ಲತಾ ಮಂಗೇಶ್ಕರ್ ನಿಧನಕ್ಕೆ ಶ್ರೀಲಂಕಾ ಪ್ರಧಾನಿ ಸಂತಾಪ
ಲತಾ ಮಂಗೇಶ್ಕರ್ ಅವರ ಹಾಡುಗಳು ಗಡಿಯನ್ನ ಮಿರಿದ್ದವು ‘ಸಂಗೀತವು ಸಾರ್ವತ್ರಿಕ ಭಾಷೆ’ ಎಂಬ ಪದಗುಚ್ಛಕ್ಕೆ ಜೀವ ತುಂಬಿದ್ದಾರೆ ಎಂದು ಶ್ರೀಲಂಕಾದ ಪ್ರಧಾನಿ ಮಹಿಂದಾ ರಾಜಪಕ್ಸೆ ಅವರು ಗಾಯನ ಲೋಕದ ದಂತ ಕಥೆ ನಿಧನಕ್ಕೆ ಸಂತಾಪ ಸೂಚಿಸಿದ್ದಾರೆ. 92 ವರ್ಷದ ಲತಾ ಮಂಗೇಶ್ಕರ್ ಅವರು 28 ದಿನಗಳಿಂದ ಕೋವಿಡ್ -19 ಚಿಕಿತ್ಸೆಗಾಗಿ ಅಸ್ಪತ್ರೆಯಲ್ಲಿದ್ದರು. ನಂತರ ಬಹು ಅಂಗಾಂಗ ವೈಫಲ್ಯದಿಂದ ಭಾನುವಾರ ಬೆಳಿಗ್ಗೆ 8:12 ಕ್ಕೆ ನಿಧನರಾದರು.
“ರೆಸ್ಟ್ ಇನ್ ಪೀಸ್ ನೈಟಿಂಗೇಲ್ ಆಫ್ ಇಂಡಿಯಾ, #ಲತಾಮಂಗೇಶ್ಕರ್. ಗಡಿಗಳನ್ನು ಮೀರಿದ ದಶಕಗಳ ಮನರಂಜನೆಗೆ ಧನ್ಯವಾದಗಳು ಮತ್ತು ‘ಸಂಗೀತವು ಸಾರ್ವತ್ರಿಕ ಭಾಷೆ’ ಎಂಬ ಪದಗುಚ್ಛಕ್ಕೆ ಜೀವ ನೀಡಿದವರು ಎಂದು ಶ್ರೀಲಂಕಾದ ಪ್ರಧಾನಿ ರಾಜಪಕ್ಸೆ, ಲತಾ ಮಂಗೇಶ್ಕರ್ ಅವರ ಪೋಟೋ ಹಂಚಿಕೊಂಡಿದ್ದಾರೆ.
“ಅವರ ಕುಟುಂಬ ಮತ್ತು ಭಾರತದ ಜನರಿಗೆ ನನ್ನ ತೀವ್ರ ಸಂತಾಪಗಳು. ಅವರ ಸ್ಮರಣೆಯು ಅವರ ಸಂಗೀತದ ಮೂಲಕ ಜೀವಂತವಾಗಿರುತ್ತದೆ” ಎಂದು ಅವರು ಬರೆದುಕೊಂಡಿದ್ದಾರೆ..Lata Mangeshkar gave life to phrase ‘music is a universal language’: Sri Lankan PM
ಪ್ರಮುಖ ವಿರೋಧ ಪಕ್ಷದ ನಾಯಕ ಸಜಿತ್ ಪ್ರೇಮದಾಸ ಕೂಡ ಮಂಗೇಶ್ಕರ್ ಅವರ ಕುಟುಂಬಕ್ಕೆ ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ.”ಲತಾ ಮಂಗೇಶ್ಕರ್ ಅವರು ತಮ್ಮ ಸಮ್ಮೋಹನಗೊಳಿಸುವ ಧ್ವನಿಯಿಂದ ಸಂಸ್ಕೃತಿಗಳಾದ್ಯಂತ ಸೇತುವೆಗಳನ್ನು ನಿರ್ಮಿಸಿದ ದಂತಕಥೆ. ಅವರ ಕುಟುಂಬ, ಸ್ನೇಹಿತರು ಮತ್ತು ಅಭಿಮಾನಿಗಳಿಗೆ ನನ್ನ ಸಂತಾಪಗಳು, ”ಎಂದು ಅವರು ಟ್ವೀಟ್ ಮಾಡಿದ್ದಾರೆ.