ADVERTISEMENT
Tuesday, July 21, 2026
  • Home
  • About Us
  • Contact Us
  • Privacy Policy
Cini Bazaar
Sports
Advertisement
ADVERTISEMENT
  • Home
  • Newsbeat
  • State
    • Samagra karnataka
    • Malenadu Karnataka
    • Kalyana karnataka
    • Coastal Karnataka
    • Hale Mysore
    • Mumbai Karnataka
  • Politics
  • National
  • International
  • Crime
  • Cinema
  • Sports
  • Astro
  • Health
  • More
    • Life Style
    • TECHNOLOGY
    • Saaksha Special
    • Marjala Manthana
    • Cooking
    • Bigg Boss 8
    • Viral News
    • IPL 2020
    • IPL 2021
    • GALLERY
No Result
View All Result
Home Newsbeat

fifa world cup 2026- ಅಂದು ಹಾಸ್ಟೆಲ್ ರೂಮ್‍ನಲ್ಲಿದ್ದ ಬಾಲಕ ಇಂದು ಫಿಫಾ ವಿಶ್ವ ಚಾಂಪಿಯನ್ ತಂಡದ ನಾಯಕ..! ರೋಡ್ರಿ ಎಂಬ ಸರಳತೆಯ ಸಾಕಾರಮೂರ್ತಿಯ ಹೆಜ್ಜೆ ಗುರುತು.!

admin by admin
July 21, 2026
in Newsbeat, Sports, ಕ್ರೀಡೆ
spain captain rodri with 2025 fifa world cup trophy

spain captain rodri with 2025 fifa world cup trophy

Share on FacebookShare on TwitterShare on WhatsappShare on Telegram

ಅಂದು ಹಾಸ್ಟೆಲ್ ರೂಮ್‍ನಲ್ಲಿದ್ದ ಬಾಲಕ ಇಂದು ಫಿಫಾ ವಿಶ್ವ ಚಾಂಪಿಯನ್ ತಂಡದ ನಾಯಕ..! ರೋಡ್ರಿ ಎಂಬ ಸರಳತೆಯ ಸಾಕಾರಮೂರ್ತಿಯ ಹೆಜ್ಜೆ ಗುರುತು.!

ಆಟ..ಪಾಠ..ಶಿಸ್ತು…! ಇದು ಆತ ತನ್ನ ಬದುಕಿನಲ್ಲಿ ಅಳವಡಿಸಿಕೊಂಡಿರುವ ಸಿದ್ಧಸೂತ್ರಗಳು.

Related posts

ಬಡವರ ಪಿಂಚಣಿಗೆ ಕತ್ತರಿ ಹಾಕಿ ಕಾಂಗ್ರೆಸ್ ಕಾರ್ಯಕರ್ತರಿಗೆ ಗಂಜಿ ಕೇಂದ್ರ: ಭಾರತ್ ಜೋಡೋ ಸಂಘ ಸ್ಥಾಪನೆ ಹಿಂದಿನ ಅಸಲಿ ಬಣ್ಣ ಬಯಲು ಮಾಡಿದ್ರ ಆರ್ ಅಶೋಕ್!?

ಅಕ್ರಮ ವಲಸಿಗರಿಗೆ ದಾಖಲೆ ಸೃಷ್ಟಿಸುವ ಹುನ್ನಾರವೇ ಮನೆ ಬಾಗಿಲಿಗೆ ಪ್ರಮಾಣಪತ್ರ ನೀಡುವ ಸರ್ಕಾರದ ಆತುರವೇಕೆ :ರಾಜ್ಯದ ಭದ್ರತೆ ಮತ್ತು ಕನ್ನಡಿಗರ ಹಿತಾಸಕ್ತಿ ಬಲಿ ಕೊಡಬೇಡಿ-ಆರ್ ಅಶೋಕ್

July 21, 2026
ಕನ್ನಡದಲ್ಲೇ ತೀರ್ಪು ಪ್ರಕಟಿಸಿದ ಹೈಕೋರ್ಟ್

ಬಿಡದಿ ಟೌನ್‌ಶಿಪ್ ವಿರುದ್ಧದ ಪಿಐಎಲ್ ವಜಾ ಮಾಡಿದ ಹೈಕೋರ್ಟ್

July 21, 2026

ನಿನಗೆ ಇಷ್ಟವಾದ ಆಟವನ್ನೇ ಆಡು. ಆದ್ರೆ ಓದಿನ ಕಡೆಗೂ ಗಮನ ಹರಿಸು. ಶಿಸ್ತು ಅನ್ನೋದು ನಿನ್ನ ಪ್ರತಿ ಹೆಜ್ಜೆಯಲ್ಲಿರಬೇಕು. ಆಗಲೇ ಸಾಧನೆ, ಯಶಸ್ಸು ನಿನ್ನನ್ನು ನೆರಳಿನಂತೆ ಹಿಂಬಾಳಿಸುತ್ತದೆ. ಇದು ಅವನಿಗೆ ಹೆತ್ತವರು ಹೇಳಿಕೊಟ್ಟ ಜೀವನದ ಸಾರಗಳು.

ಕೊನೆಗೆ ಅಂದುಕೊಂಡಂತೆ ಫುಟ್‍ಬಾಲ್ ಆಟವೇ ಆತನ ವೃತ್ತಿಬದುಕಾಯ್ತು. ಅಪ್ಪ ಅಮ್ಮನ ಇಚ್ಚೆಯಂತೆ ಶಿಕ್ಷಣದಲ್ಲೂ ಪದವಿ ಪಡೆದ. ಸಾಧನೆಯ ಮೆಟ್ಟಿಲುಗಳನ್ನು ಏರಿಕೊಂಡು ಹೋದ. ಆದ್ರೆ ತಾನು ಬೆಳೆದು ಬಂದ ದಾರಿಯನ್ನು ಮರೆಯಲಿಲ್ಲ. ಸರಳತೆ ಹಾಗೂ ಶಿಸ್ತು ಬದ್ಧ ಜೀವನದಿಂದಲೇ ಇಂದು ಜಾಗತಿಕ ಫುಟ್‍ಬಾಲ್‍ನ ಅಪ್ರತಿಮ ನಾಯಕನಾಗಿ ಹೊರಹೊಮ್ಮಿದ್ದಾನೆ.

