Bengaluru : ಕೋರ್ಟ್ ಆವರಣದಲ್ಲಿ ವಕೀಲರಾದ ಜಗದೀಶ್ ಪುತ್ರ ಹಾಗೂ ಆಪ್ತರ ಮೇಲೆ ಹಲ್ಲೆ…??
ಸಿಟಿ ಸಿವಿಲ್ ಕೋರ್ಟ್ ಆವರಣದಲ್ಲಿ ವಕೀಲರಾದ ಜಗದೀಶ್ ಪುತ್ರ ಹಾಗೂ ಆಪ್ತರ ಮೇಲೆ ಹಲ್ಲೆ ನಡೆಸಿರುವ ಆರೋಪ ಕೇಳಿ ಬಂದಿದೆ.
ವಕೀಲರಾದ ಜಗದೀಶ್ ಪುತ್ರ ಆರ್ಯನ್ ಹಾಗೂ ಮತ್ತಿತ್ತರ ಮೇಲೆ ಹಲ್ಲೆ ಮಾಡಲಾಗಿದೆ ಎಂದು ಜಗದೀಶ್ ಆರೋಪಿಸಿದ್ದಾರೆ..
ಹೌದು…. ಸಿಟಿ ಸಿವಿಲ್ ಕೋರ್ಟ್ ಆವರಣದೊಳಗಿದ್ದ ಕೆಲವರು ಜಗದೀಶ್ ಪುತ್ರ ಹಾಗೂ ಆಪ್ತರ ಹಲ್ಲೆ ನಡೆಸಿದ್ದಾರೆ ಎಂದು ಲಾಯರ್ ಜಗದೀಶ್ ಆರೋಪಿಸಿದ್ದಾರೆ..
ಈ ಸಂಬಂಧ ಹಲಸೂರು ಗೇಟ್ ಪೊಲೀಸ್ ಠಾಣೆಗೆ ದೂರು ನೀಡಲು ಜಗದೀಶ್ ಮುಂದಾಗಿದ್ದಾರೆ…
ಪ್ರಕರಣ ಸಂಬಂಧ ಸಿಟಿ ಸಿವಿಲ್ ಕೋರ್ಟ್ 61 ಕ್ಕೆ ದಾಖಲೆ ಸಲ್ಲಿಸಲು ಆಗಮಿಸುತ್ತಿದದ್ದ ವೇಳೆ ಹಲ್ಲೆ ನಡೆದಿರುವ ಆರೋಪ ಕೇಳಿಬಂದಿದೆ. ಹಲಸೂರು ಗೇಟ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.









