ಪರೀಕ್ಷೆ ಬೇಕು ಅಂದ್ರೆ ಹಿಜಾಬ್ ತೆಗೆದು ಬರೆಯಲಿ: ಬಿ.ಸಿ.ನಾಗೇಶ್
ಬೆಂಗಳೂರು : ಶಿವಮೊಗ್ಗದಲ್ಲಿ ಶಾಲಾ-ಕಾಲೇಜು ಆರಂಭಿಸುವುದರ ಬಗ್ಗೆ ಜಿಲ್ಲಾಧಿಕಾರಿಗಳು ನಿರ್ಧಾರ ಮಾಡ್ತಾರೆ ಎಂದು ಶಿಕ್ಷಣ ಸಚಿವ ಬಿ.ಸಿ.ನಾಗೇಶ್ ತಿಳಿಸಿದ್ದಾರೆ.
ಬೆಂಗಳೂರಿನಲ್ಲಿ ಮಾತನಾಡಿದ ಬಿ.ಸಿ.ನಾಗೇಶ್, ಇವತ್ತು ಗಂಭೀರ ಪರಿಸ್ಥಿತಿ ಇದ್ದ ಕಾರಣ ಇಂದು ಒಂದು ದಿನ ರಜೆ ನೀಡಲಾಗಿದೆ.
ಕರ್ಫ್ಯೂ ಇದ್ದ ಕಾರಣದಿಂದ ಶಾಲೆಗಳು ಇಂದು ಪ್ರಾರಂಭ ಆಗಿಲ್ಲ. ನಾಳೆಯಿಂದ ಯಥಾಸ್ಥಿತಿ ಕಾಯ್ದುಕೊಂಡು ಶಾಲೆ ತೆರೆಯುತ್ತೇವೆ ಎಂದು ತಿಳಿಸಿದ್ದಾರೆ.
ಕಾಂಗ್ರೆಸ್ ಇಷ್ಟು ದಿನ ನೀಡಿರುವ ಹೇಳಿಕೆಗಳನ್ನು ಜನ ಗಮನಿಸ್ತಾ ಇದಾರೆ. ವಿನಾ ಕಾರಣ ರಾಷ್ಟ್ರಧ್ವಜದ ವಿವಾದ ಮಾತಾಡ್ತಿದಾರೆ.

ಬೇರೆ ಯಾರಾದ್ರೂ ರಾಷ್ಟ್ರೀಯ ವಾದಿಗಳು ದೇಶಭಕ್ತಿ ಪಾಠ ಹೇಳಿಕೊಟ್ರೆ ಕಲಿಯಬಹುದು. ಆದ್ರೆ ಕಾಂಗ್ರೆಸ್ ನವರಿಂದ ನಾವು ರಾಷ್ಟ್ರ ಭಕ್ತಿ ಕಲಿಯಬೇಕಿಲ್ಲ.
ಸಿದ್ದರಾಮಯ್ಯ ಕಾಲದ ಐದು ವರ್ಷದ ಲಿಸ್ಟ್ ತೆಗೆದು ನೋಡಿ. ಇಂತಹಾ ಕೃತ್ಯ ಮಾಡಿದವರ ಮೇಲಿನ ಕೇಸ್ ಗಳನ್ನು ವಾಪಸ್ ಪಡೆದಿದ್ದಾರೆ.
ಹಾಗೆ ಕೇಸ್ ಗಳನ್ನು ವಾಪಸ್ ಪಡೆಯದೇ ಇದ್ದರೆ ಅವರಿಗೂ ಭಯ ಇರ್ತಾ ಇತ್ತು ಎಂದು ಕಾಂಗ್ರೆಸ್ ವಿರುದ್ಧ ಕಿಡಿಕಾರಿದರು.
ಇದೇ ವೇಳೆ ಹಿಜಾಬ್ ಬಗ್ಗೆ ಮಾತನಾಡಿದ ಬಿ.ಸಿ.ನಾಗೇಶ್, ಹಿಜಾಬ್ ವಿಚಾರದಲ್ಲಿ ಹೈಕೋರ್ಟ್ ಆದೇಶ ಇದೆ.
ಅದನ್ನು ಕೆಲವು ಹೆಣ್ಣುಮಕ್ಕಳು ವಿರೊಧಿಸಿದ್ರೆ, ಅವರ ಪರ ಕಾಂಗ್ರೆಸ್ ಮಾತಾಡ್ತಾರೆ. ಇದಕ್ಕೆ ಏನು ಹೇಳಬೇಕು.? ಪರೀಕ್ಷೆ ಬೇಕು ಅಂದ್ರೆ ಹಿಜಾಬ್ ತೆಗೆದು ಬರೆಯಲಿ ಎಂದು ಹೇಳಿದ್ದಾರೆ.
education-minister-b-c-nagesh-reaction-on-hijab-controversy Saaksha_tv








