ADVERTISEMENT
Sunday, September 27, 2026
  • Home
  • About Us
  • Contact Us
  • Privacy Policy
Cini Bazaar
Sports
Advertisement
ADVERTISEMENT
  • Home
  • Newsbeat
  • State
    • Samagra karnataka
    • Malenadu Karnataka
    • Kalyana karnataka
    • Coastal Karnataka
    • Hale Mysore
    • Mumbai Karnataka
  • Politics
  • National
  • International
  • Crime
  • Cinema
  • Sports
  • Astro
  • Health
  • More
    • Life Style
    • TECHNOLOGY
    • Saaksha Special
    • Marjala Manthana
    • Cooking
    • Bigg Boss 8
    • Viral News
    • IPL 2020
    • IPL 2021
    • GALLERY
No Result
View All Result
Home Newsbeat

ಫಿಫಾ ವಿಶ್ವಕಪ್‍ನಲ್ಲಿ ಆಡದಿದ್ರೂ ಜಗತ್ತನ್ನೇ ಆಡಿಸುತ್ತಿದೆ ಪಾಕಿಸ್ತಾನ..! ಏನಿದು ಸಿಯಾಲ್‍ಕೋಟ್ ರಹಸ್ಯ..?

admin by admin
June 19, 2026
in Newsbeat, Sports, Uncategorized, ಕ್ರೀಡೆ
with Khawaja Masood Akhtar Owner of Forward Sports who are producing World Cup's Football

with Khawaja Masood Akhtar Owner of Forward Sports who are producing World Cup's Football

Share on FacebookShare on TwitterShare on WhatsappShare on Telegram

ಇದೆಂಥಾ ವಿಪರ್ಯಾಸ ನೋಡಿ…! ಭಾರತದಂತೆ ಈ ದೇಶದಲ್ಲೂ ಫುಟ್‍ಬಾಲ್ ಕ್ರೇಝ್ ಇದ್ರೂ ಅಪ್ರತಿಮ ಅಟಗಾರರನ್ನು ತಯಾರು ಮಾಡಲು ಆಗ್ತಿಲ್ಲ. ಹೀಗಾಗಿ ಅವರು ಕೂಡ ಫಿಫಾ ವಿಶ್ವಕಪ್‍ನಲ್ಲಿ ಅರ್ಹತೆ ಪಡೆಯಲು ದಶಕಗಳಿಂದ ಒದ್ದಾಟ ನಡೆಸುತ್ತಿದ್ದಾರೆ. ಆದ್ರೂ ಫಿಫಾ ವಿಶ್ವಕಪ್ ಸೇರಿದಂತೆ ಹಲವು ಪ್ರತಿಷ್ಠಿತ ಟೂರ್ನಿಗಳಲ್ಲಿ ಈ ದೇಶದ ಹೆಸರು ಮಾತ್ರ ಗಮನ ಸೆಳೆಯುತ್ತದೆ. ಕಾರಣ ಪ್ರತಿಷ್ಠಿತ ಟೂರ್ನಿಗಳಲ್ಲಿ ಆಡುವ ಕಾಲ್ಚೆಂಡ್‍ಗಳನ್ನು ತಯಾರು ಮಾಡುತ್ತಿರುವುದು ಈ ದೇಶದಲ್ಲೇ. ಮಲ್ಲಿಗೆ ಸುವಾಸನೆ ಬೀರಿದ್ರೂ ಅದರ ಸೌಂದರ್ಯ ಹೆಚ್ಚಿಸಲು ನಾರು ಇರಲೇಬೇಕು ಅಲ್ವಾ..?

ಹಾಗೇ, ಫಿಫಾ ವಿಶ್ವಕಪ್ ಟೂರ್ನಿಯ ಫುಟ್‍ಬಾಲ್ ಚೆಂಡನ್ನು ಜರ್ಮನಿಯ ಅಡಿಡಾಸ್ ಕಂಪೆನಿಯು ಆಧುನಿಕ ತಂತ್ರಜ್ಞಾನದೊಂದಗೆ ವಿನ್ಯಾಸ ಮಾಡುತ್ತಿದ್ರೂ ಅದನ್ನು ಉತ್ಪಾದನೆ ಮಾಡುವುದು ಈ ನತದೃಷ್ಟ ದೇಶವೇ. ಜರ್ಮನಿಯ ಅಡಿಡಾಸ್ ಕಂಪೆನಿಯು ಈ ಕಾಲ್ವೆಂಡುಗಳನ್ನು ಮಲ್ಲಿಗೆಯ ಪರಿಮಳದಂತೆ ಜಗತ್ತಿಗೆ ಪಸರಿಸಿದ್ರೂ ಅದರ ಅಂದಚೆಂದವನ್ನು ಹೆಚ್ಚಿಸಲು ವಿಶ್ವಕಪ್‍ಗೆ ಅರ್ಹತೆ ಪಡೆಯದ ದೇಶವೊಂದರ ಬಡ ಕಾರ್ಮಿಕರ ಶ್ರಮದ ನಾರಿದೆ. ಫಿಫಾ ವಿಶ್ವಕಪ್‍ನಲ್ಲಿ ಆಡುವ ಅದೃಷ್ಟ ಈ ದೇಶಕ್ಕೆ ಇಲ್ಲದಿದ್ರೂ ಫುಟ್‍ಬಾಲ್ ಜಗತ್ತನ್ನು ಆಡಿಸುವ ಹಿರಿಮೆಯಂತೂ ಇದ್ದೇ ಇದೆ.