2026ರ ಫಿಫಾ ವಿಶ್ವಕಪ್ ಟ್ರೋಫಿಯನ್ನು ಕೈಯಲ್ಲಿ ಹಿಡಿದುಕೊಂಡು ವಿಶ್ವ ಚಾಂಪಿಯನ್ ತಂಡದ ನಾಯಕ ಎಂಬ ಹೆಗ್ಗುರುತ್ತನ್ನು ಮೂಡಿಸಿದ್ದಾನೆ. ಜೊತೆಗೆ ಗೋಲ್ಡನ್ ಬಾಲ್ ಟ್ರೋಫಿಯೊಂದಿಗೆ ತನ್ನ ವೃತ್ತಿಪರ ಬದುಕನ್ನು ಅರ್ಥಪೂರ್ಣವಾಗಿಸಿಕೊಂಡಿದ್ದಾನೆ.

ಹೌದು, ಆತನ ಹೆಸರು – ರೋಡ್ರಿಗೋ ಹರ್ನಾಂಡಿಸ್ ಕ್ಯಾಸ್ಕಾಂಟೆ.
ಅಭಿನಮಾನಿಗಳು ಪ್ರೀತಿಯಿಂದ ಕರೆಯುವುದು ರೋಡ್ರಿ..!
ವಿಶ್ವ ಚಾಂಪಿಯನ್ ಸ್ಪೇನ್ ತಂಡದ ನಾಯಕ.!

ರೋಡ್ರಿ.. ಫುಟ್‍ಬಾಲ್ ಅಂಗಣದ ಡಿಫೆನ್ಸಿವ್ ಮಿಡ್ ಫೀಲ್ಡರ್. ಸಾಮಾನ್ಯವಾಗಿ ಕಾಲ್ಚೆಂಡಿನ ಆಟದಲ್ಲಿ ಫಾರ್ವರ್ಡ್ ಆಟಗಾರರೇ ಆಕರ್ಷಣೆಯ ಕೆಂದ್ರ ಬಿಂದು. ಆದ್ರೆ ರೋಡ್ರಿ ಮಿಡ್ ಫೀಲ್ಡರ್ ಆಗಿ ಸೂಜಿಗಲ್ಲಿನಂತೆ ಗಮನ ಸೆಳೆಯುತ್ತಾನೆ. ಅದ್ಭುತ ಗೋಲು ದಾಖಲಿಸುವ ಮೂಲಕ ಸರ್ವ ಶ್ರೇಷ್ಠ ಆಟಗಾರರಿಗೆ ಠಕ್ಕರ್ ಕೊಟ್ಟಿದ್ದಾನೆ. ಮೆಸ್ಸಿ ಹಾಗೂ ಸಿಆರ್-7 ನಂತಹ ಸಾರ್ವಕಾಲಿಕ ಆಟಗಾರರ ನಡುವೆಯೂ 2024ರ ಬ್ಯಾಲನ್ ಡಿ ಓರ್ ಪ್ರಶಸ್ತಿ ಗೆದ್ದಿರುವುದು ಅಸಾಮಾನ್ಯ ಸಾಧನೆ.

ಮಿಡ್ ಫೀಲ್ಡರ್‍ನ ಬಾಸ್ ರೋಡ್ರಿ ಯಾರು..?

ಜೂನ್ 22, 1996 ರೊಡ್ರಿಯ ಡೇಟ್ ಆಫ್ ಬರ್ತ್. ತಂದೆ ಇಂಜಿನಿಯರ್. ತಾಯಿ ಕಂಪೆನಿಯೊಂದರ ಉದ್ಯೋಗಿ. ಮಧ್ಯಮ ವರ್ಗದ ಕುಟುಂಬ. ಮೊದಲು ಓದು..ಆಮೇಲೆ ಆಟ ಎಂಬುದು ಮನೆಯ ನೀತಿ-ನಿಯಮ. ಆದ್ರೆ ರೋಡ್ರಿಗೆ ಫುಟ್‍ಬಾಲ್ ಆಟದ ಮೇಲೆ ವ್ಯಾಮೋಹ. ಹಾಗಂತ ಮಗನ ಆಸಕ್ತಿಯನ್ನು ಹೆತ್ತವರು ಕಡೆಗಣಿಸಲಿಲ್ಲ.

ತನ್ನ 11ನೇ ವಯಸ್ಸಿನಿಂದ ಸ್ಪೇನ್‍ನ ಅಟ್ಲೆಟಿಕೊ ಕ್ಲಬ್‍ನಲ್ಲಿ ಫುಟ್‍ಬಾಲ್ ತರಬೇತಿ ಶುರು. ಆದ್ರೆ 17 ವಯಸ್ಸಿನಲ್ಲೇ ಕ್ಲಬ್‍ನಿಂದ ಅಪಮಾನ-ಆಘಾತ. ಆಟಕ್ಕೆ ಬೇಕಾದ ದೈಹಿಕ ಸಾಮಥ್ರ್ಯ ಇಲ್ಲ ಎಂದು ಕ್ಲಬ್ ರೋಡ್ರಿಗೆ ಗೇಟ್ ಪಾಸ್ ನೀಡಿತ್ತು. ಆದ್ರೂ ಎದೆಗುಂದಲಿಲ್ಲ.

