ADVERTISEMENT
Tuesday, June 30, 2026
  • Home
  • About Us
  • Contact Us
  • Privacy Policy
Cini Bazaar
Sports
Advertisement
ADVERTISEMENT
  • Home
  • Newsbeat
  • State
    • Samagra karnataka
    • Malenadu Karnataka
    • Kalyana karnataka
    • Coastal Karnataka
    • Hale Mysore
    • Mumbai Karnataka
  • Politics
  • National
  • International
  • Crime
  • Cinema
  • Sports
  • Astro
  • Health
  • More
    • Life Style
    • TECHNOLOGY
    • Saaksha Special
    • Marjala Manthana
    • Cooking
    • Bigg Boss 8
    • Viral News
    • IPL 2020
    • IPL 2021
    • GALLERY
No Result
View All Result
Home Saaksha Special Life Style

dabur chyawanprash : ಡಾಬರ್ ಚವನ್ಪ್ರಾಶ್ಗೆ ಸೂಪರ್ಸ್ಟಾರ್ ಅಕ್ಕಿನೇನಿ ನಾಗಾರ್ಜುನ ನೂತನ ಬ್ರ್ಯಾಂಡ್ ಅಂಬಾಸಿಡರ್

Namratha Rao by Namratha Rao
February 24, 2022
in Life Style, Newsbeat, ಜೀವನಶೈಲಿ
Share on FacebookShare on TwitterShare on WhatsappShare on Telegram

dabur chyawanprash : ಡಾಬರ್ ಚವನ್ಪ್ರಾಶ್ಗೆ ಸೂಪರ್ಸ್ಟಾರ್ ಅಕ್ಕಿನೇನಿ ನಾಗಾರ್ಜುನ ನೂತನ ಬ್ರ್ಯಾಂಡ್ ಅಂಬಾಸಿಡರ್

ದಕ್ಷಿಣ ಭಾರತೀಯ ಮಾರುಕಟ್ಟೆಯ ಗ್ರಾಹಕರನ್ನು ಸೆಳೆಯಲು ಈ ಸಹಭಾಗಿತ್ವ

Related posts

ಜೇಬಿಗೆ 50 ಕೋಟಿ ಕ್ಷೇತ್ರಕ್ಕೆ 100 ಕೋಟಿ: ಪರಿಷತ್ ಚುನಾವಣೆಯಲ್ಲಿ ಕಾಂಗ್ರೆಸ್ ಆಮಿಷ – ಮೈತ್ರಿ ಮುರಿಯಲು ಕೈ ಪಡೆಯಿಂದ ನೂರಾರು ಕೋಟಿ ಆಫರ್: ಅಡ್ಡಮತದಾನದ ಅಸಲಿ ಗುಟ್ಟು ರಟ್ಟು ಮಾಡಿದ ಕುಮಾರಸ್ವಾಮಿ

ಬಿಡದಿ ವಿಚಾರದಲ್ಲಿ ಚರ್ಚೆಗೆ ಈಗಲೂ ಸಿದ್ಧ: ಹೆಚ್.ಡಿ. ಕುಮಾರಸ್ವಾಮಿ

June 30, 2026
ಮತದಾರರೇ ಎಚ್ಚರ: ಈ ಕೆಲಸ ಮಾಡದಿದ್ದರೆ ಮತದಾನದ ಹಕ್ಕಿಗೆ ಕುತ್ತು ಬರಬಹುದು -ಇಂದೇ ದಾಖಲೆಗಳನ್ನು ರೆಡಿ ಇಟ್ಟುಕೊಳ್ಳಿ

ಮತದಾರರೇ ಎಚ್ಚರ: ಈ ಕೆಲಸ ಮಾಡದಿದ್ದರೆ ಮತದಾನದ ಹಕ್ಕಿಗೆ ಕುತ್ತು ಬರಬಹುದು -ಇಂದೇ ದಾಖಲೆಗಳನ್ನು ರೆಡಿ ಇಟ್ಟುಕೊಳ್ಳಿ

