IPL | ಮಿಲಿಯನ್ ಡಾಲರ್ ಪ್ರಶ್ನೆಗೆ ಉತ್ತರ.. ಬಂದೇ ಬಿಟ್ಟ RCB ಕ್ಯಾಪ್ಟನ್..!!
ಮಿಲಿಯನ್ ಡಾಲರ್ಸ್ ಪ್ರಶ್ನೆಗೆ ಕೊನೆಗೂ ಉತ್ತರ ಸಿಕ್ಕಿದೆ. ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ನಾಯಕ ಯಾರು..? ವಿರಾಟ್ ಕೊಹ್ಲಿಯ ಉತ್ತಾಧಿಕಾರಿ ಯಾರು..? ಎಂಬ ಪ್ರಶ್ನೆಗೆ ಉತ್ತರ ಸಿಕ್ಕಿದೆ. faf-du-plessis-will-be-appointed-new-captain RCB
ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ನೂತನ ನಾಯಕ ಶೀಘ್ರದಲ್ಲೇ ಬರಲಿದ್ದಾರೆ.
ಆರ್‌ಸಿಬಿಯ ನೂತನ ನಾಯಕನಾಗಿ ದಕ್ಷಿಣ ಆಫ್ರಿಕಾದ ಸ್ಟಾರ್ ಆಟಗಾರ ಫಾಪ್ ಡುಪ್ಲಸೀಸ್ ಆಯ್ಕೆ ಬಹುತೇಕ ಖಚಿತವಾಗಿದೆ.
ಡುಪ್ಲಸೀಸ್ ಅವರನ್ನು ನಾಯಕನಾಗಿ ಒಂದೆರಡು ದಿನಗಳಲ್ಲಿ ಆರ್‌ಸಿಬಿ ಫ್ರಾಂಚೈಸಿ ಘೋಷಿಸುವ ಸಾಧ್ಯತೆಗಳಿವೆ.
ಮೆಗಾ ಹರಾಜಿನಲ್ಲಿ ಬೆಂಗಳೂರು ಫ್ರಾಂಚೈಸಿ, ಡುಪ್ಲಸೀಸ್ ಅವರನ್ನ 7 ಕೋಟಿಗೆ ಖರೀದಿಸಿದೆ.
IPL-2021 ಸೀಸನ್ ನಂತರ ವಿರಾಟ್ ಕೊಹ್ಲಿ RCB ನಾಯಕತ್ವದಿಂದ ಕೆಳಗಿಳಿದಿದ್ದಾರೆ.
ಆದಾಗ್ಯೂ, ಎಬಿ ಡಿವಿಲಿಯರ್ಸ್ ಮುಂದಿನ ನಾಯಕರಾಗುತ್ತಾರೆ ಎಂದು ವ್ಯಾಪಕವಾಗಿ ನಂಬಲಾಗಿತ್ತು.
ಆದ್ರೆ ಡಿವಿಲಿಯರ್ಸ್ ವಿದಾಯ ಘೋಷಿಸಿದರು. ಇದಾದ ಬಳಿಕ ಮ್ಯಾಕ್ಸ್ ವೆಲ್ ಗೆ ನಾಯಕನ ಪಟ್ಟ ನೀಡಲಾಗುವುದು ಎಂದು ಹೇಳಲಾಗುತ್ತಿತ್ತು.
ಈ ಮಧ್ಯೆ ಆರ್ ಸಿಬಿ ಮೂಲದವರೊಬ್ಬರು ಈ ಬಗ್ಗೆ ಮಾತನಾಡಿದ್ದು, “ನಮ್ಮ ತಂಡದ ನಾಯಕತ್ವ ವಹಿಸಲು ಡುಪ್ಲೆಸಿಸ್ ಸೂಕ್ತ ವ್ಯಕ್ತಿ ಎಂದು ನಾವು ಭಾವಿಸುತ್ತೇವೆ.
ಆದ್ರೆ ನಮಗೆ ನಿರ್ಧರಿಸಲು ಸಮಯಬೇಕು. ನಾವು ಮ್ಯಾಕ್ಸ್‌ವೆಲ್ ಲಭ್ಯತೆಯ ಬಗ್ಗೆ ಕಾಯುತ್ತಿದ್ದೇವೆ.
ಮದುವೆಯಿಂದಾಗಿ ಅವರು ಕೆಲವು ಪಂದ್ಯಗಳನ್ನು ಕಳೆದುಕೊಳ್ಳುವ ಸಾಧ್ಯತೆಯಿದೆ. ಹೀಗಾಗಿ ಡುಪ್ಲಸಿಸ್ ಸೂಕ್ತ ವ್ಯಕ್ತಿ ಎಂದು ನಮಗೆ ಅನಿಸುತ್ತಿದೆ ಎಂದಿದ್ದಾರೆ.