ಬಳಿಕ ರೋಡ್ರಿ ವಿಲ್ಲಾರಿಯಲ್ ಕ್ಲಬ್ ಅನ್ನು ಸೇರಿಕೊಂಡಿದ್ದ. ಕಠಿಣ ತರಬೇತಿಯ ಜೊತೆಗೆ ಡಯಟ್ ಮಾಡಿಕೊಂಡು ತನ್ನ ದೇಹದಾಢ್ರ್ಯತೆಯನ್ನು ಹೆಚ್ಚಿಸಿಕೊಂಡಿದ್ದ. 6.3 ಅಡಿ ಬೆಳೆದು ಫಿಟ್ ಆಂಡ್ ಫೈನ್ ಅಂತ ಸಾಬೀತುಪಡಿಸಿದ್ದ. ತನ್ನ ಸಾಮಥ್ರ್ಯ ಹಾಗೂ ಪ್ರತಿಭೆಯನ್ನು ಮೈದಾನದಲ್ಲಿ ಅನಾವರಣಗೊಳಿಸಿದ್ದ.

ರೋಡ್ರಿಯ ಜೈತ್ರಯಾತ್ರೆ ಶುರುವಾಗಿದ್ದು ಎಲ್ಲಿಂದ..?

ಆಗ ಅಟ್ಲೆಟಿಕೊ ಕ್ಲಬ್‍ಗೆ ತಾನು ಮಾಡಿರುವ ತಪ್ಪಿನ ಅರಿವಾಯ್ತು. ಹಾಗಾಗಿ 2018ರಲ್ಲಿ ರೋಡ್ರಿಗೆ ದುಬಾರಿ ಮೊತ್ತ ನೀಡಿ ಖರೀದಿಸಿತ್ತು. ಹಳೆಯ ಅಪಮಾನಕ್ಕೆ ಮೈದಾನದಲ್ಲೇ ಉತ್ತರ ನೀಡಿದ್ದ. ರೋಡ್ರಿಯ ಮನಮೋಹಕ ಆಟಕ್ಕೆ ಇಂಗ್ಲೆಂಡ್‍ನ ಮ್ಯಾಂಚೆಸ್ಟರ್ ಸಿಟಿ ಕ್ಲಬ್ ಮನಸೋತಿತ್ತು.

2019ರಿಂದ ಮ್ಯಾಚೆಂಸ್ಟರ್ ಸಿಟಿ ತಂಡ ಸೇರಿದ ಮೇಲೆ ರೋಡ್ರಿಯ ಬದುಕಿನ ಚಿತ್ರಣವೇ ಬದಲಾಯ್ತು. ಅಲ್ಲಿ ಪೆಪ್ ಗಾರ್ಡಿಯೋಲಾ ಎಂಬ ಮಹಾಗುರುವಿನ ದರ್ಶನವಾಯ್ತು. ಗುರುವಿನ ನೆಚ್ಚಿನ ಶಿಷ್ಯನಾದ ರೋಡ್ರಿ, ಸದ್ಯ ಫುಟ್‍ಬಾಲ್ ಜಗತ್ತಿನ ಅದ್ಭುತ ಡಿಫೆನ್ಸಿವ್ ಮಿಡ್ ಫೀಲ್ಡರ್.

ಹಾಗಂತ ರೋಡ್ರಿ, ಬರೀ ತಂಡದ ಆಧಾರ ಸ್ತಂಭವಲ್ಲ. ದೂರದಿಂದಲೇ ಗೋಲು ಹೊಡೆಯುವ ಜಾದುಗಾರ. ತಾಳ್ಮೆಯಿಂದಲೇ ಚೆಂಡಿನ ಮೇಲೆ ಹಿಡಿತ ಸಾಧಿಸುವ ಮಾಂತ್ರಿಕ ಆಟಗಾರ. ಒತ್ತಡದಲ್ಲೂ ಇಡೀ ಪಂದ್ಯವನ್ನು ನಿಯಂತ್ರಿಸುವ ಪ್ಲೇ ಬ್ರೇಕರ್. ನಿಖರವಾದ ಪಾಸ್‍ಗಳನ್ನು ನೀಡುವ ಅದ್ಭುತ ಪ್ಲೇ ಮೇಕರ್. ನಿರ್ಣಾಯಕ ಹಂತದಲ್ಲಿ ಪಂದ್ಯದ ಗತಿಯನ್ನೇ ಬದಲಾಯಿಸುವ ಗೇಮ್ ಚೇಂಜರ್. ಮಿಡ್‍ಫೀಲ್ಡ್‍ನಲ್ಲೇ ಚೆಂಡನ್ನು ಕಸಿದುಕೊಳ್ಳುವ ಮಾಸ್ಟರ್. ಯುವ ಆಟಗಾರರಿಗೆ ಧೈರ್ಯ ತುಂಬುವ ತಂಡದ ಬಿಗ್ ಬ್ರದರ್.!

ಮ್ಯಾಂಚೆಸ್ಟರ್ ಸಿಟಿಯ ನಂಬಿಕಸ್ಥ ಆಟಗಾರ..!

ನಿಜ, ರೋಡ್ರಿ ಮ್ಯಾಂಚೆಸ್ಟರ್ ಸಿಟಿ ತಂಡದ ಗೆಲುವಿನ ಸರದಾರನೂ ಆಗಿದ್ದ. ಸುಮಾರು 260ಕ್ಕೂ ಹೆಚ್ಚು ಪಂದ್ಯಗಳನ್ನು ಆಡಿದ್ದು, 190ಕ್ಕಿಂತಲೂ ಹೆಚ್ಚು ಪಂದ್ಯಗಳನ್ನು ಗೆಲ್ಲಿಸಿಕೊಟ್ಟಿದ್ದಾನೆ. ಈತನ ಗೆಲುವಿನ ಸರಾಸರಿ ಶೇ. 73ಕ್ಕಿಂತಲೂ ಹೆಚ್ಚಿದೆ. ಅಲ್ಲದೆ 2023ರ ಯುಸಿಎಲ್ ಲೀಗ್, ಎಫ್ ಎ ಕಪ್ ಗೆಲುವಿನಲ್ಲೂ ಪ್ರಮುಖ ಪಾತ್ರವಹಿಸಿದ್ದಾನೆ. ಅದರಲ್ಲೂ ಚಾಂಪಿಯನ್ಸ್ ಲೀಗ್ ಫೈನಲ್‍ನಲ್ಲಿ ದಾಖಲಿಸಿದ್ದ ಗೆಲುವಿನ ಗೋಲು ಇತಿಹಾಸ ಪುಟ ಸೇರಿಕೊಂಡಿದೆ.