June 30, 2026

ಬೆಂಗಳೂರು, ಭಾರತದ ಮುಂಚೂಣಿಯಲ್ಲಿರುವ ವಿಜ್ಞಾನ ಆಧಾರಿತ ಆಯುರ್ವೇದ ಪರಿಣತ ಸಂಸ್ಥೆಯಾಗಿರುವ ಡಾಬರ್ ಇಂಡಿಯಾ ಲಿಮಿಟೆಡ್ ಇಂದು ತನ್ನ ಡಾಬರ್ ಚವನ್ಪ್ರಾಶ್ಗೆ ದಕ್ಷಿಣ ಭಾರತದ ಮಾರುಕಟ್ಟೆಯಲ್ಲಿ ನೂತನ ಬ್ರ್ಯಾಂಡ್ ಅಂಬಾಸಿಡರ್ ಆಗಿ ದಕ್ಷಿಣ ಭಾರತದ ಸೂಪರ್ ಸ್ಟಾರ್ ಮತ್ತು ಸಿನಿಮಾ ಐಕಾನ್ ನಾಗಾರ್ಜುನ ಅವರನ್ನು ನೇಮಕ ಮಾಡಿದೆ.

ದಕ್ಷಿಣ ಭಾರತೀಯ ಮಾರುಕಟ್ಟೆಗಳಿಗೆಂದೇ ಸಿದ್ಧಪಡಿಸಲಾಗಿರುವ ಹೊಸ ಜಾಹೀರಾತು ಅಭಿಯಾನದಲ್ಲಿ ನಟ ಅಕ್ಕಿನೇನಿ ನಾಗಾರ್ಜುನ ಅವರು ನಟಿಸಿದ್ದು, ಸದ್ಯದಲ್ಲಿಯೇ ಈ ಅಭಿಯಾನ ಚಿತ್ರವು ಆಂಧ್ರಪ್ರದೇಶ, ತೆಲಂಗಾಣ, ತಮಿಳುನಾಡು, ಕರ್ನಾಟಕ ಮತ್ತು ಕೇರಳದ ವಿವಿಧ ಮಾಧ್ಯಮಗಳಲ್ಲಿ ಪ್ರಸಾರವಾಗಲಿದೆ. ಈ ಸಹಯೋಗದೊಂದಿಗೆ ಡಾಬರ್ ದಕ್ಷಿಣ ಭಾರತದ ಪ್ರತಿಯೊಂದು ಮನೆ ಮನಗಳನ್ನು ತಲುಪುವ ಉದ್ದೇಶವನ್ನು ಹೊಂದಿದೆ. ಅಲ್ಲದೇ, ಇದರ ಮೂಲಕ ಬಲವಾದ ರೋಗನಿರೋಧಕ ಶಕ್ತಿಯ ಪ್ರಾಮುಖ್ಯತೆ ಮತ್ತು ರೋಗಗಳ ವಿರುದ್ಧ ಹೋರಾಡಲು ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುವಲ್ಲಿ ಡಾಬರ್ ಚವನ್ಪ್ರಾಶ್ ನಿರ್ವಹಿಸುವ ಪ್ರಮುಖ ಪಾತ್ರದ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಲಿದೆ.