Related posts

ಪ್ರಧಾನಿಯ ತಂಬೂರಿ ಸದ್ದಿಗೆ ಕಾಂಗ್ರೆಸ್ ಕಿಡಿ: ಸನಾತನ ಸಂಸ್ಕೃತಿಯ ವಿರೋಧಿ ಕಾಂಗ್ರೆಸ್ ಎಂದ ಕೇಸರಿ ಪಡೆ

ಕರಾವಳಿಯ ಜಾನಪದ ಕ್ರೀಡೆಗೆ ಮೈಸೂರಿನಲ್ಲಿ ಅದ್ದೂರಿ ವೇದಿಕೆ: ಅಕ್ಟೋಬರ್ 18 ರಿಂದ ವಿಜಯ ದಶಮಿ ಕರೆಯಲ್ಲಿ ಕಂಬಳದ ಗತ್ತು ನೋಡಲು ಸನ್ನದ್ಧರಾಗಿ

September 27, 2026
ಪ್ರಧಾನಿಯ ತಂಬೂರಿ ಸದ್ದಿಗೆ ಕಾಂಗ್ರೆಸ್ ಕಿಡಿ: ಸನಾತನ ಸಂಸ್ಕೃತಿಯ ವಿರೋಧಿ ಕಾಂಗ್ರೆಸ್ ಎಂದ ಕೇಸರಿ ಪಡೆ

ಶಾಲಾ ಮಕ್ಕಳ ಶೂ ಭಾಗ್ಯದ ಸುತ್ತ ವಿವಾದದ ಹುತ್ತ: ಗುಣಮಟ್ಟ ಕಳಪೆಯಲ್ಲ ಕೇವಲ ಸೈಜ್ ಸಮಸ್ಯೆ- ಶೂ ವಿವಾದದ ಬಗ್ಗೆ ಮಧು ಬಂಗಾರಪ್ಪ ಡಿಫೆನ್ಸ್

September 27, 2026

ಅದುವೇ ಪಾಕಿಸ್ತಾನ. ನಮ್ಮ ನೆರೆಯ ದೇಶ. ಭಾರತದ ದಾಯಾದಿ.. ನಮ್ಮ ಬದ್ಧವೈರಿ ರಾಷ್ಟ್ರ. ಆರ್ಥಿಕತೆಯಲ್ಲಿ ದಿವಾಳಿಯಾಗಿರುವ ನಾಡು. ಭಾರತದ ವಿರುದ್ಧ ಸದಾ ಜಗಳ, ಯುದ್ಧ, ಕಿರಿಕ್ ಮಾಡಿಕೊಂಡೇ ಶಕುನಿ ಬುದ್ದಿಯ ವಂಚಕರ ಭೂಮಿ. ಭಯೋತ್ಪಾದನೆಗೆ ಕುಮ್ಮಕ್ಕು ನೀಡುವ ಈ ದೇಶವನ್ನು ಜಗತ್ತು ವಕ್ರದೃಷ್ಟಿಯಿಂದ ನೋಡಿದ್ರೂ, ಫುಟ್‍ಬಾಲ್ ಜಗತ್ತಿನ ಚಂಚಲೆ ಚೆಲುವೆಯ ಜನ್ಮ ತಾಳುವುದು ಇದೇ ಪಾಕಿಸ್ತಾನದಲ್ಲಿ ಅಂದ್ರೆ ಒಂದು ಕ್ಷಣ ಅಚ್ಚರಿಯಾಗಬಹುದು.

