ಶಿಕ್ಷಣ ವಿಚಾರದಲ್ಲಿ ರಾಜಕೀಯ ಬೆರೆಸಬಾರದು: ಎಂ ಪಿ ರೇಣುಕಾಚಾರ್ಯ Saaksha Tv
ದಾವಣಗೆರೆ: ಉಡುಪಿಯಲ್ಲಿ ಆರು ವಿಧ್ಯಾರ್ಥಿಗಳಿಂದ ಪ್ರಾರಂಭವಾದ ಹಿಜಾಬ್ ವಿವಾದ ಈಗ ರಾಜಕೀಯವಾಗಿದೆ. ಶಿಕ್ಷಣ ವಿಚಾರದಲ್ಲಿ ರಾಜಕೀಯ ಬೆರೆಸಬಾರದು ಎಂದು ಶಾಸಕ ಎಂ ಪಿ ರೇಣುಕಾಚಾರ್ಯ ಹೇಳಿದರು.
ಈ ಬಗ್ಗೆ ಹೊನ್ನಾಳಿ ತಾಲೂಕಿನಲ್ಲಿ ಮಾತನಾಡಿದ ಅವರು, ಎಲ್ಲಾ ಮಕ್ಕಳು ಒಂದಾಗಿರಬೇಕು ಎಂದು ಶಾಲೆಗಳಲ್ಲಿ ಸಮವಸ್ತ್ರ ಮಾಡಲಾಗಿದೆ. ಎಲ್ಲಾ ಮಕ್ಕಳು ಕಡ್ಡಾಯವಾಗಿ ಸಮವಸ್ತ್ರವನ್ನು ಧರಿಸುವಂತೆ ಸರಕಾರ ತೀರ್ಮಾನ ತೆಗೆದುಕೊಂಡಿದೆ. ಈಗ ಬೆಳಗಾವಿ, ಚಿಕ್ಕಮಗಳೂರು, ಮಂಗಳೂರು ಜಿಲ್ಲೆಗಳಲ್ಲಿ ಹಿಜಾಬ್ ವಿವಾದ ಬುಗಿಲೆದ್ದಿದೆ ಎಂದು ಹೇಳಿದ್ದಾರೆ.
ಎಲ್ಲಾ ಕಡೆ ಸಂಘರ್ಷ ಇರಬಾರದು, ಸಮನ್ವಯತೆ ಇರಬೇಕು. ಮಕ್ಕಳಲ್ಲಿ ತಾರತಮ್ಯ ಹೋಗಲಾಡಿಸಲು ಸಮವಸ್ತ್ರದಿಂದ ಮಾತ್ರ ಸಾಧ್ಯ. ಹಿಜಾಬ್, ಕೇಸರಿ ಶಾಲು ಧರಿಸದೆ ಸಮವಸ್ತ್ರ ಧರಿಸುವಂತೆ ಮಕ್ಕಳಿಗೆ ಎಂ ಪಿ ರೇಣುಕಾಚಾರ್ಯ ಮನವಿ ಮಾಡಿದರು.