ಡಾಬರ್ ಇಂಡಿಯಾ ಲಿಮಿಟೆಡ್ನ ದಕ್ಷಿಣ ವಲಯದ ಪ್ರಾದೇಶಿಕ ಬಿಸಿನೆಸ್ ಮುಖ್ಯಸ್ಥ ಜೆಪಿ ವಿಕ್ಟೋರಿಯಾ ಅವರು ಈ ಸಹಭಾಗಿತ್ವದ ಬಗ್ಗೆ ಮಾತನಾಡಿ, “ದಕ್ಷಿಣ ಭಾರತೀಯ ಮಾರುಕಟ್ಟೆಗಳಿಗೆ ಡಾಬರ್ ಚವನ್ಪ್ರಾಶ್ಗೆ ನೂತನ ಬ್ರ್ಯಾಂಡ್ ಅಂಬಾಸಿಡರ್ ಅನ್ನಾಗಿ ಸೂಪರ್ಸ್ಟಾರ್ ನಾಗಾರ್ಜುನ ಅವರನ್ನು ಹೊಂದಲು ನಮಗೆ ಅತೀವ ಸಂತಸವೆನಿಸುತ್ತಿದೆ. ಜನೋಪಕಾರಿಯಾಗಿರುವ ಮತ್ತು ಎಚ್ಐವಿ/ಏಡ್ಸ್ ಜಾಗೃತಿ ಅಭಿಯಾನಗಳ ರಾಯಭಾರಿಯಾಗಿರುವ ನಾಗಾರ್ಜುನ ಅವರು ಅನೇಕ ಸಮುದಾಯ ಅಭಿವೃದ್ಧಿ ಉಪಕ್ರಮಗಳಿಗೆ ಸಾಕಷ್ಟು ಪ್ರಚಾರ ನೀಡುವ ತಾರೆಯಾಗಿದ್ದಾರೆ. ಅದೇ ರೀತಿ, ಅಶ್ವಗಂಧ, ಗಿಲೋಯ್ ಮತ್ತು ಆಮ್ಲ ಮುಂತಾದ 40 ಕ್ಕೂ ಹೆಚ್ಚು ಗಿಡಮೂಲಿಕೆಗಳ ಶಕ್ತಿಯನ್ನು ಹೊಂದಿರುವ ಡಾಬರ್ ಚವನ್ಪ್ರಾಶ್ ಯಾವಾಗಲೂ ಅನಾರೋಗ್ಯದ ವಿರುದ್ಧ ಹೋರಾಟ ನಡೆಸಲು ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಲಿದೆ. ಡಾಬರ್ ಚವನ್ಪ್ರಾಶ್ ಯಾವಾಗಲೂ ದೇಶದ ಆರೋಗ್ಯವನ್ನು ನಿರ್ಮಾಣ ಮಾಡುವ ಕಾರಣವನ್ನು ಹೊಂದಿರುತ್ತದೆ ಮತ್ತು ಈ ವಲಯದಲ್ಲಿ ಚಾಂಪಿಯನ್ ಆಗಿದೆ. ಈ ದಿಸೆಯಲ್ಲಿ ಸೂಪರ್ಸ್ಟಾರ್ ನಾಗಾರ್ಜುನ ಅವರನ್ನು ಡಾಬರ್ ಕುಟುಂಬಕ್ಕೆ ಸ್ವಾಗತಿಸಲು ನಾವು ಸಂತೋಷಪಡುತ್ತೇವೆ ಎಂದು ತಿಳಿಸಿದರು.