ಹೌದು, ಫಿಫಾ ವಿಶ್ವಕಪ್ ಸೇರಿದಂತೆ ಅಡಿಡಾಸ್ ಕಂಪೆನಿಯ ಕಾಲ್ಚೆಂಡ್‍ಗಳು ತಯಾರು ಆಗೋದು ಇದೇ ಪಾಕಿಸ್ತಾನದಲ್ಲಿ. ಸಿಯಾಲ್‍ಕೋಟ್‍ನ ಫಾರ್ವರ್ಡ್ ಸ್ಪೋಟ್ರ್ಸ್ ಕಂಪೆನಿಯು ಮೈದಾನದಲ್ಲಿ ಜಿಗಿಜಿಗಿದು ಆಟಗಾರರನ್ನು ಮೋಹದ ಬಲೆಯೊಳಗೆ ಬೀಳಿಸುವ ಮಾಯಾವಿ ಚೆಂಡುಗಳನ್ನು ಉತ್ಪಾದನೆ ಮಾಡುತ್ತದೆ. ವಿಶ್ವದ ಒಟ್ಟು ಫುಟ್‍ಬಾಲ್ ಬೇಡಿಕೆಯ ಶೇಕಡಾ 70ಕ್ಕಿಂತಲೂ ಅಧಿಕ ಚೆಂಡುಗಳು ಸಿಯಾಲ್‍ಕೋಟ್ ನಗರದಲ್ಲಿರುವ ವಿವಿಧ ಕಂಪೆನಿಗಳು ಉತ್ಪಾದನೆ ಮಾಡುತ್ತವೆ. ಬ್ರಿಟಿಷರ ಕಾಲದಿಂದಲೂ ಸಿಯಾಲ್‍ಕೋಟ್ ನಗರ ಕ್ರೀಡಾ ಪರಿಕರಗಳ ತಯಾರಿಕೆಗೆ ಪ್ರಸಿದ್ದಿಯನ್ನು ಪಡೆದುಕೊಂಡಿದೆ.

ಈ ಹಿಂದಿನಂತೆ ಈಗ ಕಾಲ್ಚೆಂಡ್‍ಗಳಲ್ಲಿ ಸೂಜಿ ದಾರದ ಹೊಲಿಗೆಗಳು ಇರುವುದಿಲ್ಲ. ಬದಲಾಗಿ ಥರ್ಮೊ ಬಾಂಡಿಂಗ್ ತಂತ್ರಜ್ಞಾನದಿಂದ ಸಿದ್ದಪಡಿಸಲಾಗುತ್ತಿದೆ. ಚೆಂಡಿನ ವಿವಿಧ ಪ್ಯಾನಲ್‍ಗಳನ್ನು ವಿಶೇಷ ಅಂಟು ಬಳಸಿ ಶಾSದ ನೆರವಿನಿಂದ ಒಂದಕ್ಕೊಂದು ಜೋಡಿಸಲಾಗುತ್ತದೆ. ಮಳೆ, ನೀರಿನಲ್ಲೂ ಆಡಿದ್ರೂ ಚೆಂಡಿನೊಳಗೆ ಒಂದು ಹನಿ ನೀರು ಕೂಡ ಸೇರಿಕೊಳ್ಳುವುದಿಲ್ಲ.

ಅಂದ ಹಾಗೇ, ಈ ಚೆಂಡಿನೊಳಗೆ ಬಡ ಕಾರ್ಮಿಕರ ಕೈಚಳಕವಿದೆ. ಆಧುನಿಕ ತಂತ್ರಜ್ಞಾನದ ಮೆಷಿನ್‍ಗಳಿದ್ರೂ ಫುಟ್‍ಬಾಲ್ ಚೆಂಡಿಗೆ ಅಂತಿಮ ರೂಪ ನೀಡುತ್ತಿರುವುದರ ಹಿಂದೆ ಸಾವಿರಾರು ಮಹಿಳೆಯರು ಸೇರಿದಂತೆ ಬಡ ಕಾರ್ಮಿಕರ ಅದ್ಭುತ ಕೌಶಲ್ಯವಿದೆ ಎಂಬುದನ್ನು ಮರೆಯುವ ಹಾಗಿಲ್ಲ. ಹಾಗೇ ಫಾರ್ವರ್ಡ್ ಸ್ಪೋಟ್ರ್ಸ್ ಕಂಪೆನಿಯು ಅತ್ಯಾಧುನಿಕ ಜರ್ಮನ್ ಯಂತ್ರೋಪಕರಣಗಳು ಹಾಗೂ ರೊಬೆಟಿಕ್ ತಂತ್ರಜ್ಞಾನವನ್ನು ಬಳಸಿ ಅಡಿಡಾಸ್ ಕಂಪೆನಿಯ ಸಲಹೆ ಸೂಚನೆಯಂತೆ ಕಾಲ್ಚೆಂಡ್‍ಗಳನ್ನು ತಯಾರು ಮಾಡುತ್ತಿದೆ.

