IPL Mega Auction – ಮೊದಲ ದಿನ ಮಾರಾಟವಾಗದೇ ಉಳಿದ mr.IPL
ಒಂದು ಕಾಲದಲ್ಲಿ ಮಿಸ್ಟರ್ IPL ಎಂದೇ ಗುರುತಿಸಿಕೊಂಡಿದ್ದ ಭಾರತದ ಮಾಜಿ ಆಲ್ ರೌಂಡರ್ ಸುರೇಶ್ ರೈನಾ ಐಪಿಎಲ್ 2022 ರ ಹರಾಜಿನಲ್ಲಿ ಮೊದಲನೇ ದಿನ ಮಾರಾಟವಾಗದೆ ಉಳಿದಿದ್ದಾರೆ. ರೈನಾ 2020 ರಲ್ಲಿ ಅಂತರರಾಷ್ಟ್ರೀಯ ಕ್ರಿಕೆಟ್‌ನಿಂದ ನಿವೃತ್ತಿ ಹೊಂದಿದ್ದರಿಂದ ಅವರ ಮೂಲ ಬೆಲೆಯನ್ನು 2 ಕೋಟಿ ರೂ.ಗೆ ನಿಗದಿಪಡಿಸಲಾಗಿತ್ತು.
ಸುರೇಶ್ ರೈನಾ ಜೊತೆಗೆ, ಆಸ್ಟ್ರೇಲಿಯಾ ಟೆಸ್ಟ್ ಉಪನಾಯಕ ಸ್ಟೀವ್ ಸ್ಮಿತ್ ಅವರು ಸಹ ಮೂಲ ಬೆಲೆಯನ್ನು 2 ಕೋಟಿ ಗೆ ನಿಗದಿಪಡಿಸಿದ ನಂತರ ಮಾರಾಟವಾಗದೇ ಉಳಿದಿದ್ದಾರೆ. ಬೆಂಗಳೂರಿನಲ್ಲಿ ನಡೆಯುತ್ತಿರುವ ಮೆಗಾ ಹರಾಜಿನ ಮೊದಲ ದಿನ ಮಾರಾಟವಾಗದ ಮೊದಲ ಆಟಗಾರ ದಕ್ಷಿಣ ಆಫ್ರಿಕಾದ ಡೇವಿಡ್ ಮಿಲ್ಲರ್.
IPL 2022 ಮೆಗಾ ಹರಾಜಿನಲ್ಲಿ ಮೊದಲ ದಿನ ಮಾರಾಟವಾಗದ ಎಲ್ಲಾ ಆಟಗಾರರನ್ನ ಭಾನುವಾರದ ಮರಳಿ ಖರೀದಿಸಬಹುದು.
ಸುರೇಶ್ ರೈನಾ 2016 ಮತ್ತು 2017 ರಲ್ಲಿ 2 ವರ್ಷ ಗುಜರಾತ್ ಲಯನ್ಸ್‌ನ ನಾಯಕರಾಗಿ ಆಡಿದ್ದರು. ಉಳಿದಂತೆ ಎಲ್ಲಾ ವರ್ಷಗಳಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಪರ ಬ್ಯಾಟ್ ಬೀಸಿದ್ದಾರೆ. ಈ ಹಿಂದೆ ಸಿ ಎಸ್ ಕೆ ವಿಜಯದ ಅವಿಭಾಜ್ಯ ಸದಸ್ಯರಾಗಿದ್ದ ರೈನಾ ರನ್ನ ಚೆನ್ನೈನಲ್ಲಿ ಚಿನ್ನ ತಲಾ ಎಂದು ಪ್ರೀತಿಯಿಂದ ಕರೆಯುತ್ತಾರೆ.