ಈ ಸಹಯೋಗದ ಬಗ್ಗೆ ಮಾತನಾಡಿದ ನಾಗಾರ್ಜುನ ಅವರು, “ಡಾಬರ್ ಕುಟುಂಬದೊಂದಿಗೆ ಸಹಯೋಗ ಹೊಂದುತ್ತಿರುವುದಕ್ಕೆ ನನಗೆ ಸಂತಸವೆನಿಸುತ್ತಿದೆ ಮತ್ತು ಜನರು ತಮ್ಮ ರೋಗನಿರೋಧಕ ಶಕ್ತಿಯನ್ನು ವೃದ್ಧಿಸಿಕೊಳ್ಳಲು ಡಾಬರ್ ಚವನ್ಪ್ರಾಶ್ ಅನ್ನು ಬಳಸುವಂತೆ ಮಾಡಲು ಪ್ರೇರಣೆ ದೊರೆಯುತ್ತದೆ ಎಂಬ ವಿಶ್ವಾಸ ನನಗಿದೆ. ಹಿಂದೆಂದಿಗಿಂತಲೂ ರೋಗನಿರೋಧಕ ಶಕ್ತಿಯನ್ನು ವೃದ್ಧಿಸಿಕೊಳ್ಳುವುದಕ್ಕೆ ಹೆಚ್ಚು ಆದ್ಯತೆ ನೀಡುವ ಪರಿಸ್ಥಿತಿಯಲ್ಲಿ ನಾವಿಂದು ಬದುಕುತ್ತಿದ್ದೇವೆ. ಬಲಯುತವಾದ ರೋಗನಿರೋಧಕ ಶಕ್ತಿಯ ಅಗತ್ಯತೆ ಇಂದಿದೆ. ಡಾಬರ್ ಅಧಿಕೃತ ಆಯುರ್ವೇದದ ವಿಜ್ಞಾನದ ಮೂಲಕ ದೇಶದ ಆರೋಗ್ಯ ಮತ್ತು ಫಿಟ್ನೆಸ್ ಅನ್ನು ಪಟ್ಟುಬಿಡದೇ ಪೋಷಿಸುತ್ತಾ ಬರುತ್ತಿದೆ. ಒಬ್ಬ ಗ್ರಾಹಕನಾಗಿ ನಾನು ಡಾಬರ್ನೊಂದಿಗೆ ಹಲವಾರು ವರ್ಷಗಳಿಂದ ಸಂಬಂಧವನ್ನು ಹೊಂದಿದ್ದೇನೆ. ಡಾಬರ್ ಮತ್ತು ನಾನು ಒಟ್ಟಾಗಿ ದಕ್ಷಿಣ ಭಾರತದ ಪ್ರತಿ ಮನೆಗೆ ಡಾಬರ್ ಚವನ್ಪ್ರಾಶ್ ಅನ್ನು ಕೊಂಡೊಯ್ಯುತ್ತೇವೆ ಮತ್ತು ದೇಶದ ಪ್ರತಿರಕ್ಷೆಯನ್ನು ನಿರ್ಮಾಣ ಮಾಡುವ ಕೆಲಸ ಮಾಡುತ್ತೇವೆ ಎಂದು ನಾನು ನಿಜವಾಗಿಯೂ ನಂಬುತ್ತೇನೆ’ ಎಂದು ಹೇಳಿದರು.

ಈ ಅಭಿಯಾನವು ದಕ್ಷಿಣ ಭಾರತದ ಸಮರ ಕಲೆಯ ಸಿಲಂಬಂ ಅನ್ನು ರೂಪಕವಾಗಿ ಬಳಸುತ್ತದೆ. ಇದು ಅನಾರೋಗ್ಯದ ವಿರುದ್ಧ ಹೋರಾಟಲು ಪ್ರತಿರಕ್ಷೆಯನ್ನು ನಿರ್ಮಾಣ ಮಾಡುವ ಅಗತ್ಯತೆಯನ್ನು ಒತ್ತಿ ಹೇಳುತ್ತದೆ.

ಈ ಬಗ್ಗೆ ಮಾತನಾಡಿದ ಮ್ಯಾಕನ್ ವಲ್ರ್ಡ್ ಗ್ರೂಪ್ ಕ್ರಿಯೇಟಿವ್ ಹೆಡ್-ದಕ್ಷಿಣ ಸಂಬಿತ್ ಮೊಹಾಂತಿ ಅವರು, “ಸೃಜನಾತ್ಮಕವಾದ ಕಥೆ ಹೇಳುವಿಕೆಯು ಉತ್ಪನ್ನದ ಪ್ರತಿಪಾದನೆಯನ್ನು ಜನರು ಗಮನಕ್ಕೆ ತೆಗೆದುಕೊಳ್ಳಲು ಹೆಚ್ಚು ತೊಡಗಿಸಿಕೊಳ್ಳುವಂತೆ ಮಾಡುತ್ತದೆ. ಈ ಹಿನ್ನೆಲೆಯಲ್ಲಿ ದಕ್ಷಿಣ ಭಾರತದ ಮಾರುಕಟ್ಟೆಗಳಿಗೆ ಡಾಬರ್ ಚವನ್ಪ್ರಾಶ್ ಅನ್ನು ಪರಿಚಯಿಸುವ ಕಾರ್ಯವನ್ನು ನಾವು ವಹಿಸಿಕೊಂಡಾಗ ಪ್ರಾಚೀನ ದಕ್ಷಿಣದ ಸಮರ ಕಲೆಯಾದ `ಸಿಲಂಬಂ’ ಅಥವಾ ಕೋಲು ಕಾದಾಟವನ್ನು ಥೀಮ್ ಆಗಿ ಬಳಸುವ ಕಲ್ಪನೆಯನ್ನು ನಾವು ಅಳವಡಿಸಿಕೊಂಡಿದ್ದೇವೆ. ಇದರಲ್ಲಿ ಆಶ್ಚರ್ಯವೇನಿಲ್ಲ. ನಮ್ಮ ಚಿತ್ರವು ರೋಮಾಂಚನಾಕಾರಿ, ಆಕ್ಷನ್ ಹೊಂದಿದ ಕಥೆಯಾಗಿದ್ದು, ಡಾಬರ್ ಚವನ್ಪ್ರಾಶ್ ನಿಮ್ಮ ಶಕ್ತಿ ಮತ್ತು ರೋಗನಿರೋಧಕ ಶಕ್ತಿಯನ್ನು ರೋಗಗಳ ವಿರುದ್ಧ ಹೋರಾಡಲು ಹೇಗೆ ನಿರ್ಮಾಣ ಮಾಡುತ್ತದೆ ಎಂಬುದನ್ನು ಎತ್ತಿ ತೋರಿಸುತ್ತದೆ’’ ಎಂದು ತಿಳಿಸಿದರು.