1990ರ ದಶಕದಲ್ಲಿ ಸಿಯಾಲ್‍ಕೋಟ್‍ನ ಕ್ರೀಡಾ ಉದ್ಯಮದಲ್ಲಿ ಬಾಲ ಕಾರ್ಮಿಕ ಪದ್ದತಿ ಇತ್ತು. ಇದರಿಂದ ಜಾಗತಿಕ ಮಟ್ಟದಲ್ಲಿ ಮಾರುಕಟ್ಟೆಯನ್ನು ಕಳೆದುಕೊಳ್ಳುವ ಭೀತಿಯೂ ಇತ್ತು. ಆಗ ಫಾರ್ವರ್ಡ್ ಸ್ಪೋಟ್ರ್ಸ್ ಸಂಸ್ಥಾಪಕ ಖ್ವಾಜಾ ಮಸೂದ್ ಅಖ್ತರ್ ಅವರು ಬಾಲ ಕಾರ್ಮಿಕ ಪದ್ದತಿಯನ್ನು ನಿರ್ಮೂಲನೆ ಮಾಡಿ ಫಾರ್ವರ್ಡ್ ಸ್ಪೋಟ್ಸ್ ಕಂಪೆನಿಗೆ ಹೊಸ ಆಯಾಮವನ್ನು ನೀಡಿದ್ರು. ಪರಿಣಾಮ 1994ರಿಂದ ಫಾರ್ವರ್ಡ್ ಸ್ಪೋಟ್ರ್ಸ್ ಕಂಪೆನಿಯು ಅಡಿಡಾಸ್ ಕಂಪೆನಿಯ ನಂಬಿಗಸ್ಥ ಪಾಲುದಾರಿಕೆಯನ್ನು ಪಡೆದುಕೊಂಡಿತ್ತು.

ಫಾರ್ವಡ್ರ್ಸ್ ಸ್ಫೋಟ್ರ್ಸ್ ಕಂಪೆನಿಗೆ ಪ್ರತಿ ತಿಂಗಳು ಸುಮಾರು 7.5 ಲಕ್ಷಕ್ಕೂ ಹೆಚ್ಚು ಫುಟ್‍ಬಾಲ್‍ಗಳನ್ನು ಉತ್ಪಾದನೆ ಮಾಡುವ ಸಾಮಥ್ರ್ಯವನ್ನು ಹೊಂದಿದೆ. ಫಿಫಾ ವಿಶ್ವಕಪ್ ಸಮಯದಲ್ಲಿ ಕೇವಲ ಪಂದ್ಯಗಳಿಗೆ ಮಾತ್ರವಲ್ಲ ಜಗತ್ತಿನ ಕೋಟ್ಯಂತರ ಅಭಿಮಾನಿಗಳಿಗೆ ಮಾರಾಟ ಮಾಡಲು ರೆಪ್ಲಿಕಾ ಚೆಂಡುಗಳ ಅಗತ್ಯವಿರುತ್ತದೆ. ಫುಟ್‍ಬಾಲ್ ಚೆಂಡಿನ ಗುಣಮಟ್ಟ ಹಾಗೂ ನಿಗದಿತ ಸಮಯದಲ್ಲಿ ಪೂರೈಕೆ ಮಾಡುವ ತಾಕತ್ತು ಫಾರ್ವಡ್ರ್ಸ್ ಸ್ಪೋಟ್ರ್ಸ್ ಕಂಪೆನಿಗಿದೆ.

2014ರ ಬ್ರಜುಕಾ, 2018ರ ಟೆಲ್‍ಸ್ಟಾರ್ 18, 2022ರ ಆಲ್ ರಿಹ್ಲಾ ಮತ್ತು ಇದೀಗ 2026ರ ಟ್ರಿಯೋಂಡಾ ಫುಟ್‍ಬಾಲ್‍ಗಳನ್ನು ಉತ್ಪಾದನೆ ಮಾಡಿದ ಹಿರಿಮೆ ಫಾರ್ವರ್ಡ್ ಸ್ಪೋಟ್ರ್ಸ್ ಕಂಪೆನಿಯದ್ದು. ಆಧುನಿಕ ತಂತ್ರಜ್ಞಾನದಿಂದ ಹಿಡಿದು ಹೈಟೆಕ್ ಚೆಂಡುಗಳನ್ನು ಉತ್ಪಾದನೆ ಮಾಡಿರುವ ಫಾರ್ವರ್ಡ್ ಸ್ಪೋಟ್ರ್ಸ್ ಸಂಸ್ಥೆಯು ಈಗ ಎಐ ತಂತ್ರಜ್ಞಾನದ ಮೂಲಕ ಫುಟ್‍ಬಾಲ್ ಅನ್ನು ಸಂಪೂರ್ಣವಾಗಿ ಡಿಜಿಟಲಿಕರಣ ಮಾಡಿಬಿಟ್ಟಿದೆ.

