Politics : ಕೆಂಪುಕೋಟೆ ಮೇಲೆ ಯಾವುತ್ತೂ ಹಾರೋದು ತ್ರಿವರ್ಣ ಧ್ವಜ ಮಾತ್ರ : ಸಿ.ಟಿ ರವಿ
ಶ್ರೀನಗರದಲ್ಲಿ ತ್ರಿವರ್ಣ ಧ್ವಜವನ್ನೇ ಹಾರಿಸಲು ಆಗ್ತಾ ಇರ್ಲಿಲ್ಲ.
ಮುರಳಿ ಮನೋಹರ ಜೋಷಿ ಹೋರಾಟ ಮಾಡಿ ತ್ರಿವರ್ಣ ಧ್ವಜ ಹಾರಿಸಿದ್ವಿ, ದೇವಸ್ಥಾನಗಳ ಮೇಲೆ ಭಗವಧ್ವಜ ಹರಿಸ್ತಾರೆ.
ಕೆಲವರು ವೈಯಕ್ತಿಕವಾಗಿ , ಹಸಿರು ಧ್ವಜ, ಭಗವಧ್ವಜ ಹಾರಿಸಿಕೊಳ್ತಾರೆ.
ಆದ್ರೆ ಕೆಂಪುಕೋಟೆ ಮೇಲೆ ಯಾವುತ್ತೂ ಹಾರೋದು ತ್ರಿವರ್ಣ ಧ್ವಜ ಮಾತ್ರ ಎನ್ನುವ ಮೂಲಕ ಕೆ.ಎಸ್ ಈಶ್ವರಪ್ಪ ಅವರ ಹೇಳಿಕೆಗೆ ಸಿ.ಟಿ ರವಿ ಪ್ರತಿಕ್ರಿಯೆ ನೀಡಿದ್ದಾರೆ..
ಅಲ್ಲದೇ ಹಿಜಾಬ್ ವಿಚಾರದಲ್ಲಿ ಟೂಲ್ ಕಿಟ್ ಅಜೆಂಡಾ ಥರ ಪ್ಲಾನ್ ಮಾಡಲಾಗಿದೆ.
ಕಪಿಲ್ ಸಿಬಲ್, ದೇವದತ್ತ ಕಾಮತ್, ರವಿವರ್ಮಕುಮಾರ್, ಸೋಂದೆ ಇವರೆಲ್ಲ ಕಾಂಗ್ರೆಸ್ ನ ಫಲಾನುಭವಿಗಳು. ಇವರು ಹಿಜಾಬ್ ಪ್ರಕರಣದಲ್ಲಿ ಬಂದಿರೋದು ಕಾಕತಾಳೀಯ ಅಲ್ಲ.
ಇದರ ಹಿಂದೆ ಕಾಂಗ್ರೆಸ್ ತಾನು ಇಲ್ಲ ಅಂತ ಹೇಳಬಹುದು. ಆದರೂ ಏನೋ ಇದೆ ಅಂತ ಅನ್ಸತ್ತೆ ಎಂದು ಕಿಡಿಕಾರಿದ್ದಾರೆ…
ಅಲ್ಲದೇ ಯುಪಿ ಚುನಾವಣೆ ಆಗೋವರೆಗೂ ಈ ವಿಚಾರಣೆ ಮುಂದೂಡಿ ಅಂತ ಅರ್ಜಿ ಹಾಕಿದಾರೆ.
ರಾಜಕೀಯಕ್ಕೆ ಇದನ್ನು ದುರ್ಬಳಕೆ ಮಾಡಿಕೊಳ್ತಿದೆ ಕಾಂಗ್ರೆಸ್ .
ಅದಕ್ಕಾಗಿಯೇ ವಿವಾದ ಹುಟ್ಟು ಹಾಕುವ ಸಂಚು ನಡೆದಿದೆ.
ಇಲ್ಲದ ವಿವಾದ ಹುಟ್ ಹಾಕಿರೋದು, ಇವರೆಲ್ಲರ ವಕಾಲತ್ತು ಕಾಂಗ್ರೆಸಿಗರೇ ಮಾಡ್ತಿರೋದು ಕಾಕತಾಳಿಯ ಅಲ್ಲ ಎಂದು ಕಿಡಿಕಾರಿದ್ದಾರೆ..