ಅಕ್ಕಿನೇನಿ ನಾಗಾರ್ಜುನ ಅವರು ದಕ್ಷಿಣ ಭಾರತದ ಸಿನಿಮಾ ಕ್ಷೇತ್ರದ ಅತ್ಯಂತ ಪ್ರತಿಭಾನ್ವಿತ ನಟರಾಗಿದ್ದಾರೆ. ಕಳೆದ ಮೂರು ದಶಕಗಳಿಗೂ ಅಧಿಕ ಸಮಯದಿಂದ ಅವರು ಅಸಂಖ್ಯಾತ ಅಭಿಮಾನಿಗಳನ್ನು ಹೊಂದಿದ್ದಾರೆ. ಬೆಳ್ಳಿತೆರೆಯಲ್ಲಿ ಅನೇಕ ಅವಿಸ್ಮರಣೀಯ ಸಾಧನೆ ಮಾಡಿರುವ ಅವರು ತಮ್ಮ ಸಮಾಜ ಸೇವೆಯನ್ನು ನಡೆಸುವ ಮೂಲಕ ಸಹ ನಟರು, ಯುವ ನಟರು ಮತ್ತು ಪ್ರೇಕ್ಷಕರಿಗೆ ಪ್ರೇರಕ ಶಕ್ತಿಯಾಗಿದ್ದಾರೆ.

“ನಾವು ಅತ್ಯುತ್ಕøಷ್ಠವಾದ ಅಭಿಯಾನದಲ್ಲಿ ಕೆಲಸ ಮಾಡಿದ್ದೇವೆ. ಡಾಬರ್ ಚವನ್ಪ್ರಾಶ್ನ ಮುಖವಾಗಿ ನಾಗಾರ್ಜುನ ಜೊತೆಗೆ ಈ ಅಭಿಯಾನವು ದಕ್ಷಿಣ ಭಾರತದ ಮಾರುಕಟ್ಟೆಗಳಲ್ಲಿನ ಗ್ರಾಹಕರೊಂದಿಗೆ ಉತ್ತಮ ವ್ಯಾಪ್ತಿಯನ್ನು ಮತ್ತು ಸಂಪರ್ಕ ಹೊಂದಿದೆ ಎಂದು ನಿರೀಕ್ಷಿಸಲಾಗಿದೆ. ಈ ಸಂವಹನದೊಂದಿಗೆ ನಾವು `ಭಾರತದಲ್ಲಿ ತಯಾರಿಸಿದ, ಭಾರತೀಯರಿಂದ, ಭಾರತೀಯರಿಗಾಗಿ’ ಎಂಬ ಪರಿಕಲ್ಪನೆಯ ಮೂಲಕ ನಮ್ಮ ಬಲವಾದ ಹೆಮ್ಮೆಯ ಪ್ರಜ್ಞೆಯನ್ನು ಸ್ಥಾಪಿಸಿದ್ದೇವೆ. ಇದಲ್ಲದೇ ಭಾರತದಲ್ಲಿ ಪ್ರತಿ ಮನೆಯ ರೋಗನಿರೋಧಕ ಶಕ್ತಿ ಮತ್ತು ಯೋಗಕ್ಷೇಮಕ್ಕಾಗಿ ಕಾಳಜಿ ವಹಿಸುತ್ತಿದ್ದೇವೆ’’ ಎಂದು ವಿಕ್ಟೋರಿಯಾ ತಿಳಿಸಿದರು.