ಹಾಗೇ ನೋಡಿದ್ರೆ 2014ರ ಬ್ರಜುಕಾ ಫುಟ್‍ಬಾಲ್ ಅನ್ನು ಚೀನಾದ ಕಂಪೆನಿಯೊಂದು ತಯಾರು ಮಾಡಬೇಕಾಗಿತ್ತು. ಆದ್ರೆ ವಿಪರೀತ ಬೇಡಿಕೆಯ ಕಾರಣಗಳಿಂದ ಚೀನಾ ಕಂಪೆನಿಗೆ ಫುಟ್‍ಬಾಲ್ ಅನ್ನು ಉತ್ಪಾದನೆ ಮಾಡಲು ಸಾಧ್ಯವಾಗಲಿಲ್ಲ. ಆಗ ಕೈ ಹಿಡಿದಿರುವುದೇ ಇದೇ ಸಿಯಾಲ್‍ಕೋಟ್‍ನ ಫಾರ್ವರ್ಡ್ ಸ್ಪೋಟ್ರ್ಸ್ ಕಂಪೆನಿ. ಆ ಸಮಯಲ್ಲಿ ಬ್ರಜುಕಾ ಚೆಂಡನ್ನು ತಯಾರು ಮಾಡುವ ಥರ್ಮೊ ಬಾಂಡಿಂಗ್ ಯಂತ್ರಗಳು ಇಲ್ಲದಿದ್ರೂ ಅಡಿಡಾಸ್ ಕಂಪೆನಿಯ ಬೇಡಿಕೆಯನ್ನು ಸವಾಲಾಗಿ ಸ್ವೀಕರಿಸಿತ್ತು. ಜರ್ಮನಿಯಿಂದ ಆತ್ಯಾಧುನಿಕ ಯಂತ್ರಗಳನ್ನು ಖರೀದಿಸಿ, ಸ್ಥಳೀಯ ಇಂಜಿನಿಯರ್‍ಗಳ ಸಹಾಯದಿಂದಲೇ ಕೇವಲ 33 ದಿನಗಳಲ್ಲಿ ಅಡಿಡಾಸ್ ಕಂಪೆನಿಯ ಬೇಡಿಕೆಯನ್ನು ಈಡೇರಿಸಿತ್ತು. ಅಡಿಡಾಸ್ ಕಂಪೆನಿಯ ಕಂಪೆನಿ ನಂಬಿಕೆಯನ್ನು ಉಳಿಸಿಕೊಂಡ ಫಾರ್ವರ್ಡ್ ಸ್ಪೋಟ್ರ್ಸ್ ಕಂಪೆನಿಯು ಇಂದು ಜಗತ್ತಿನ ನಂಬರ್ ವನ್ ಫುಟ್‍ಬಾಲ್ ಉತ್ಪಾದನಾ ಕಂಪೆನಿಯಾಗಿ ಹೊರಹೊಮ್ಮಿದೆ.

ಇನ್ನು ಫಿಫಾ ವಿಶ್ವಕಪ್‍ಗೆ ಭಾರತದ ಕೊಡುಗೆಯೂ ಇದೆ. ಟೂರ್ನಿಗೆ ಅರ್ಹತೆ ಪಡೆಯದಿದ್ರೂ ತಂತ್ರಜ್ಞಾನ ಮತ್ತು ಜೆರ್ಸಿ ತಯಾರಿಕಾ ಉದ್ಯಮದಲ್ಲಿ ಪ್ರಮುಖ ಪಾತ್ರ ವಹಿಸಿದೆ. ತಮಿಳುನಾಡಿನ ತಿರುಪುರ್ ಮತ್ತು ಪಂಜಾಬ್‍ನ ಲುಧಿಯಾನದ ಗಾರ್ಮೆಂಟ್ಸ್ ಕಂಪೆನಿಗಳಲ್ಲಿ ನೈಕಿ, ಅಡಿಡಾಸ್ ಮತ್ತು ಪ್ಯೂಮಾ ಕಂಪೆನಿಗಳು ಭಾರತದ ಉಡುಪು ಉದ್ಯಮಗಳನ್ನೇ ಅವಲಂಬಿಸಿವೆ. ಹಾಗೇ 2022ರ ಕತಾರ್ ಫಿಫಾ ವಿಶ್ವಕಪ್‍ನಲ್ಲಿ ಟಿಸಿಎಸ್ ಮತ್ತು ಇನ್ಫೋಸಿಸ್ ಸಂಸ್ಥೆಗಳು ತಂತ್ರಜ್ಞಾನದ ವಿಭಾಗದ ಹೊಣೆಯನ್ನು ಹೊತ್ತಿದ್ದವು. ಅಲ್ಲದೆ ಬೈಜೂಸ್ ಕಂಪೆನಿಯು ಕತಾರ್ ವಿಶ್ವಕಪ್‍ಗೆ ಅಧಿಕೃತ ಪ್ರಾಯೋಜಕತ್ವವನ್ನು ನೀಡಿತ್ತು. ಆದ್ರೆ ಈ ಬಾರಿಯ ಫಿಫಾ ವಿಶ್ವಕಪ್‍ನಲ್ಲಿ ಭಾರತದಲ್ಲಿ ಸಿದ್ದವಾಗುವ ಆಟಗಾರರ ಜೆರ್ಸಿಗಳನ್ನು ಮಾತ್ರ ಕಾಣಬಹುದಾಗಿದೆ.

