ಕಾಂಗ್ರೆಸ್ಗೆ ಭಗವಾಧ್ವಜ ಕಂಡರೆ ಆಗೋದಿಲ್ಲ : ಸಿ.ಟಿ ರವಿ Saaksha Tv
ಬೆಂಗಳೂರು: ರಾಷ್ಟ್ರಧ್ವಜ ಕೆಳಗಿಳಿಸಿ ಭಗವಾಧ್ವಜ ಹಾರಿಸಿದರೆ ತಪ್ಪು. ರಾಷ್ಟ್ರಧ್ವಜದ ಕೆಳಗಡೆ ಭಗವಾಧ್ವಜ ಹಾರಿಸಿದರೆ ತಪ್ಪಲ್ಲ ಎಂದು ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿಟಿ ರವಿ ಹೇಳಿದ್ದಾರೆ
ವಿಧಾನಸೌಧದಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ಅವರು, ರಾಷ್ಟ್ರಧ್ವಜಕ್ಕೆ ಏನು ಗೌರವ ಕೊಡಬೇಕು ಅದಕ್ಕೆ ಗೌರವ ಕೊಟ್ಟಿದ್ದೇವೆ. ನಮಗೆ ಅಖಂಡ ಭಾರತದ ಅಶಯ ಅಷ್ಟೇ ಮುಖ್ಯ. ಅಖಂಡ ಭಾರತ ಆಗಬೇಕು ಅನ್ನೋದು ನಮ್ಮ ಅಶಯ. ಕಾಂಗ್ರೆಸ್ಗೆ ಭಗವಾಧ್ವಜ ಕಂಡರೆ ಆಗೋದಿಲ್ಲ ಅದಕ್ಕೆ ಅವರಿಗೆ ಉರಿ. ಹಿಜಾಬ್ ವಿಚಾರವನ್ನ ವಿಷಯಾಂತರ ಮಾಡಲು ಕಾಂಗ್ರೆಸ್ ಹೊರಟಿದೆ ಎಂದರು.
ಸ್ವತಂತ್ರ ಬಂದಮೇಲೆ ತ್ರಿವರ್ಣ ಧ್ವಜ ಬಂದಿದೆ, ನಾವು ಅದನ್ನ ಒಪ್ಪಿಕೊಂಡಿದ್ದೇವೆ. ರಾಷ್ಟ್ರಧ್ವಜ ತೆಗೆದು ಕೇಸರಿ ಹಾರಿಸುತ್ತೇವೆ ಅಂತ ಹೇಳಿಲ್ಲ. ರಾಷ್ಟ್ರಧ್ವಜಕ್ಕೆ ನಾವು ಗೌರವ ಕೊಟ್ಟೇ ಕೊಡುತ್ತೇವೆ. ರಾಣಿ ಚೆನ್ನಮ್ಮ ಮೈದಾನದಲ್ಲಿ ಅವರು ಏನು ಮಾಡಿದರು? 11 ಜನರನ್ನ ಗುಂಡು ಹಾರಿಸಿ ಕೊಂದರು ಈಗ ರಾಷ್ಟ್ರಧ್ವಜದ ಬಗ್ಗೆ ಎಲ್ಲಿಲ್ಲದ ಪ್ರೀತಿ ಹುಟ್ಟಿದೆ ಎಂದು ಹರಿಹಾಯ್ದರು.
ಲಾಲ್ ಚೌಕದ ಮೇಲೆ ಪಾಕ್ ಧ್ವಜ ಹಾರಿಸಿ ಎಂದು ಉಗ್ರಗಾಮಿಗಳು ಒತ್ತಡ ಹಾಕಿದ್ದರು. ಅಲ್ಲಿ ನಾವು ರಾಷ್ಟ್ರಧ್ವಜ ಹಾರಿಸಿ ಬಂದವರು. ರಾಣಿ ಚೆನ್ನಮ್ಮ ಮೈದಾನದಲ್ಲಿ ಗುಂಡು ಹಾರಿಸಿದ್ದು ಹೇಗೆ? ಜೆಎಂಎಂ ಪ್ರಾಡಕ್ಟ್ ಗಳು ಇವರ ಜೊತೆ ಸೇರಿದ್ದಾರೆ. ಕನ್ಹಯ್ಯ ಸೇರಿ ಹಲವರು ಬಂದಿದ್ದಾರೆ. ಹಿಜಾಬ್ ಮರೆಮಾಚೋಕೆ ವಿಷಯಾಂತರ ಮಾಡುತ್ತಿದ್ದಾರೆ ಎಂದು ಹೇಳಿದ್ದಾರೆ.








