಲ್ಲೂ ಏರಿಕೆಯಾಗಲಿದೆ. ಒಂದುವಾರದಲ್ಲಿ ಮುಕ್ತಾಯಗೊಳಿಸುವುದು ನಮ್ಮ ಗುರಿ ಎಂದು ತಿಳಿಸಿದರು.