ಒಂದು ರೀತಿಯಲ್ಲಿ ಫಿಫಾ ವಿಶ್ವಕಪ್‍ನಲ್ಲಿ ಪಾಕಿಸ್ತಾನ ಹಾರ್ಡ್‍ವೇರ್.. ಭಾರತ ಸಾಫ್ಟ್‍ವೇರ್ ಎಂದ್ರೂ ತಪ್ಪಾಗ್ಲಿಕ್ಕಿಲ್ಲ. ಮೈದಾನದಲ್ಲಿ ಹಿಂದೂಸ್ತಾನದ ಆಟಗಾರರು ಆಡದಿದ್ರೂ ಏನಂತೆ ಇಡೀ ಫುಟ್‍ಬಾಲ್ ಜಗತ್ತನ್ನು ಆಡಿಸುವ ಸೂತ್ರಧಾರಿಗಳು ನಾವೇ ಅಲ್ವಾ.. ಫಿಫಾ ಫುಟ್‍ಬಾಲ್ ವಿಷ್ಯದಲ್ಲಿ ಅಷ್ಟಾದ್ರೂ ಖುಷಿಪಡೋಣ.

ಸನತ್ ರೈ.

 

 

 

 

 

Tags: #FIFAWorld Cup #SialkotFootball #ForwardSports #AdidasFootball #IndiaVsPakistan #FootballHistory #TechInFootball #KannadaNews #SpecialReport #SaakshaTV
ShareTweetSendShare
Join us on:

Related Posts

ಪ್ರಧಾನಿಯ ತಂಬೂರಿ ಸದ್ದಿಗೆ ಕಾಂಗ್ರೆಸ್ ಕಿಡಿ: ಸನಾತನ ಸಂಸ್ಕೃತಿಯ ವಿರೋಧಿ ಕಾಂಗ್ರೆಸ್ ಎಂದ ಕೇಸರಿ ಪಡೆ

ಕರಾವಳಿಯ ಜಾನಪದ ಕ್ರೀಡೆಗೆ ಮೈಸೂರಿನಲ್ಲಿ ಅದ್ದೂರಿ ವೇದಿಕೆ: ಅಕ್ಟೋಬರ್ 18 ರಿಂದ ವಿಜಯ ದಶಮಿ ಕರೆಯಲ್ಲಿ ಕಂಬಳದ ಗತ್ತು ನೋಡಲು ಸನ್ನದ್ಧರಾಗಿ

by Shwetha
September 27, 2026
0

ಮೈಸೂರು: ನಾಡಹಬ್ಬ ಮೈಸೂರು ದಸರಾ ಮಹೋತ್ಸವದ ಸಂಭ್ರಮಕ್ಕೆ ಈ ಬಾರಿ ಕರಾವಳಿಯ ಸಾಂಪ್ರದಾಯಿಕ ಕ್ರೀಡೆ ಕಂಬಳದ ಮೆರುಗು ಸಿಗಲಿದೆ. ಅರಮನೆ ನಗರಿಯ ಅಂಗಳದಲ್ಲಿ ಅಕ್ಟೋಬರ್ 18 ಮತ್ತು...

