ಷೇರು ಮಾರುಕಟ್ಟೆ ಕುಸಿತ | ಸೆನ್ಸೆಕ್ಸ್ 2000 ಕ್ಕೂಅದಿಕ ಇಳಿಕೆ – Saaksha Tv
ಮುಂಬೈ: ಗುರುವಾರ ಷೇರು ಮಾರುಕಟ್ಟೆಯಲ್ಲಿ ಭಾರಿ ಕುಸಿತ ಕಂಡಿದ್ದು, ಏಕಕಾಲಕ್ಕೆ ಸೆನ್ಸೆಕ್ಸ್ 2000ಕ್ಕೂ ಅಧಿಕ ಅಂಕ ಕುಸಿತ ಕಂಡರೆ, ನಿಫ್ಟಿ 581 ಅಂಕ ಕುಸಿದಿದೆ.
ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಇಂದು ಬೆಳಿಗ್ಗೆ ಉಕ್ರೇನ್ ವಿರುದ್ಧ ಯುದ್ಧ ಘೋಷಿಸಿದ್ದಾರೆ. ಈ ಹಿನ್ನಲೆಯಲ್ಲಿ ಷೇರು ಮಾರುಕಟ್ಟೆ ಕುಸಿತ ಕಂಡಿದೆ. ಎನ್‌ಎಸ್‌ಇ ನಿಫ್ಟಿ ಕೂಡ 500ಕ್ಕೂ ಹೆಚ್ಚು ಅಂಕಗಳ ನಷ್ಟದಲ್ಲಿದೆ. ಮಾರುಕಟ್ಟೆ ಪ್ರಾರಂಭವಾದ ತಕ್ಷಣ, ಸೆನ್ಸೆಕ್ಸ್ 13 ನೂರಕ್ಕೂ ಹೆಚ್ಚು ಅಂಕಗಳ ಕುಸಿತದಲ್ಲಿ ಉಳಿಯಿತು. ಬೆಳಗ್ಗೆ ಮಾರುಕಟ್ಟೆ ಆರಂಭವಾದ ನಂತರ ಸೆನ್ಸೆಕ್ಸ್ 55,750 ಅಂಕಗಳ ಆಸುಪಾಸಿನಲ್ಲಿ ವಹಿವಾಟು ನಡೆಸುತ್ತಿದೆ. ನಿಫ್ಟಿ 350 ಪಾಯಿಂಟ್‌ಗಳಿಗಿಂತ ಹೆಚ್ಚು ಕುಸಿದು 16,700 ಕ್ಕಿಂತ ಕಡಿಮೆಯಾಗಿದೆ.
ಬುಧವಾರದಂದು, ದೇಶೀಯ ಷೇರು ಮಾರುಕಟ್ಟೆಯು ಉತ್ತಮ ಆರಂಭವನ್ನು ಮಾಡಿತು, ಆದರೆ ಸಂಜೆಯ ಅಂತ್ಯದ ವೇಳೆಗೆ, ಮಾರುಕಟ್ಟೆ ಕುಸಿತಯುತ್ತಾ ಹೋಯಿತು. ದಿನದ ವಹಿವಾಟಿನ ಅಂತ್ಯದ ನಂತರ, ಸೆನ್ಸೆಕ್ಸ್ ಮತ್ತು ನಿಫ್ಟಿ ಎರಡೂ ನಷ್ಟದಲ್ಲಿವೆ. ವಹಿವಾಟು ಅಂತ್ಯಗೊಂಡಾಗ, ಸೆನ್ಸೆಕ್ಸ್ 68.62 ಪಾಯಿಂಟ್ (ಶೇ. 0.12) ಇಳಿಕೆ ಕಂಡು 57,232.06 ಅಂಕಗಳಿಗೆ ತಲುಪಿತ್ತು. ಎನ್‌ಎಸ್‌ಇ ನಿಫ್ಟಿ ಕೂಡ 28.95 ಪಾಯಿಂಟ್‌ಗಳ (ಶೇ. 0.17) ನಷ್ಟದೊಂದಿಗೆ 17,063.25 ನಲ್ಲಿದೆ.
ರಷ್ಯಾದ ಮಿಲಿಟರಿ ಕಾರ್ಯಾಚರಣೆ ಘೋಷಣೆಯಿಂದ ಪೆಟ್ರೋಲ್ ಕಚ್ಚಾತೈಲ ದರ 100 ಡಾಲರ್ ತಲುಪಿದೆ. 2014 ರ ನಂತರ ಇದೆ ಮೊದಲಬಾರಿಗೆ ಗರಿಷ್ಠ ಏರಿಕೆಯಾಗಿದೆ.









