wi-vs-ind-2nd-odi | ಸೂರ್ಯ ಕುಮಾರ್ ಯಾದವ್ ಅರ್ಧಶತಕ wi-vs-ind-2nd-odi-surya kumar yadav fifty saaksha tv
ಅಹಮದಾಬಾದ್ : ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ವೆಸ್ಟ್ ಇಂಡೀಸ್ ವಿರುದ್ಧದ 2ನೇ ಏಕದಿನ ಪಂದ್ಯದಲ್ಲಿ ಟೀಂ ಇಂಡಿಯಾದ ಬ್ಯಾಟರ್ ಸೂರ್ಯ ಕುಮಾರ್ ಯಾದವ್ ಅರ್ಧಶತಕ ಸಿಡಿಸಿ ಔಟ್ ಆಗಿದ್ದಾರೆ.
ತಮ್ಮ ಇನ್ನಿಂಗ್ಸ್ ನಲ್ಲಿ 83 ಎಸೆತಗಳನ್ನು ಎದುರಿಸಿದ ಸೂರ್ಯ, 64 ರನ್ ಗಳಿಸಿದರು. ಇದರಲ್ಲಿ ಐದು ಬೌಂಡರಿಗಳಿವೆ.
ಅಂದಹಾಗೆ 43 ರನ್ ಗಳಿಗೆ 3 ವಿಕೆಟ್ ಇದ್ದಾಗ ಕ್ರೀಸ್ ಗೆ ಬಂದ ಸೂರ್ಯಕುಮಾರ್ ಯಾವದ್ ಉಪನಾಯಕ ಕೆ.ಎಲ್.ರಾಹುಲ್ ಜೊತೆಗೂಡಿ ಉತ್ತರ ಇನ್ನಿಂಗ್ಸ್ ಕಟ್ಟಿದರು.
ಅಲ್ಲದೇ 70 ಎಸೆತಗಳಲ್ಲಿ ಅರ್ಧಶತಕ ಸಿಡಿಸಿದರು. ಇದು ಅಂತಾರಾಷ್ಟ್ರೀಯ ಏಕದಿನ ಕ್ರಿಕೆಟ್ ನಲ್ಲಿ ಯಾದವ್ ಅವರ 2ನೇ ಅರ್ಧ ಶತಕವಾಗಿದೆ.
ಕೆ.ಎಲ್.ರಾಹುಲ್ ಮತ್ತು ಸೂರ್ಯಕುಮಾರ್ ಜೋಡಿ 90 ರನ್ ಗಳ ಜೊತೆಯಾಟವಾಡಿ ತಂಡಕ್ಕೆ ನೆರವಾಗಿತ್ತು.
ಈ ಮಧ್ಯೆ 49 ರನ್ ಗಳಿಸಿದ್ದಾಗ ರಾಹುಲ್ ರನೌಟ್ ಗೆ ಬಲಿಯಾದರು. 48 ಎಸೆತಗಳಲ್ಲಿ ರಾಹುಲ್ 4 ಬೌಂಡರಿ, 2 ಸಿಕ್ಸರ್ ಗಳೊಂದಿಗೆ 49 ರನ್ ಗಳಿಸಿದ್ದಾರೆ.