ಪ್ರಧಾನಿಯ ತಂಬೂರಿ ಸದ್ದಿಗೆ ಕಾಂಗ್ರೆಸ್ ಕಿಡಿ: ಸನಾತನ ಸಂಸ್ಕೃತಿಯ ವಿರೋಧಿ ಕಾಂಗ್ರೆಸ್ ಎಂದ ಕೇಸರಿ ಪಡೆ

ಶಾಲಾ ಮಕ್ಕಳ ಶೂ ಭಾಗ್ಯದ ಸುತ್ತ ವಿವಾದದ ಹುತ್ತ: ಗುಣಮಟ್ಟ ಕಳಪೆಯಲ್ಲ ಕೇವಲ ಸೈಜ್ ಸಮಸ್ಯೆ- ಶೂ ವಿವಾದದ ಬಗ್ಗೆ ಮಧು ಬಂಗಾರಪ್ಪ ಡಿಫೆನ್ಸ್

by Shwetha
September 27, 2026
0

ಬೆಂಗಳೂರು: ರಾಜ್ಯದ ಸರ್ಕಾರಿ ಶಾಲಾ ಮಕ್ಕಳಿಗೆ ವಿತರಿಸಲಾಗುತ್ತಿರುವ ಶೂ ಮತ್ತು ಸಾಕ್ಸ್‌ಗಳ ಗುಣಮಟ್ಟದ ಬಗ್ಗೆ ಕೇಳಿಬಂದಿರುವ ಗಂಭೀರ ಆರೋಪಗಳ ಬೆನ್ನಲ್ಲೇ ಶಿಕ್ಷಣ ಸಚಿವ ಮಧು ಬಂಗಾರಪ್ಪ ಅವರು...

ಟೆಲಿಕಾಂ ಕಂಪನಿಗಳ ದಬ್ಬಾಳಿಕೆಗೆ ಟ್ರಾಯ್ ಬ್ರೇಕ್:ಫೋನ್ ಕಾಲ್ ಮಾಡುವವರಿಗೆ ಮಾತ್ರ ಗುಡ್ ನ್ಯೂಸ್-ಗ್ರಾಹಕರಿಗೆ ಬೇಕಾದ ಪ್ಲಾನ್ ನೀಡದಿದ್ದರೆ ಇನ್ನು ದಂಡ ಫಿಕ್ಸ್

ಟೆಲಿಕಾಂ ಕಂಪನಿಗಳ ದಬ್ಬಾಳಿಕೆಗೆ ಟ್ರಾಯ್ ಬ್ರೇಕ್:ಫೋನ್ ಕಾಲ್ ಮಾಡುವವರಿಗೆ ಮಾತ್ರ ಗುಡ್ ನ್ಯೂಸ್-ಗ್ರಾಹಕರಿಗೆ ಬೇಕಾದ ಪ್ಲಾನ್ ನೀಡದಿದ್ದರೆ ಇನ್ನು ದಂಡ ಫಿಕ್ಸ್

by Shwetha
September 27, 2026
0

ನವದೆಹಲಿ: ಮೊಬೈಲ್ ಬಳಸುವ ಪ್ರತಿಯೊಬ್ಬರಿಗೂ ಇನ್ನು ಮುಂದೆ ಜೇಬು ಸುಡುವ ರೀಚಾರ್ಜ್ ಚಿಂತೆ ಕಡಿಮೆಯಾಗಲಿದೆ. ಅಂತರಜಾಲ ಅಥವಾ ಡೇಟಾ ಬಳಸದಿದ್ದರೂ ಅನಿವಾರ್ಯವಾಗಿ ಡೇಟಾ ಇರುವ ಪ್ಲಾನ್ ಗಳನ್ನೇ...

ಪ್ರಧಾನಿಯ ತಂಬೂರಿ ಸದ್ದಿಗೆ ಕಾಂಗ್ರೆಸ್ ಕಿಡಿ: ಸನಾತನ ಸಂಸ್ಕೃತಿಯ ವಿರೋಧಿ ಕಾಂಗ್ರೆಸ್ ಎಂದ ಕೇಸರಿ ಪಡೆ

ದೇಶದ್ರೋಹದ ಕೆಲಸ ಮಾಡುತ್ತಿದೆಯೇ ಚುನಾವಣಾ ಆಯೋಗ? ಒಬ್ಬ ನಾಯಕನಿಗಾಗಿ ಪ್ರಜಾಪ್ರಭುತ್ವದ ಬಲಿ: ಚುನಾವಣಾ ಆಯೋಗದ ಏಕಪಕ್ಷೀಯ ನಿರ್ಧಾರದ ವಿರುದ್ಧ ಹರಿಪ್ರಸಾದ್ ವಾಗ್ದಾಳಿ

by Shwetha
September 27, 2026
0

ಬೆಂಗಳೂರು: ಕೇಂದ್ರ ಚುನಾವಣಾ ಆಯೋಗದ ವಿಶ್ವಾಸಾರ್ಹತೆ ಈಗ ಸಾರ್ವಜನಿಕವಾಗಿ ಪ್ರಶ್ನೆಯಾಗುತ್ತಿದೆ. ಒಬ್ಬ ನಾಯಕ ಮತ್ತು ಒಂದು ರಾಜಕೀಯ ಪಕ್ಷದ ಹಿತಾಸಕ್ತಿ ಕಾಯಲು ಇಡೀ ಪ್ರಜಾಪ್ರಭುತ್ವ ವ್ಯವಸ್ಥೆಯನ್ನೇ ಬುಡಮೇಲು...