21ನೇ ವಯಸ್ಸಿನಲ್ಲಿ ಸ್ಪೇನ್ ರಾಷ್ಟ್ರೀಯ ತಂಡಕ್ಕೆ ಎಂಟ್ರಿ..!

ಸ್ಪೇನ್ ತಂಡದ ದಿಗ್ಗಜ ಮಿಡ್ ಫೀಲ್ಡರ್ ಸೆರ್ಗಿಯೊ ಬುಸ್ಕೆಟ್ಸ್ ನಿವೃತ್ತಿಯ ನಂತರ ರೋಡ್ರಿ ಸ್ಪೇನ್ ತಂಡದ ಆಧಾರಸ್ತಂಭವಾದ. 2024ರ ಯೂರೋಪಿಯನ್ ಚಾಂಪಿಯನ್‍ಶಿಪ್ ಪ್ರಶಸ್ತಿಯ ಹಿಂದೆ ರೋಡ್ರಿಯ ತಂತ್ರಗಾರಿಕೆ ಇತ್ತು. ಅದ್ಭುತ ಆಟಕ್ಕೆ ಟೂರ್ನಿಯ ಪ್ಲೇಯರ್ ಆಫ್ ಟೂರ್ನಮೆಂಟ್ ಪ್ರಶಸ್ತಿಯೂ ಲಭಿಸಿತ್ತು

ಸ್ಪೇನ್ ತಂಡದ ನಾಯಕ ವಿಶ್ವದ ಅಧಿಪತಿಯಾಗಿದ್ದು ಹೇಗೆ..?

ಸ್ಪೇನ್ ಗೆಲುವಿನ ಅಜೇಯ ಓಟದ ಹಿಂದೆ ರೋಡ್ರಿಯ ಪರಿಶ್ರಮ ಸಾಕಷ್ಟಿದೆ. ಹೀಗಾಗಿ ತಂಡದ ನಾಯಕನಾಗಿ ಆಯ್ಕೆಯಾದ. ಯುವ ಆಟಗಾರರಿಗೆ ಅವಕಾಶದ ಜೊತೆ ಶಿಸ್ತಿನ ಪಾಠ ಮಾಡಿದ್ದ. ಒಗ್ಗಟ್ಟಿನ ಮಂತ್ರ ಜಪಿಸಿದ್ದ. ಇಡೀ ತಂಡದಲ್ಲಿ ಒಂದು ಪರಿಪೂರ್ಣ ಕುಟುಂಬದ ವಾತಾವರಣವನ್ನು ಸೃಷ್ಟಿಸಿದ್ದ. ಹೀಗಾಗಿಯೇ ಸ್ಪೇನ್ ಸೂಪರ್ ಸ್ಟಾರ್ ಗಳಿಲ್ಲದೆ ಅದ್ಭುತ ತಂಡವಾಗಿ ಹೊರಹೊಮ್ಮುವಂತೆ ಮಾಡಿದ್ದ.

2026ರ ಫಿಫಾ ವಿಶ್ವಕಪ್ ಗೆದ್ದು ಇತಿಹಾಸ ನಿರ್ಮಿಸಿದ್ದು ಹೇಗೆ..?

ಈ ಬಾರಿಯ ಫಿಫಾ ವಿಶ್ವಕಪ್‍ನಲ್ಲಿ ಸ್ಪೇನ್ ಪ್ರಶಸ್ತಿ ಗೆಲ್ಲುವ ನೆಚ್ಚಿನ ತಂಡವಾಗಿತ್ತು. ಕೇಪ್‍ವರ್ಡಿ ವಿರುದ್ದ ಗೋಲು ರಹಿತ ಡ್ರಾ ಮಾಡಿಕೊಂಡ ನಂತರ, ಸ್ಪೇನ್ ಗೂಳಿಗಳ ಆಟದ ಖದರೇ ಬದಲಾಯ್ತು. ಬಲಿಷ್ಠ ತಂಡಗಳಿಗೆ ಸಡ್ಡು ಹೊಡೆದ ಸ್ಪೇನ್‍ನ ಅಪ್ರತಿಮ ಆಟದ ಹಿಂದೆ ಕ್ಯಾಪ್ಟನ್ ರೋಡ್ರಿಯ ಮಾಸ್ಟರ್ ಮೈಂಡ್ ಇತ್ತು.

ಸಿಆರ್-7, ಮೆಸ್ಸಿ, ಎಂಬಾಪೆಯಂತಹ ಆಟಗಾರರು ಕೂಡ ರೋಡ್ರಿ ರಚಿಸಿದ್ದ ಚಕ್ರವ್ಯೂಹದೊಳಗೆ ಬಂಧಿಯಾಗಿದ್ದರು. 2026ರ ಫಿಫಾ ವಿಶ್ವಕಪ್‍ನಲ್ಲಿ ಆಡಿರುವ ಎಂಟು ಪಂದ್ಯಗಳಲ್ಲಿ ಸ್ಪೇನ್ ಏಳು ಪಂದ್ಯಗಳನ್ನು ಗೆದ್ದುಕೊಂಡಿದೆ. ಒಂದು ಪಂದ್ಯ ಮಾತ್ರ ಡ್ರಾಗೊಂಡಿದೆ. ಬೆಲ್ಜಿಯಂ ಒಂದು ಗೋಲು ಹೊಡೆದಿರುವುದು ಬಿಟ್ರೆ ಬೇರೆ ಯಾವುದೇ ಎದುರಾಳಿ ತಂಡಕ್ಕೂ ಗೋಲು ಬಿಟ್ಟುಕೊಟ್ಟಿಲ್ಲ. ಇದು ಚಾಂಪಿಯನ್ ತಂಡವನ್ನು ಮುನ್ನೆಡೆಸಿದ್ದ ರೋಡ್ರಿಯ ನಾಯಕತ್ವಕ್ಕೆ ಹಿಡಿದ ಕೈಗನ್ನಡಿ.