Tags: #saakshatvdabur chyawanprashHealthnagarjunTollywood
ShareTweetSendShare
Join us on:

Related Posts

ಜೇಬಿಗೆ 50 ಕೋಟಿ ಕ್ಷೇತ್ರಕ್ಕೆ 100 ಕೋಟಿ: ಪರಿಷತ್ ಚುನಾವಣೆಯಲ್ಲಿ ಕಾಂಗ್ರೆಸ್ ಆಮಿಷ – ಮೈತ್ರಿ ಮುರಿಯಲು ಕೈ ಪಡೆಯಿಂದ ನೂರಾರು ಕೋಟಿ ಆಫರ್: ಅಡ್ಡಮತದಾನದ ಅಸಲಿ ಗುಟ್ಟು ರಟ್ಟು ಮಾಡಿದ ಕುಮಾರಸ್ವಾಮಿ

ಬಿಡದಿ ವಿಚಾರದಲ್ಲಿ ಚರ್ಚೆಗೆ ಈಗಲೂ ಸಿದ್ಧ: ಹೆಚ್.ಡಿ. ಕುಮಾರಸ್ವಾಮಿ

by Shwetha
June 30, 2026
0

ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ ಅವರು ಬಿಡದಿ ಟೌನ್‌ಶಿಪ್‌ ವಿವಾದಕ್ಕೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಡಿ. ಕೆ. ಶಿವಕುಮಾರ್ ಅವರಿಗೆ ಮತ್ತೊಮ್ಮೆ ಬಹಿರಂಗ ಚರ್ಚೆಯ ಆಹ್ವಾನ ನೀಡಿದ್ದಾರೆ. ಈ...

ಮತದಾರರೇ ಎಚ್ಚರ: ಈ ಕೆಲಸ ಮಾಡದಿದ್ದರೆ ಮತದಾನದ ಹಕ್ಕಿಗೆ ಕುತ್ತು ಬರಬಹುದು -ಇಂದೇ ದಾಖಲೆಗಳನ್ನು ರೆಡಿ ಇಟ್ಟುಕೊಳ್ಳಿ

ಮತದಾರರೇ ಎಚ್ಚರ: ಈ ಕೆಲಸ ಮಾಡದಿದ್ದರೆ ಮತದಾನದ ಹಕ್ಕಿಗೆ ಕುತ್ತು ಬರಬಹುದು -ಇಂದೇ ದಾಖಲೆಗಳನ್ನು ರೆಡಿ ಇಟ್ಟುಕೊಳ್ಳಿ

by Shwetha
June 30, 2026
0

ನಿಮ್ಮ ಮತ ನಿಮ್ಮ ಹಕ್ಕು. ಆದರೆ ಆ ಹಕ್ಕನ್ನು ಚಲಾಯಿಸಲು ನಿಮ್ಮ ಹೆಸರು ಮತದಾರರ ಪಟ್ಟಿಯಲ್ಲಿ ಇರುವುದು ಅನಿವಾರ್ಯ. ಭಾರತೀಯ ಚುನಾವಣಾ ಆಯೋಗದ ಆದೇಶದಂತೆ ಇಂದಿನಿಂದ ರಾಜ್ಯಾದ್ಯಂತ...

