Politics : ಹಿಜಾಬ್ ವಿಚಾರದಲ್ಲಿ ಟೂಲ್ ಕಿಟ್ ಅಜೆಂಡಾ ಥರ ಪ್ಲಾನ್ ಮಾಡಲಾಗಿದೆ : ಸಿ.ಟಿ ರವಿ
ಹಿಜಾಬ್ ವಿಚಾರದಲ್ಲಿ ಟೂಲ್ ಕಿಟ್ ಅಜೆಂಡಾ ಥರ ಪ್ಲಾನ್ ಮಾಡಲಾಗಿದೆ. ಕಪಿಲ್ ಸಿಬಲ್, ದೇವದತ್ತ ಕಾಮತ್, ರವಿವರ್ಮಕುಮಾರ್, ಸೋಂದೆ ಇವರೆಲ್ಲ ಕಾಂಗ್ರೆಸ್ ನ ಫಲಾನುಭವಿಗಳು. ಇವರು ಹಿಜಾಬ್ ಪ್ರಕರಣದಲ್ಲಿ ಬಂದಿರೋದು ಕಾಕತಾಳೀಯ ಅಲ್ಲ. ಇದರ ಹಿಂದೆ ಕಾಂಗ್ರೆಸ್ ತಾನು ಇಲ್ಲ ಅಂತ ಹೇಳಬಹುದು. ಆದರೂ ಏನೋ ಇದೆ ಅಂತ ಅನ್ಸತ್ತೆ ಎಂದು ಕಿಡಿಕಾರಿದ್ದಾರೆ…
ಅಲ್ಲದೇ ಯುಪಿ ಚುನಾವಣೆ ಆಗೋವರೆಗೂ ಈ ವಿಚಾರಣೆ ಮುಂದೂಡಿ ಅಂತ ಅರ್ಜಿ ಹಾಕಿದಾರೆ. ರಾಜಕೀಯಕ್ಕೆ ಇದನ್ನು ದುರ್ಬಳಕೆ ಮಾಡಿಕೊಳ್ತಿದೆ ಕಾಂಗ್ರೆಸ್ . ಅದಕ್ಕಾಗಿಯೇ ವಿವಾದ ಹುಟ್ಟು ಹಾಕುವ ಸಂಚು ನಡೆದಿದೆ. ಇಲ್ಲದ ವಿವಾದ ಹುಟ್ ಹಾಕಿರೋದು, ಇವರೆಲ್ಲರ ವಕಾಲತ್ತು ಕಾಂಗ್ರೆಸಿಗರೇ ಮಾಡ್ತಿರೋದು ಕಾಕತಾಳಿಯ ಅಲ್ಲ ಎಂದು ಕಿಡಿಕಾರಿದ್ದಾರೆ..