ಅಂದು 14 ವರ್ಷದ ಬಾಲಕ.. 16 ವರ್ಷದ ನಂತರ ಕೈಯಲ್ಲಿ ಫಿಫಾ ಟ್ರೋಫಿ..!

2010ರಲ್ಲಿ ಸ್ಪೇನ್ ಮೊದಲ ಬಾರಿ ಫಿಫಾ ವಿಶ್ವಕಪ್ ಗೆದ್ದುಕೊಂಡಿತ್ತು. ಆಗ ರೋಡ್ರಿ 14 ವರ್ಷದ ಬಾಲಕನಾಗಿದ್ದ. ಇಡೀ ದೇಶದ ಸಂಭ್ರಮದಲ್ಲಿ ರೋಡ್ರಿ ಕೂಡ ಭಾಗಿಯಾಗಿದ್ದ. ಆದರೆ ಮುಂದೊಂದು ದಿನ ತಾನೂ ಈ ಟ್ರೋಫಿಯನ್ನು ಹಿಡಿದು ಸಂಭ್ರಮಿಸುತ್ತೇನೆ ಎಂಬ ಯೋಚನೆ ಕೂಡ ಆತ ಮಾಡಿರಲಿಲ್ಲ. ಆದ್ರೆ 16 ವರ್ಷಗಳ ಬಳಿಕ ಅದೇ ರೋಡ್ರಿ ನಾಯಕನಾಗಿ, ಫಿಫಾ ಟ್ರೋಫಿಯನ್ನು ಕೈಯಲ್ಲಿ ಹಿಡಿದುಕೊಂಡು ಮುದ್ದಾಡಿದ್ದಾನೆ.

ಸರಳತೆಯ ಸಾಕಾರಮೂರ್ತಿ ರೋಡ್ರಿ..!

ಎಷ್ಟೇ ಅದ್ಭುತ ಆಟಗಾರನಾಗಿದ್ರೂ ರೋಡ್ರಿ ಎಂದಿಗೂ ಅಹಂಕಾರದಿಂದ ಬೀಗಲಿಲ್ಲ. ಕೋಟಿ ಕೋಟಿ ದುಡ್ಡು ಸಂಪಾದನೆ ಮಾಡಿದ್ರೂ ಸಿರಿತನವನ್ನು ತೋರಿಸಿಕೊಳ್ಳಲಿಲ್ಲ. ನಡೆದು ಬಂದು ಹಾದಿಯನ್ನು ಮರೆಯಲಿಲ್ಲ. ಅಪ್ಪ – ಅಮ್ಮ ಕಲಿಸಿದ್ದ ಜೀವನ ಮೌಲ್ಯಗಳು ಹಾಗೂ ಸಂಸ್ಕಾರಗಳನ್ನು ಮರೆಯಲಿಲ್ಲ. ಹಾಗಾಗಿಯೇ ಇವತ್ತು ರೋಡ್ರಿ ವಿಶ್ವ ಚಾಂಪಿಯನ್ ತಂಡದ ನಾಯಕನಾಗಿದ್ದು.

ಅಂದ ಹಾಗೆ, ಕ್ಲಬ್ ಪರ ಆಡುತ್ತಿರುವಾಗಲೇ, ರೋಡ್ರಿ ವಾರಕ್ಕೆ ಲಕ್ಷಾಂತರ ರೂಪಾಯಿ ಸಂಭಾವಣೆ ಪಡೆಯುತ್ತಿದ್ದ. ಜೊತೆಗೆ ಸ್ಪೇನ್‍ನ ಜೌಮೆ ವಿವಿಯಲ್ಲಿ ಬಿಸಿನೆಸ್ ಅಡ್ಮಿನಿಸ್ಟ್ರೇಷನ್ ಮತ್ತು ಮ್ಯಾನೇಜ್‍ಮೆಂಟ್ ಪದವಿ ಓದುತ್ತಿದ್ದ. ಮನಸ್ಸು ಮಾಡಿದ್ರೆ ಐಷಾರಾಮಿ ಜೀವನ ಸಾಗಿಸಬಹುದಿತ್ತು. ಆದ್ರೆ ರೋಡ್ರಿ ಆಯ್ಕೆ ಮಾಡಿಕೊಂಡಿದ್ದು ಕಾಲೇಜ್ ಹಾಸ್ಟೆಲ್ ಮತ್ತು ಒಂದು ಸೆಕೆಂಡ್ ಹ್ಯಾಂಡ್ ಕಾರು ಮಾತ್ರ.