ರಾಜಕಾರಣವೇ ಬೇಡ ಎನಿಸುವಷ್ಟು ನೋವು ಕೊಟ್ಟರು:ಪತ್ನಿಯ ವಿರುದ್ಧವೂ ಸುಳ್ಳು ಆರೋಪ ಮಾಡಿ ಮಾನಸಿಕ ಹಿಂಸೆ ನೀಡಿದರು; ಸಿದ್ದರಾಮಯ್ಯ ಕಣ್ಣೀರಿನ ವಿದಾಯದ ನುಡಿ

ಮಾಸ್ ಲೀಡರ್ ಗೆ ಸ್ವಪಕ್ಷೀಯರಿಂದಲೇ ಸಂಚು ಸಿದ್ದರಾಮಯ್ಯ ಅವರನ್ನು ಮೂಲೆಗುಂಪು ಮಾಡುತ್ತಿರುವುದರ ಹಿಂದಿದೆ ಭಾರಿ ಲೆಕ್ಕಾಚಾರ :ಕಿಂಗ್ ಮೇಕರ್ ಪಟ್ಟಕ್ಕಾಗಿ ನಡೆಯುತ್ತಿದೆ ಒಳಗೊಳಗೆ ರಾಜಕೀಯ ಯುದ್ಧ

by Shwetha
June 30, 2026
0

ಕರ್ನಾಟಕ ರಾಜಕೀಯದ ಇತಿಹಾಸದಲ್ಲಿ ಅತಿ ದೊಡ್ಡ ಮಾಸ್ ಲೀಡರ್ ಎನಿಸಿಕೊಂಡಿರುವ ಸಿದ್ದರಾಮಯ್ಯ ಅವರ ರಾಜಕೀಯ ಭವಿಷ್ಯದ ಬಗ್ಗೆ ಈಗ ಕಾಂಗ್ರೆಸ್ ಒಳಾಂಗಣದಲ್ಲಿ ಭಾರಿ ಚರ್ಚೆಗಳು ನಡೆಯುತ್ತಿವೆ. ಮುಖ್ಯಮಂತ್ರಿ...

ಗೃಹಜ್ಯೋತಿಗೆ ಮರು ಅರ್ಜಿ ಸಲ್ಲಿಕೆ; ಹೊಸ ಅರ್ಜಿ ವಿತರಣೆ ಘೋಷಿಸಿದ ಸಿಎಂ ಡಿಕೆಶಿ

ಗೃಹಜ್ಯೋತಿಗೆ ಮರು ಅರ್ಜಿ ಸಲ್ಲಿಕೆ; ಹೊಸ ಅರ್ಜಿ ವಿತರಣೆ ಘೋಷಿಸಿದ ಸಿಎಂ ಡಿಕೆಶಿ

by Shwetha
June 30, 2026
0

ರಾಜ್ಯ ಸರ್ಕಾರದ ಮಹತ್ವಾಕಾಂಕ್ಷಿ ಗೃಹಜ್ಯೋತಿ ಉಚಿತ ವಿದ್ಯುತ್ ಯೋಜನೆಗೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಡಿ. ಕೆ. ಶಿವಕುಮಾರ್ ಮಹತ್ವದ ಘೋಷಣೆ ಮಾಡಿದ್ದಾರೆ. ಕರ್ನಾಟಕ ವಿದ್ಯುತ್ ಪ್ರಸರಣ ನಿಗಮ ನೌಕರರ...

ಶ್ರೀರಾಮ ನಮ್ಮ ಅಸ್ಮಿತೆ ಆರೋಪಿಗಳ ಪರ ವಾದಿಸಿದರೆ ವಕೀಲರಿಗೆ 5 ಲಕ್ಷ ದಂಡ ಅಯೋಧ್ಯಾ ಬಾರ್ ಕೌನ್ಸಿಲ್ ಖಡಕ್ ಆದೇಶ