ಪ್ರಧಾನಿಯ ತಂಬೂರಿ ಸದ್ದಿಗೆ ಕಾಂಗ್ರೆಸ್ ಕಿಡಿ: ಸನಾತನ ಸಂಸ್ಕೃತಿಯ ವಿರೋಧಿ ಕಾಂಗ್ರೆಸ್ ಎಂದ ಕೇಸರಿ ಪಡೆ

ಪ್ರಧಾನಿಯ ತಂಬೂರಿ ಸದ್ದಿಗೆ ಕಾಂಗ್ರೆಸ್ ಕಿಡಿ: ಸನಾತನ ಸಂಸ್ಕೃತಿಯ ವಿರೋಧಿ ಕಾಂಗ್ರೆಸ್ ಎಂದ ಕೇಸರಿ ಪಡೆ

by Shwetha
September 27, 2026
0

ನವದೆಹಲಿ: ದೆಹಲಿಯಲ್ಲಿ ನಡೆದ ಭಜನ್ ಕ್ಲಬ್ಬಿಂಗ್ ಕಾರ್ಯಕ್ರಮದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಭಾಗವಹಿಸಿದ ವಿಚಾರ ಈಗ ಆಡಳಿತ ಮತ್ತು ವಿಪಕ್ಷಗಳ ನಡುವೆ ದೊಡ್ಡ ರಾಜಕೀಯ ಸಮರಕ್ಕೆ...

Load More

POPULAR NEWS

  • ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    0 shares
    Share 0 Tweet 0
  • ನಿಮ್ಮ ಶತ್ರುಗಳು ಮೆತ್ತಗಾಗಿ ಮೂಲೆ ಗುಂಪು ಸೇರಬೇಕೆಂದು ಕೊಂಡಿದ್ದೀರಾ ಹಾಗಾದ್ರೆ ಈ ಒಂದು ಚಿಕ್ಕ ತಂತ್ರಸಾರ ಮಾಡಿ ಸಾಕು..!!!

    0 shares
    Share 0 Tweet 0
  • ದೋಷಗಳನ್ನು ಪರಿಹಾರ ಮಾಡುವ ಶ್ರೀ ಸುಬ್ರಹ್ಮಣ್ಯ ಸ್ತೋತ್ರಂ ಭಕ್ತಿಯಿಂದ ಪ್ರಾರ್ಥಿಸಿ ಮನೋಕಾಮನೆಗಳು ಈಡೇರುತ್ತದೆ

    0 shares
    Share 0 Tweet 0
  • ಯಂತ್ರ, ಮಂತ್ರ,ತಂತ್ರಸಾರದ, ಶ್ರೀ ಸಿಗಂದೂರ ಚೌಡೇಶ್ವರೀ ತಾಯಿಯಿಂದ ನಮಗೆ ಶ್ರೀ ರಕ್ಷೇ ಪ್ರಾಪ್ತಿ…

    0 shares
    Share 0 Tweet 0
  • ಈ ಒಂದು ದೀಪವನ್ನು ಮನೆಯಲ್ಲಿ ಮೂರು ಮಂಗಳವಾರ ಶುಕ್ರವಾರ ಹಚ್ಚಿ ನೋಡಿ ಸಾಕು ಸಾಕ್ಷಾತ್ ಮಹಾಲಕ್ಷ್ಮೀ ಮನೆಗೆ ಬರ್ತಾಳೆ..

    0 shares
    Share 0 Tweet 0

Saakshatv News

  • Home
  • About Us
  • Contact Us
  • Privacy Policy

© 2026 SaakshaTV - All Rights Reserved | Powered by Kalahamsa Infotech Pvt. ltd.

No Result
View All Result
  • Home
  • Newsbeat
  • State
    • Kalyana karnataka
    • Karavali Karnataka
    • Malenadu Karnataka
    • Mumbai Karnataka
    • Samagra karnataka
    • Hale Mysore
  • Politics
  • National
  • International
  • Crime
  • Cinema
  • Sports
  • Astrology
  • Health
  • More
    • Business
    • Asia Cup 2022
    • Marjala Manthana
    • Cooking
    • Culture
    • GALLERY
    • Saaksha Special
    • Life Style
    • TECHNOLOGY
    • Travel
    • Viral News
    • Bigg Boss 8
    • IPL 2021
    • CPL 2020
    • IPL 2020

© 2026 SaakshaTV - All Rights Reserved | Powered by Kalahamsa Infotech Pvt. ltd.

  • →
  • Telegram