ಹಾಸ್ಟೆಲ್‍ನಲ್ಲಿ ರೋಡ್ರಿ ಒಬ್ಬ ಸಾಮಾನ್ಯ ವಿದ್ಯಾರ್ಥಿಯಾಗಿದ್ದ. ತನ್ನ ಬಟ್ಟೆಯನ್ನು ತಾನೇ ತೊಳೆಯುತ್ತಿದ್ದ. ಕ್ಯೂನಲ್ಲಿ ನಿಂತುಕೊಂಡು ಊಟ ಮಾಡುತ್ತಿದ್ದ. ಕಾಲೇಜ್‍ನಲ್ಲೂ ಅಷ್ಟೇ ನೇಮ್ – ಫೇಮ್ ಇದ್ರೂ ತೋರಿಸಿಕೊಳ್ಳುತ್ತಿರಲಿಲ್ಲ. ರೋಡ್ರಿ ಒಬ್ಬ ಫುಟ್‍ಬಾಲ್ ಆಟಗಾರ ಎಂಬುದು ಬಹುತೇಕ ವಿದ್ಯಾರ್ಥಿಗಳಿಗೂ ಗೊತ್ತಿರಲಿಲ್ಲ. ಅಷ್ಟೊಂದು ಸರಳತೆಯಿಂದ ಜೀವನ ಸಾಗಿಸುತ್ತಿದ್ದ.

“ಕಾರ್ಪೋರೇಟ್” ಮಿಡ್ ಫೀಲ್ಡರ್..!

ಇನ್ನು ಶಿಸ್ತು ಅನ್ನೋ ಪದಕ್ಕೆ ಮತ್ತೊಂದು ಹೆಸರು ರೋಡ್ರಿ. ಜೆರ್ಸಿಯನ್ನು ಇನ್‍ಶರ್ಟ್ ಮಾಡಿಕೊಂಡೇ ಇವತ್ತಿಗೂ ಮೈದಾನಕ್ಕೆ ಇಳಿಯುತ್ತಿದ್ದಾನೆ. ” ಇನ್‍ಶರ್ಟ್ ” ರೋಡ್ರಿಯ ಟ್ರೇಡ್ ಮಾರ್ಕ್. ಹಾಗಾಗಿಯೇ ಸಹ ಆಟಗಾರರು ರೋಡ್ರಿಯನ್ನು ಕಾರ್ಪೋರೇಟ್ ಮಿಡ್ ಫೀಲ್ಡರ್ ಅಂತ ಕರೆÉಯುವುದು.

ನೋ ಸೋಷಿಯಲ್ ಮೀಡಿಯಾ.. ನೋ ಟ್ಯಾಟ್..!

ಇನ್ನು ರೋಡ್ರಿ, ಸೋಷಿಯಲ್ ಮೀಡಿಯಾದಿಂದ ದೂರವೇ ಉಳಿದುಕೊಂಡಿದ್ದಾನೆ. ಯಾವುದೇ ಜಾಲ ತಾಣದ ಖಾತೆಗಳಿಲ್ಲ. ಸೋಷಿಯಲ್ ಮೀಡಿಯಾ ನೆಮ್ಮದಿಂiÀನ್ನು ಹಾಳು ಮಾಡುತ್ತದೆ. ನನಗೆ ಬೇಕಾಗಿರುವುದು ನಿಜವಾದ ಸ್ನೇಹ ಮತ್ತು ಫುಟ್‍ಬಾಲ್ ಮಾತ್ರ ಅಂತಾನೆ ರೋಡ್ರಿ.

ಹಾಗೇ,ರೋಡ್ರಿಯ ದೇಹದ ಮೇಲೆ ಒಂದೇ ಒಂದು ಟ್ಯಾಟ್ ಕೂಡ ಇಲ್ಲ. ಟ್ಯಾಟ್ ಹಾಕಿಸಿಕೊಂಡು ಶೋ ಅಪ್ ಮಾಡುವುದರಲ್ಲಿ ಅರ್ಥವಿಲ್ಲ. ಸರಳವಾಗಿ ಸಮಾಜದಲ್ಲಿ ಜೀವನ ಸಾಗಿಸಬೇಕು. ಅದುವೇ ನಿಜವಾದ ಬದುಕು ಎಂಬುದು ಆತನ ಸಿದ್ಧಾಂತ.

ನಂಬುತ್ತಿರೋ ಬಿಡ್ತಿರೋ.? ಈಗ ಅಲ್ಲ.. ಕೆಲವು ವರ್ಷಗಳ ಹಿಂದೆ ರೋಡ್ರಿ ಸೆಕೆಂಡ್ ಹ್ಯಾಂಡ್ ಕಾರನ್ನು ಬಳಸುತ್ತಿದ್ದ. ರೋಡ್ರಿಯ ಜೀವನ ಶೈಲಿಯನ್ನು ನೋಡಿ ಅವನ ಗೆಳೆಯರು ನಗುತ್ತಿದ್ದರು. ಆದ್ರೆ ರೋಡ್ರಿ ಖಾರವಾಗಿಯೆ ಉತ್ತರ ನೀಡಿ ಅವರ ಬಾಯಿ ಮುಚ್ಚಿಸುತ್ತಿದ್ದÀ. ಕಾರು ಅಂದ್ರೆ ಒಂದು ಸ್ಥಳದಿಂದ ಇನ್ನೊಂದು ಸ್ಥಳಕ್ಕೆ ಹೋಗಿ ಬರಲು ಬಳಸುವ ಒಂದು ವಾಹನ. ಹಾಗಾಗಿ ಅದಕ್ಕೆ ಲಕ್ಷ, ಕೋಟಿಗಟ್ಟಲೇ ಹಣವನ್ನು ಸುರಿಯುವ ಅಗತ್ಯವಿಲ್ಲ ಎಂದು ಭೋಧನೆ ಮಾಡುತ್ತಿದ್ದ.

“ದಿ ಕಾರ್ಪೋರೇಟ್ ಮೆಸ್ಟ್ರೋ”

ಇವತ್ತಿಗೂ ರೋಡ್ರಿ ಐಷಾರಾಮಿ ಜೀವನ ಸಾಗಿಸುತ್ತಿಲ್ಲ. ತನ್ನ ಕುಟುಂಬ ಮತ್ತು ಫುಟ್‍ಬಾಲ್ ಆಟವೇ ಆತನ ದಿನ ನಿತ್ಯದ ಸಂಗಾತಿ. ಅಡಂಬರದ ಜೀವನದಿಂದ ದೂರವೇ ಉಳಿದುಕೊಂಡಿದ್ದಾನೆ. ಪಾರ್ಟಿ, ಮೋಜು ಮಸ್ತಿ ರೋಡ್ರಿಯ ಜೀವನ ಶೈಲಿಯೇ ಅಲ್ಲ.