ಶ್ರೀರಾಮ ನಮ್ಮ ಅಸ್ಮಿತೆ ಆರೋಪಿಗಳ ಪರ ವಾದಿಸಿದರೆ ವಕೀಲರಿಗೆ 5 ಲಕ್ಷ ದಂಡ ಅಯೋಧ್ಯಾ ಬಾರ್ ಕೌನ್ಸಿಲ್ ಖಡಕ್ ಆದೇಶ

by Shwetha
June 30, 2026
0

ಅಯೋಧ್ಯೆಯ ಭವ್ಯ ರಾಮಮಂದಿರಕ್ಕೆ ಭಕ್ತರು ನೀಡಿದ ದೇಣಿಗೆ ಹಣದಲ್ಲಿ ಅಕ್ರಮ ನಡೆದಿದೆ ಎನ್ನುವ ಆರೋಪ ಈಗ ದೇಶಾದ್ಯಂತ ಸಂಚಲನ ಮೂಡಿಸಿದೆ. ಈ ಹಗರಣದ ತನಿಖೆ ಚುರುಕುಗೊಂಡಿದ್ದು ಈಗಾಗಲೇ...

Load More

POPULAR NEWS

  • ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    0 shares
    Share 0 Tweet 0
  • ನಿಮ್ಮ ಶತ್ರುಗಳು ಮೆತ್ತಗಾಗಿ ಮೂಲೆ ಗುಂಪು ಸೇರಬೇಕೆಂದು ಕೊಂಡಿದ್ದೀರಾ ಹಾಗಾದ್ರೆ ಈ ಒಂದು ಚಿಕ್ಕ ತಂತ್ರಸಾರ ಮಾಡಿ ಸಾಕು..!!!

    0 shares
    Share 0 Tweet 0
  • ದೋಷಗಳನ್ನು ಪರಿಹಾರ ಮಾಡುವ ಶ್ರೀ ಸುಬ್ರಹ್ಮಣ್ಯ ಸ್ತೋತ್ರಂ ಭಕ್ತಿಯಿಂದ ಪ್ರಾರ್ಥಿಸಿ ಮನೋಕಾಮನೆಗಳು ಈಡೇರುತ್ತದೆ

    0 shares
    Share 0 Tweet 0
  • ಯಂತ್ರ, ಮಂತ್ರ,ತಂತ್ರಸಾರದ, ಶ್ರೀ ಸಿಗಂದೂರ ಚೌಡೇಶ್ವರೀ ತಾಯಿಯಿಂದ ನಮಗೆ ಶ್ರೀ ರಕ್ಷೇ ಪ್ರಾಪ್ತಿ…

    0 shares
    Share 0 Tweet 0
  • ಈ ಒಂದು ದೀಪವನ್ನು ಮನೆಯಲ್ಲಿ ಮೂರು ಮಂಗಳವಾರ ಶುಕ್ರವಾರ ಹಚ್ಚಿ ನೋಡಿ ಸಾಕು ಸಾಕ್ಷಾತ್ ಮಹಾಲಕ್ಷ್ಮೀ ಮನೆಗೆ ಬರ್ತಾಳೆ..

    0 shares
    Share 0 Tweet 0

Saakshatv News

  • Home
  • About Us
  • Contact Us
  • Privacy Policy

© 2026 SaakshaTV - All Rights Reserved | Powered by Kalahamsa Infotech Pvt. ltd.

No Result
View All Result
  • Home
  • Newsbeat
  • State
    • Kalyana karnataka
    • Karavali Karnataka
    • Malenadu Karnataka
    • Mumbai Karnataka
    • Samagra karnataka
    • Hale Mysore
  • Politics
  • National
  • International
  • Crime
  • Cinema
  • Sports
  • Astrology
  • Health
  • More
    • Business
    • Asia Cup 2022
    • Marjala Manthana
    • Cooking
    • Culture
    • GALLERY
    • Saaksha Special
    • Life Style
    • TECHNOLOGY
    • Travel
    • Viral News
    • Bigg Boss 8
    • IPL 2021
    • CPL 2020
    • IPL 2020

© 2026 SaakshaTV - All Rights Reserved | Powered by Kalahamsa Infotech Pvt. ltd.

  • →
  • Telegram