IND vs SL | ವನಿಂದು ಹಸರಂಗಗೆ ಕೊರೊನಾ.. ಸರಣಿಯಿಂದ ಔಟ್
ಟೀಂ ಇಂಡಿಯಾ ಜೊತೆಗಿನ ಟಿ20 ಸರಣಿ ಆರಂಭಕ್ಕೂ ಮುನ್ನ ಶ್ರೀಲಂಕಾ ತಂಡಕ್ಕೆ ತೀವ್ರ ಹಿನ್ನಡೆಯಾಗಿದೆ. ಸ್ಟಾರ್ ಆಲ್ ರೌಂಡರ್ ವನಿಂದು ಹಸರಂಗ ತಂಡದಿಂದ ಹೊರಗುಳಿದಿದ್ದಾರೆ. ಭಾರತದೊಂದಿಗಿನ ಸರಣಿಯ ಹಿನ್ನೆಲೆಯಲ್ಲಿ ನಡೆಸಿದ ಆರ್‌ಟಿ-ಪಿಸಿಆರ್ ಪರೀಕ್ಷೆಯಲ್ಲಿ ಹಸರಂಗ ಮತ್ತೊಮ್ಮೆ ಕೋವಿಡ್ ಪಾಸಿಟಿವ್ ಬಂದಿದೆ.
ಈ ಹಿನ್ನೆಲೆಯಲ್ಲಿ ಅವರು ಟಿ 20 ಸರಣಿಯನ್ನು ಮಿಸ್ ಮಾಡಿಕೊಳ್ಳಲಿದ್ದಾರೆ. ಟೆಸ್ಟ್ ಸರಣಿಗೂ ಹಸರಂಗ ಲಭ್ಯವಾಗದಿರಬಹುದು ಎಂಬ ಮಾಹಿತಿ ಇದೆ. ಇದು ಲಂಕಾಗೆ ಭಾರೀ ಆಘಾತ ತಂದಿದೆ. ಇತ್ತೀಚೆಗೆ ಆಸ್ಟ್ರೇಲಿಯಾ ಪ್ರವಾಸದ ವೇಳೆ ಹಸರಂಗ ಕೊರೊನಾಗೆ ತುತ್ತಾಗಿತ್ತು. ಇವರೊಂದಿಗೆ ಕುಶಾಲ್ ಮೆಂಡಿಸ್ ಮತ್ತು ಬಿನೂರಾ ಫೆರ್ನಾಂಡೊ ಅವರಿಗೂ ಸೋಂಕು ತಗುಲಿದೆ.
ಶ್ರೀಲಂಕಾ ವಿರುದ್ಧದ ಟಿ20 ಸರಣಿಯು ಫೆಬ್ರವರಿ 24 ರಂದು ಪ್ರಾರಂಭವಾಗಲಿದೆ. ಮೊದಲ ಟಿ20 ಲಕ್ನೋದಲ್ಲಿ ನಡೆಯಲಿದ್ದು, ಫೆಬ್ರವರಿ 26 ಮತ್ತು 27 ರಂದು ಧರ್ಮಶಾಲಾದಲ್ಲಿ ಎರಡು ಮತ್ತು ಮೂರನೇ ಟಿ20 ಪಂದ್ಯಗಳು ನಡೆಯಲಿವೆ. ಮೊದಲ ಟೆಸ್ಟ್ ಮಾರ್ಚ್ 4-8 ರಂದು ಮೊಹಾಲಿಯಲ್ಲಿ ಮತ್ತು ಎರಡನೇ ಟೆಸ್ಟ್ (ಹಗಲು ಮತ್ತು ರಾತ್ರಿ) ಮಾರ್ಚ್ 12-16 ರಂದು ಬೆಂಗಳೂರಿನಲ್ಲಿ ನಡೆಯಲಿದೆ.
wanindu-hasaranga-ruled-out-t20i-series