ಒಟ್ಟಿನಲ್ಲಿ ಆತನ ವೃತ್ತಿ ಬದುಕು ಮಾತ್ರವಲ್ಲ.. ಇಡೀ ಜೀವನವೇ “ದಿ ಕಾರ್ಪೋರೇಟ್ ಮೆಸ್ಟ್ರೋ” ರೀತಿಯಲ್ಲಿದೆ. ಕಾರ್ಪೋರೇಟ್ ಕಂಪೆನಿಯ ಶಿಸ್ತು ಮತ್ತು ವೃತ್ತಿಪರತೆಯಂತೆ ಫುಟ್‍ಬಾಲ್ ಆಟವನ್ನು ಉದ್ಯೋಗ ಅಂತನೇ ಭಾವಿಸಿದ್ದಾನೆ. ಹಾಗೇ ಆರ್ಕೆಸ್ಟ್ರಾವನ್ನು ಮುನ್ನಡೆಸುವ ಮೆಸ್ಟ್ರೋ ಎಂಬ ಮಾಂತ್ರಿಕನಂತೆ, ಮೈದಾನದಲ್ಲಿ ತಂಡವನ್ನು ಮುನ್ನಡೆಸುತ್ತಿದ್ದಾನೆ. ಇಡೀ ಪಂದ್ಯ ಹಾಗೂ ತಂಡವನ್ನು ತನ್ನ ನಿಯಂತ್ರಣದಲ್ಲಿಟ್ಟುಕೊಳ್ಳುವ ಗ್ರೇಟ್ ಲೀಡರ್ ಆಗಿ ಕಾಣುತ್ತಿದ್ದಾನೆ. ಅಂದ ಮೇಲೆ ರೋಡ್ರಿಯ ಬದುಕು ಯುವ ಆಟಗಾರರಿಗೆ ಪ್ರೇರಣೆsÀ ಹಾಗೂ ಸ್ಪೂರ್ತಿಯ ಚಿಲುಮೆ. ನೀವು ಏನಂತಿರಾ..?

ಸನತ್ ರೈ

saakshatv.com

#Rodri #Spain #FIFAWorldCup #SaakshaTV #SanathRai #Inspiration #CorporateMaestro #fifaworldcup2026

Tags: #Rodri #Spain #FIFAWorldCup #SaakshaTV #SanathRai #Inspiration #CorporateMaestro
ShareTweetSendShare
Join us on:

Related Posts

ಬಡವರ ಪಿಂಚಣಿಗೆ ಕತ್ತರಿ ಹಾಕಿ ಕಾಂಗ್ರೆಸ್ ಕಾರ್ಯಕರ್ತರಿಗೆ ಗಂಜಿ ಕೇಂದ್ರ: ಭಾರತ್ ಜೋಡೋ ಸಂಘ ಸ್ಥಾಪನೆ ಹಿಂದಿನ ಅಸಲಿ ಬಣ್ಣ ಬಯಲು ಮಾಡಿದ್ರ ಆರ್ ಅಶೋಕ್!?

ಅಕ್ರಮ ವಲಸಿಗರಿಗೆ ದಾಖಲೆ ಸೃಷ್ಟಿಸುವ ಹುನ್ನಾರವೇ ಮನೆ ಬಾಗಿಲಿಗೆ ಪ್ರಮಾಣಪತ್ರ ನೀಡುವ ಸರ್ಕಾರದ ಆತುರವೇಕೆ :ರಾಜ್ಯದ ಭದ್ರತೆ ಮತ್ತು ಕನ್ನಡಿಗರ ಹಿತಾಸಕ್ತಿ ಬಲಿ ಕೊಡಬೇಡಿ-ಆರ್ ಅಶೋಕ್

by Shwetha
July 21, 2026
0

ರಾಜ್ಯ ಕಾಂಗ್ರೆಸ್ ಸರ್ಕಾರ ಜಾರಿಗೆ ತಂದಿರುವ ಮನೆ ಬಾಗಿಲಿಗೆ ಜಾತಿ ಪ್ರಮಾಣ ಪತ್ರ ಹಾಗೂ ಶಾಶ್ವತ ನಿವಾಸಿ ಪ್ರಮಾಣಪತ್ರ ವಿತರಣೆ ಯೋಜನೆಯು ಸಂವಿಧಾನ ವಿರೋಧಿ ಎಂದು ವಿರೋಧ...

ಕನ್ನಡದಲ್ಲೇ ತೀರ್ಪು ಪ್ರಕಟಿಸಿದ ಹೈಕೋರ್ಟ್

ಬಿಡದಿ ಟೌನ್‌ಶಿಪ್ ವಿರುದ್ಧದ ಪಿಐಎಲ್ ವಜಾ ಮಾಡಿದ ಹೈಕೋರ್ಟ್

by Shwetha
July 21, 2026
0

ಬಿಡದಿ ಟೌನ್‌ಶಿಪ್ ಯೋಜನೆಯನ್ನು ಪ್ರಶ್ನಿಸಿ ಸಲ್ಲಿಸಲಾಗಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿ (PIL)ಯನ್ನು ಕರ್ನಾಟಕ ಹೈಕೋರ್ಟ್ ವಜಾಗೊಳಿಸಿದೆ. ಮುಖ್ಯ ನ್ಯಾಯಮೂರ್ತಿ ವಿಭು ಬಖ್ರು ನೇತೃತ್ವದ ವಿಭಾಗೀಯ ಪೀಠ ಈ...

ಪ್ರತಿಭಟನೆಯಿಂದ ಏನು ಸಾಧಿಸುತ್ತೀರಾ ಸಂಸತ್ ಚಲೋ ಹೆಸರಲ್ಲಿ ಗಲಾಟೆ ಮಾಡುತ್ತಿರುವವರಿಗೆ ಹೇಮಾ ಮಾಲಿನಿ ಪ್ರಶ್ನೆ

ಪ್ರತಿಭಟನೆಯಿಂದ ಏನು ಸಾಧಿಸುತ್ತೀರಾ ಸಂಸತ್ ಚಲೋ ಹೆಸರಲ್ಲಿ ಗಲಾಟೆ ಮಾಡುತ್ತಿರುವವರಿಗೆ ಹೇಮಾ ಮಾಲಿನಿ ಪ್ರಶ್ನೆ

by Shwetha
July 21, 2026
0

ಸಂಸತ್ತಿನ ಮುಂಗಾರು ಅಧಿವೇಶನ ಆರಂಭವಾಗುತ್ತಿದ್ದಂತೆಯೇ ದೆಹಲಿಯ ಬೀದಿಗಳಲ್ಲಿ ಪ್ರತಿಭಟನೆಯ ಕಾವು ಜೋರಾಗಿದೆ. ಕಾಕ್ರೋಚ್ ಜನತಾ ಪಾರ್ಟಿ ಹಮ್ಮಿಕೊಂಡಿದ್ದ ಸಂಸದ್ ಚಲೋ ಪಾದಯಾತ್ರೆ ಉದ್ವಿಗ್ನ ಪರಿಸ್ಥಿತಿಗೆ ಕಾರಣವಾಗಿದೆ. ಪ್ರತಿಭಟನಾಕಾರರು...

ಹೋಂಸ್ಟೇ ನೋಂದಣಿ ಕಡ್ಡಾಯ; ನಿಯಮ ಉಲ್ಲಂಘಿಸಿದರೆ ಮಾನ್ಯತೆ ರದ್ದು

ಹೋಂಸ್ಟೇ ನೋಂದಣಿ ಕಡ್ಡಾಯ; ನಿಯಮ ಉಲ್ಲಂಘಿಸಿದರೆ ಮಾನ್ಯತೆ ರದ್ದು

by Shwetha
July 21, 2026
0

ರಾಜ್ಯದಲ್ಲಿ ಕಾರ್ಯನಿರ್ವಹಿಸುತ್ತಿರುವ ಎಲ್ಲಾ ಹೋಂಸ್ಟೇಗಳು ಪ್ರವಾಸೋದ್ಯಮ ಇಲಾಖೆಯಲ್ಲಿ ಕಡ್ಡಾಯವಾಗಿ ನೋಂದಣಿ ಮಾಡಿಸಿಕೊಳ್ಳಬೇಕು ಎಂದು ಸರ್ಕಾರ ಸೂಚಿಸಿದೆ. ಈವರೆಗೆ 500ಕ್ಕೂ ಹೆಚ್ಚು ಹೋಂಸ್ಟೇ ಮಾಲೀಕರು ನೋಂದಣಿಗಾಗಿ ಅರ್ಜಿ ಸಲ್ಲಿಸಿದ್ದು,...

ನಾನು ಮಾತನಾಡುತ್ತಿರುವುದು 28ರ ಹರೆಯದವರ ಬಗ್ಗೆ 56 ವರ್ಷದ ಯುವಕನ ಬಗ್ಗೆ ಅಲ್ಲ  ಸಂಸತ್ ಅಧಿವೇಶನಕ್ಕೂ ಮುನ್ನ ರಾಹುಲ್ ಗಾಂಧಿಗೆ ಪ್ರಧಾನಿ ಮೋದಿ ಪರೋಕ್ಷ ಟಾಂಗ್

ನಾನು ಮಾತನಾಡುತ್ತಿರುವುದು 28ರ ಹರೆಯದವರ ಬಗ್ಗೆ 56 ವರ್ಷದ ಯುವಕನ ಬಗ್ಗೆ ಅಲ್ಲ ಸಂಸತ್ ಅಧಿವೇಶನಕ್ಕೂ ಮುನ್ನ ರಾಹುಲ್ ಗಾಂಧಿಗೆ ಪ್ರಧಾನಿ ಮೋದಿ ಪರೋಕ್ಷ ಟಾಂಗ್

by Shwetha
July 21, 2026
0

ಭಾರತದ ಯುವ ವಿಜ್ಞಾನಿಗಳು ಮತ್ತು ಸ್ಟಾರ್ಟ್ ಅಪ್ ಸಾಧಕರನ್ನು ಕೊಂಡಾಡುವ ಭರದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅವರ ವಿರುದ್ಧ...

Load More

Saakshatv News

  • Home
  • About Us
  • Contact Us
  • Privacy Policy

© 2026 SaakshaTV - All Rights Reserved | Powered by Kalahamsa Infotech Pvt. ltd.

No Result
View All Result
  • Home
  • Newsbeat
  • State
    • Kalyana karnataka
    • Karavali Karnataka
    • Malenadu Karnataka
    • Mumbai Karnataka
    • Samagra karnataka
    • Hale Mysore
  • Politics
  • National
  • International
  • Crime
  • Cinema
  • Sports
  • Astrology
  • Health
  • More
    • Business
    • Asia Cup 2022
    • Marjala Manthana
    • Cooking
    • Culture
    • GALLERY
    • Saaksha Special
    • Life Style
    • TECHNOLOGY
    • Travel
    • Viral News
    • Bigg Boss 8
    • IPL 2021
    • CPL 2020
    • IPL 2020

© 2026 SaakshaTV - All Rights Reserved | Powered by Kalahamsa Infotech Pvt. ltd.

  • →
  • Telegram